Shree Honnamma Gavi Samsthana Matha

Shree Honnamma Gavi Samsthana Matha Claimed

ಶ್ರೀ ಹೊನ್ನಮ್ಮಗವಿ ಸಂಸ್ಥಾನ ಮಠ

Average Reviews

Description

ಶ್ರೀ ಹೊನ್ನಮ್ಮ ಗವಿ ಸಂಸ್ಥಾನ ಮಠ – ಶಿವಗಂಗೆ

ಕರ್ತೃ – ಶ್ರೀ ಷ.ಬ್ರ. ಜಗದ್ಗುರು ಮರುಳಸಿದ್ದೇಶ್ವರ ಮಹಾಸ್ವಾಮಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟ,ಅದರ ಪರಿಸರ ತನ್ನದೇ ಆದ ಐತಿಹ್ಯವನ್ನು ಸಾರಿ ಹೇಳುತ್ತದೆ. ಕರ್ನಾಟಕದ ಪೌರಾಣಿಕಕ್ಷೇತ್ರಗಳಲ್ಲಿ ಒಂದಾಗಿರುವ ಶಿವಗಂಗೆಯ ಚರಿತ್ರೆಯನ್ನು ಅಗಸ್ತ್ಯ, ಮುದ್ಗಲ ಮತ್ತು ಕಣ್ವಋಷಿಗಳ ಕಾಲದವರೆಗೆ ಕೊಂಡೊಯ್ಯಲಾಗುತ ್ತದೆ. 8ನೇ ಶತಮಾನದಲ್ಲಿಶಂಕರಾಚಾರ್ಯರು ಈ ನೆಲದಲ್ಲಿ ಸಾಧನೆಗೈದಿರುವ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.ಇಂತಹ ಪುಣ್ಯಕ್ಷೇತ್ರದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಹೊನ್ನಮ್ಮ ಗವಿ ಸಂಸ್ಥಾನಮಠವು ಉಜ್ಜಯಿನಿ ಸದ್ದರ್ಮ ಸಿಂಹಾಸನಾ ಪೀಠದ ಶಾಖಾಮಠವಾಗಿ ಬೆಳೆದು ಬಂದಿದೆ.ಶ್ರೀಮಠದ ಸ್ಥಾಪಿತ ಕಾಲಮಾನ ಹಾಗೂ ಇತಿಹಾಸದ ಕುರಿತಂತೆ ಸ್ಪಷ್ಟತೆಯಿಲ್ಲ.ಶ್ರೀಮಠವು ಉಜ್ಜಯಿನಿ ಜಗದ್ಗುರುಗಳಾಗಿದ್ದ ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿಗಳಿಂದಾಗಿ10ನೇ ಶತಮಾನದಲ್ಲಿಯೇ ಸಾ್ಥಪಿತಗೊಂಡಿತೆ ್ತಂದು ಹೇಳಲಾಗುತ ್ತದೆಯಾದರೂದಾಖಲೆಗಳಿಲ್ಲ. ಶ್ರೀಮಠದ ಬಗ್ಗೆ ಲಭ್ಯವಿರುವ ಪುರಾಣದ ಕಥೆ ಈ ರೀತಿ ಇದೆ. ಆದಿಶಕ್ತಿಯಮಠದ ಶಿಕ್ಷಣ ಸಂಸ್ಥೆಗಳುಹಿಂದಿನ ಗುರುಗಳ ಗದ್ದುಗೆಹೊಸಮಠ ಹಳೇಮಠ ಸ್ವರೂಪವಾದ ಹೊನ್ನಮ್ಮದೇವಿ ಇಲ್ಲಿ ನೆಲೆಯೂರಿದ್ದ ರಕ್ತ ಬೀಜಾಸುರ ರಾಕ್ಷಸನನ್ನು ಸಂಹಾರಮಾಡಿದ ನಂತರವೂ ಅದೇ ಉಗ್ರರೂಪದಲ್ಲಿ ಮುಂದುವರೆದು ತನ್ನ ದೃಷ್ಟಿಗೆ ಬಿದ್ದ ಪ್ರಾಣಿಗಳರಕ್ತ ಹೀರಿ ಬಿಡುತ್ತಿದ್ದಳು.ಹೊನ್ನಮ್ಮ ದೇವಿಯ ಉಗ್ರ ಸ್ವರೂಪದಿಂದ ಭಯಭೀತಗೊಂಡಿದ್ದ ಜನರ ಕಷ್ಟಕಳೆಯಲು ಉಜ್ಜಯಿನಿ ಪೀಠದ ಜಗದ್ಗುರುಗಳು ಶಿವಗಂಗೆಗೆ ಆಗಮಿಸಿ ಜನರಿಗೆ ಧೈರ್ಯತುಂಬಿ ಜನರನ್ನು ಕರೆದುಕೊಂಡು ಹೊನ್ನಮ್ಮದೇವಿ ಮುಂದೆ ಬಂದು ನಿಂತು, ನಿನ್ನ ಉಗ್ರಸ್ವರೂಪವನ್ನು ಬಿಟ್ಟು ಶಾಂತಳಾಗಿ ಭಕ್ತರನ್ನು ಉದ್ದರಿಸೆಂದು ಬೇಡಿಕೊಳ್ಳಲು ದೇವಿಯುಶಾಂತಳಾಗಿ ಗುರುಗಳ ಶಕ್ತಿಗೆ ನಮಸ್ಕರಿಸಿದಳು. ಈ ಪವಾಡವು ನಡೆದ ಮೇಲೆ ಉಜ್ಜಯಿನಿಜಗದ್ಗುರುಗಳು ಇಲ್ಲಿ ಶಾಖಾಮಠವನ್ನು ಸ್ಥಾಪಿಸಿ “ಹೊನ್ನಮ್ಮ ಗವಿಮಠ” ಎಂದು ಹೆಸರಿಟ್ಟುಈ ಮಠದ ಮಂದಿರದಲ್ಲಿ ಹೊನ್ನಮ್ಮ ದೇವಿಯನ್ನು ನೆಲೆಗೊಳಿಸಲಾಗಿದೆ ಎಂದು ಶ್ರೀ ಶ್ರೀ108 ಜಗದ್ಗುರು ಶ್ರೀ ಸಿದ್ದಲಿಂಗ ಶಿವಯೋಗೀಶ್ವರ ಪುರಾಣದಲ್ಲಿ ಕರ್ತೃಗಳುಉಲ್ಲೇಖಿಸಿರುವುದನ್ನು ಶಿವಗಂಗಾ ಕ್ಷೇತ್ರ ದರ್ಶನದಲ್ಲಿ ಎಸ್.ಎಂ.ಎಸ್. ಶಿವಾಚಾರ್ಯರುದಾಖಲಿಸಿದ್ದಾರೆ.ಇನ್ನೊಂದು ಪ್ರತೀತಿಯ ಪ್ರಕಾರ ಮೂಲದಲ್ಲಿ ಶ್ರೀಮಠವು ಶ್ರೀ ಸದ್ದರ್ಮಸಿಂಹಾಸನ ಗವಿಮಠ ಎಂದು ಮಾತ್ರ ಹೆಸರಿದ್ದು ಮಠದ ಗುರುಗಳಿಗೂ, ಗವಿಯಶಕ್ತಿದೇವತೆಗೂ ಗವಿಯೇ ತಾಣವಾಗಿ ಮುಂದುವರೆದಿರಬಹುದು. ಕಾಲಾನುಕ್ರಮದಲ್ಲಿಸಾದ್ವಿಯಾದ ಶರಣೆಯೋರ್ವಳು ಗುರುಪರಂಪರೆಯ ಗುರುಗಳ ಬಳಿ ನೆಲೆನಿಂತು ಅವರಸೇವೆ ಮಾಡಿದ್ದಿರಬಹುದು. ಅವಳ ಹೆಸರು ಹೊನ್ನಮ್ಮಳಾಗಿದ್ದು ಆ ಹೆಸರೇ ಜನಪದರಬಾಯಲ್ಲಿ ಶಕ್ತಿದೇವತೆಯ ಪೂಜೆ ನಡೆಯುತ್ತಿದ್ದ ಸ್ಥಳದ ಬಳಿಯಿದ್ದ ಗವಿ ಹೊನ್ನಮ್ಮನಗವಿಯಾಗಿ ಆ ಶಕ್ತಿದೇವತೆ ಹೊನ್ನಾದೇವಿಯಾಗಿ ಕರೆಸಿಕೊಂಡಿರಬಹುದೆಂದು ಹೇಳಲಾಗಿದೆ.ಇವುಗಳಿಗೆ ಆಧಾರವಾಗಿ ಶ್ರೀ ಚನ್ನಮ್ಮ ಎರೇ ಸೀಮೆಯವರಿಂದ ರಚಿತವಾದ “ಶ್ರೀಉದ್ದಾನೇಶ್ವರ ಚರಿತ್ರೆ” ಹಾಗೂ ಚಾವಡಿ ಪ್ರಕಾಶನದವರು ಪ್ರಕಾಶಿಸಿದ “ಶ್ರೀ ಸದ್ದರ್ಮಸಿಂಹಾಸನ ಸಂಸ್ಥಾನ ಹೊನ್ನಮ್ಮ ಗವಿಮಠ” ಎಂಬ ಕೃತಿಗಳನ್ನು ನೀಡಬಹುದು.ಉಜ್ಜಯಿನಿ ಜಗದ್ಗುರುಗಳಿಂದ ಪ್ರಾರಂಭಗೊಂಡಿತೆಂದು ಹೇಳಲಾದ ಮಠದಪರಂಪರೆ ಪೂರ್ಣವಾಗಿ ಲಭ್ಯವಿಲ್ಲ. ಇದುವರೆಗೂ ದೊರಕಿರುವ ಗದ್ದುಗೆಗಳು ಹಾಗೂಉಲ್ಲೇಖಗಳ ಆಧಾರದ ಮೇಲೆ 18 ಜನ ಶ್ರೀಗಳು ಅಧಿಕಾರ ನಡೆಸಿರಬಹುದೆಂದುಹೇಳಲಾಗಿದೆ. 1948ರಲ್ಲಿ ಪಟ್ಟಾಧಿಕಾರ ಪಡೆದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳ ಹಿಂದಿನ ಸ್ವಾಮಿಗಳನ್ನೆಲ್ಲಾ ಶ್ರೀ ಷ.ಬ್ರ. ಗಂಗಾಧರಶಿವಾಚಾರ್ಯ ಮಹಾಸ್ವಾಮಿಗಳೆಂದು ಪಟ್ಟಕಟ್ಟಿರುವುದರಿಂದ ಪರಂಪರೆಯ ಬಗ್ಗೆಸ್ಪಷ್ಟತೆಯಿಲ್ಲ. ಇವರಲ್ಲಿ ಕೊನೆಯವರಾದ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರಕಾಲಮಾನ 1875 ರಿಂದ 1977 ಎಂದು ಗುರುತಿಸಲಾಗಿದೆ. ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳು 1948ರಲ್ಲಿ ಹಿರಿಯ ಗುರುಗಳಿರುವಾಗಲೇ ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿದರು. ಅಲ್ಲಿಯವರೆಗೂ ಶಿವಗಂಗೆಯ ಬೆಟ್ಟದ ಮೇಲೆ ಇದ್ದ ಮಠದ ಕಟ್ಟಡವು ಇವರಪಟ್ಟಾಧಿಕಾರದ ಸಂದರ್ಭದಲ್ಲಿ ಬೆಟ್ಟದ ತಪ್ಪಲಿನಲ್ಲಿ ಮಠದ ಕಟ್ಟಡವನ್ನು ಸ್ಥಾಪಿಸಿ ಇವರಿಗೆಪಟ್ಟಾಧಿಕಾರವನ್ನು ಮಾಡಲಾಯಿತು. ಸುಧೀರ್ಘ ಐವತ್ತೆರಡು ವರ್ಷಗಳ ಕಾಲ ಶ್ರೀಮಠದಆಡಳಿತವನ್ನು ಮುನ್ನಡೆಸಿದ ಶ್ರೀಗಳದು ಸಾರ್ಥಕ ಬದುಕು.ಶ್ರೀ ಸಿದ್ದಲಿಂಗ ಶಿವಾಚಾರ್ಯರು ಅಧಿಕಾರ ಸ್ವೀಕರಿಸಿದ ನಂತರ ಮಠದಚಿತ್ರಣವೇ ಬದಲಾಗಿ ಹೋಯಿತು. ಶ್ರೀಮಠದ ಜಮೀನನ್ನು ವ್ಯವಸಾಯ ಯೋಗ್ಯಗೊಳಿಸಿದಶ್ರೀಗಳು ಹಂತಹಂತವಾಗಿ ಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿದರು. 1963ರಲ್ಲಿಯೇಬಡ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದ ಶ್ರೀಗಳು ಆ ವರ್ಷವೇಸಂಸ್ಕøತ ಪಾಠಶಾಲೆಯನ್ನು ತೆರೆದರು. ಈ ರೀತಿಯಾಗಿ ಪ್ರಾರಂಭಗೊಂಡ ಶ್ರೀಗಳ ಶಿಕ್ಷಣಸೇವೆ ಇಂದು ಸಾವಿರಾರು ಉತ್ತಮ, ಸಂಸ್ಕಾರವಂತ ವಿದ್ಯಾರ್ಥಿಗಳನ್ನು, ಶಿಷ್ಯರನ್ನುರೂಪಿಸಿದೆ. ಸುಧೀರ್ಘ ಕಾಲ ಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ ಶ್ರೀಗಳು1997ರ ನವೆಂಬರ್ 03ರಂದು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಪಟ್ಟಕ್ಕೆ ತಂದು 2005ರ ಅಕ್ಟೋಬರ್20ರಂದು ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ರುದ್ರಮುನಿ ಶಿವಾಚಾರ್ಯರು ಗುರುಗಳ ಹಾದಿಯಲ್ಲಿಮುನ್ನಡೆಯುತ್ತಾ ಮಠವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಶ್ರೀಮಠದಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿರುವ ಶ್ರೀಗಳುಮಠದ ಜಮೀನನ್ನು ಅಭಿವೃದ್ದಿ ಪಡಿಸಿ ಮಠವನ್ನು ಆರ್ಥಿಕವಾಗಿ ಸದೃಡಗೊಳಿಸಿದ್ದಾರೆ.ಮಠದ ಪರಂಪರೆಯ ಗದ್ದುಗೆಗಳನ್ನು ನವೀಕರಿಸಿರುವ ಶ್ರೀಗಳು ಮಠದ ಇತಿಹಾಸವನ್ನುಸಾರುವ ಕುರುಹುಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಶ್ರೀಮಠದಲ್ಲಿ “ಶಿವಕುಮಾರ ಸ್ವಾಮಿಪ್ರಸಾದ ನಿಲಯ”ವಿದ್ದು ನಿತ್ಯ ಪ್ರಸಾದದ ವ್ಯವಸ್ಥೆಯಿದೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
22-07-1977
Place :
ಹೊನ್ನೇನಹಳ್ಳಿ, ನೆಲಮಂಗಲ ತಾ||
Pattadikara :
03-11-1997
Photo :

Programs

ಪ್ರತಿ ಹುಣ್ಣಿಮೆಗೆ ಧಾರ್ಮಿಕ ಗೋಷ್ಠಿ
ಮಕರ ಸಂಕ್ರಾಂತಿಗೆ ಗಿರಿಜಾ ಕಲ್ಯಾಣ
ಯುಗಾದಿ ನಂತರ ಶ್ರೀ ಹೊನ್ನಮ್ಮ ದೇವಿಯ ಜಾತ್ರೆ ಮಹೋತ್ಸವ
ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Institutions

ಸಂಸ್ಕøತ ಪಾಠಶಾಲೆ
ವೇದ ಪಾಠಶಾಲೆ
ಕಿರಿಯ / ಹಿರಿಯ /ಫ್ರೌಢಶಾಲೆ
ಪದವಿಪೂರ್ವ ಕಾಲೇಜು
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಹೊನ್ನಮ್ಮಗವಿ ಸಂಸ್ಥಾನ ಮಠ
ಶಿವಗಂಗೆ - 562 111 ನೆಲಮಂಗಲ
ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ

Map

Near by Places

ದಾಬಸ್ಪೇಟೆ - 7 ಕಿ.ಮೀ.
ತುಮಕೂರು - 26 ಕಿ.ಮೀ.
ನೆಲಮಂಗಲ - 27 ಕಿ.ಮೀ.
ಬೆಂಗಳೂರು - 49 ಕಿ.ಮೀ.

Statistic

483 Views
0 Rating
0 Favorite
6 Shares
error: Content is protected !!