Shree Hondada Matha, Kanasogi

Shree Hondada Matha, Kanasogi Claimed

ಶ್ರೀ ಹೊಂಡದ ಮಠ, ಕಣಸೋಗಿ

Average Reviews

Description

ಶ್ರೀ ಹೊಂಡದ ಮಠ, ಕಣಸೋಗಿ

ಕರ್ತೃ – ಶ್ರೀ ರಾಜಗುರು ಚನ್ನಬಸವ ಸ್ವಾಮಿಗಳು

ಶಿಕಾರಿಪುರ ತಾಲ್ಲೂಕಿನ ಕಣಸೋಗಿ ಗ್ರಾಮವು ತಾಲ್ಲೂಕು ಕೇಂದ್ರದಿಂದಸುಮಾರು 25 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ರಾಜಗುರು ಚನ್ನಬಸವಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪ್ರಾಚೀನ ಹಿನ್ನೆಲೆಯ ಶ್ರೀ ಹೊಂಡದ ಮಠವುಅಸ್ತಿತ್ವದಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಗ್ರಾಮದಲ್ಲಿ ಧಾರ್ಮಿಕಕೇಂದ್ರವಾಗಿ ಕಂಗೊಳಿಸುತ್ತಿದೆ. ಶ್ರೀ ಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀಮಠದ ಕತೃಗುರುಗಳಾದ ಶ್ರೀ ರಾಜಗುರು ಚನ್ನಬಸವ ಸ್ವಾಮಿಗಳ ಕಾಲಹಾಗೂ ಅವರ ನಂತರ ಬಂದಿರಬಹುದಾದ ಪರಂಪರೆಯ ಬಗ್ಗೆ ತಿಳಿದು ಬರುವುದಿಲ್ಲ.ಇದಕ್ಕೆ ಕಾರಣ ಶ್ರೀಮಠವು ಬಹುಕಾಲ ಗುರುಗಳಿಲ್ಲದೇ ಇದ್ದುದು. ಸಧ್ಯ ಶ್ರೀ ಶಿವಾನಂದಶಿವಾಚಾರ್ಯ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಠದ ಆಡಳಿತವನ್ನುವಹಿಸಿಕೊಂಡು ಭಕ್ತರ ಸಹಕಾರದೊಂದಿಗೆ ಹಾಗೂ ಪಂಚಪೀಠಗಳ ಜಗದ್ಗುರುಗಳಆಶಯದೊಂದಿಗೆ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಶ್ರೀಗಳುಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷಪೂಜೆ ಕೈಗೊಳ್ಳುತ್ತಾರೆ. ಹಾಗೆಯೇ ನವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳುಆಚರಣೆಯಲ್ಲಿದ್ದು ಮಠದ ಭಕ್ತರು ಪಾಲ್ಗೊಂಡು ಶ್ರೀಗಳ ದರ್ಶನ ಪಡೆಯುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಪೂಜೆ. ಹಿರಿಯ ಗುರುಗಳ ಪುಣ್ಯಾರಾಧನೆ. ನವರಾತ್ರಿಗೆ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಹೊಂಡದ ಮಠ, ಕಣಸೋಗಿ ಕೊಳಗಿ ಪೋಸ್ಟ್ - 577 433 ಶಿಕಾರಿಪುರ ತಾ., ಶಿವಮೊಗ್ಗ ಜಿ.

Map

Near by Places

ಶಿರಾಳಕೊಪ್ಪ - 13 ಕಿ.ಮೀ. ಶಿಕಾರಿಪುರ - 25 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!