ಶಿರಸಿ ತಾಲ್ಲೂಕಿನ ಬನವಾಸಿಯು ಪುರಾತನ ಸ್ಥಳವಾಗಿದ್ದು ಮೂರನೇಶತಮಾನದಲ್ಲಿಯೇ ಕದಂಬ ರಾಜಮನೆತನದ ರಾಜಧಾನಿಯಾಗಿ ವಿಖ್ಯಾತವಾಗಿತ್ತು. ಇಂತಹಐತಿಹಾಸಿಕ ಸ್ಥಳವು ವೀರಶೈವ ಧರ್ಮದ ತವರೂರು ಎಂದು ಹೇಳಿದರೆ ತಪ್ಪಾಗಲಾರದು.ಕಾರಣ ಅಲ್ಲಮಪ್ರಭುಗಳಿಗೆ ಬನವಾಸಿಯ ಸಂಬಂಧ ನಿಕಟವಾಗಿರುವುದು. ಇಂತಹ ಪ್ರಸಿದ್ದಸ್ಥಳದಲ್ಲಿ ಮಧುಕೇಶ್ವರ ದೇವಸ್ಥಾನದ ಬಳಿಯಲ್ಲೇ ಅಸ್ತಿತ್ವದಲ್ಲಿರುವ ಶ್ರೀ ಹೊಳೆಮಠವುಶ್ರೀಮಂತ ಪರಂಪರೆಯನ್ನು ಹೊಂದಿದೆ.ಮೊದಲು ಬನವಾಸಿಯ ಹೊರವಲಯದಲ್ಲಿ ವರದಾನದಿ ದಂಡೆ ಮೇಲೆಸ್ಥಾಪಿತಗೊಂಡಿದ್ದ ಶ್ರೀಮಠವು ಕಾಲಾನಂತರ ನದಿಯ ನೆರೆ ಹಾವಳಿ ಕಾರಣದಿಂದ ಊರಮಧ್ಯಭಾಗಕ್ಕೆ ಸ್ಥಳಾಂತರಗೊಂಡಿತೆಂದು ತಿಳಿದುಬರುತ್ತದೆ. ಈ ಕಾರಣದಿಂದಾಗಿ ಶ್ರೀ ಮಠಕ್ಕೆಶ್ರೀ ಹೊಳೆಮಠವೆಂಬ ಹೆಸರು ಬಂದಿದೆ. ಹೊಳೆದಡದಿಂದ ಸ್ಥಳಾಂತರಗೊಂಡಿದ್ದರಿಂದಮಠದ ಪೂರ್ವೇತಿಹಾಸದ ಬಗ್ಗೆ ನಿಖರವಾದ ಮಾಹಿತಿಗಳಿಲ್ಲ.ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಶ್ರೀ.ಮ.ನಿ.ಪ್ರ, ರುದ್ರಸ್ವಾಮಿಗಳುಶ್ರೀ.ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು, ಶ್ರೀ.ಮ.ನಿ.ಪ್ರ. ಸಿದ್ದವೀರ ಸ್ವಾಮಿಗಳು ಈರೀತಿಯಾಗಿ ಪರಂಪರೆ ದೊರೆಯುತ್ತದೆ. ಶ್ರೀ ಸಿದ್ದವೀರ ಮಹಾಸ್ವಾಮಿಗಳುಪವಾಡಪುರುಷರಾಗಿದ್ದು ತಮ್ಮ ಯೋಗ ಸಾಧನೆಯಿಂದ ನೂರಾಹದಿನೇಳು ವರ್ಷ ಬಾಳಿಮಠ ಹಾಗೂ ಸಮಾಜವನ್ನು ಮುನ್ನಡೆಸಿದ ಮಹನೀಯರು. ಆನಂತರ ಖಾಲಿಉಳಿದಿರಬಹುದಾದ ಶ್ರೀಮಠವನ್ನು ಸೊರಬ ತಾಲ್ಲೂಕಿನ ಮೂಡಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಮುನ್ನಡೆಸಿ ಈಗಿನ ಶ್ರೀಗಳನ್ನು ಕರೆತಂದು ಪಟ್ಟಾಧಿಕಾರಗೊಳಿಸಿದರು.ಈvನ ಶ್ರೀಗಳಾದ ಶ್ರೀ. ಮ.ನಿ.ಪ್ರ. ನಾಗಭೂಷಣ ಸ್ವಾಮಿಗಳು ಚನ್ನಗಿರಿತಾಲ್ಲೂಕಿನ ಬಸವಪಟ್ಟಣದ ಶಂಕರಗವಿಮಠದಲ್ಲಿ ದೀರ್ಘಾನುಷ್ಠಾನಗೊಂಡ ಸಂಧರ್ಭದಲ್ಲಿಶ್ರೀ ಚನ್ನವೀರ ಮಹಾಸ್ವಾಮಿಗಳು ಕರೆತಂದು 1988ರಲ್ಲಿ ಶ್ರೀಮಠದ ಪಟ್ಟಾಧಿಕಾರದ ಅನುಗ್ರಹನೀಡಿದರು. ಪ್ರಸ್ತುತ ಶ್ರೀಗಳು ಶ್ರೀಮಠವನ್ನು ಸರ್ವತೋಮುಖವಾಗಿ ಅಭಿವೃದ್ದಿಗೊಳಿಸುತ್ತಾಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಾ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ.ಮ.ನಿ.ಪ್ರ. ನಾಗಭೂಷಣ ಸ್ವಾಮಿಗಳು
Date of Birth :
11-11-1962
Place :
ಮುಳತಳ್ಳಿ, ಹಾನಗಲ್ ತಾ||
Pattadikara :
29-1-1988
Photo :
Programs
ಪ್ರತಿ ಅಮವಾಸ್ಯೆಗೆ ಶಿವನುಭವಗೋಷ್ಠಿ, ಆರಾಧನೆ.
ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ
ವೈಶಾಖ ಶುದ್ದ ಪೌರ್ಣಮಿಯಂದು ಚೌಡೇಶ್ವರಿದೇವಿ ರಥೋತ್ಸವ
Photos
Full Address Kannada
ಶ್ರೀ ಹೊಳೆ ಮಠ
ಬನವಾಸಿ - 581318
ಶಿರಸಿ ತಾ||, ಉತ್ತರಕನ್ನಡ ಜಿ||