ಕರ್ತೃ – ಶ್ರೀ ಷ.ಬ್ರ. ಹುಚ್ಚ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ನಗರದಿಂದ 13 ಕಿ.ಮೀ. ದೂರದಲ್ಲಿರುವ ಶ್ರೀನಿವಾಸ ಸರಡಗಿಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಹಿರೇಮಠವು ಪುರಾತನ ಕಾಲದಮಠವಾಗಿದ್ದು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವಶ್ರೀ ಹಿರೇಮಠದ ಕರ್ತೃಗುರುಗಳು ಶ್ರೀ ಷ.ಬ್ರ. ಹುಚ್ಚ ವೀರೇಶ್ವರ ಶಿವಾಚಾರ್ಯಮಹಾಸ್ವಾಮಿಗಳು.ಕರ್ತೃಗುರುಗಳ ಕುಲಮಾನ ಹಾಗು ನಂತರದ ಪರಂಪರೆಯ ಬಗ್ಗೆ ನಿಖರವಾಗಿತಿಳಿದುಬರುವುದಿಲ್ಲ. ಬಹುಶಃ ಶ್ರೀಮಠವು ಆಗಾಗ್ಗೆ ಖಾಲಿ ಉಳಿದಿರುವುದು ಇದಕ್ಕೆಕಾರಣವಾಗಿರಬಹುದು. ಪರಂಪರೆಯಲ್ಲಿ ಈವರೆಗೂ 8 ಕ್ಕೂ ಅಧಿಕ ಶ್ರೀಗಳು ಅಧಿಕಾರನಡೆಸಿರುವುದು ಕಂಡುಬರುತ್ತಿದ್ದು ಸ್ಪಷ್ಟತೆಯಿಲ್ಲ. ಶ್ರೀಮಠದಲ್ಲಿ ಒಟ್ಟು 7 ಗದ್ದುಗೆಗಳನ್ನಕಾಣಬಹುದಾಗಿದ್ದು ನಿತ್ಯಪೂಜೆಗೆ ಒಳಪಟ್ಟಿವೆ. ಪರಂಪರೆಯ ಹಿಂದಿನ ಗುರುಗಳಾದ ಶ್ರೀಷ.ಬ್ರ.ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿ ಈಗ್ಗೆ 65 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ. ಇವರ ನಂತರ ಶ್ರೀಮಠವು 60ವರ್ಷಗಳ ಕಾಲ ಖಾಲಿ ಉಳಿದಿದ್ದು ಮಠದ ವಂಶಸ್ಥರು ಹಾಗೂ ಭಕ್ತರೂ ಶ್ರೀಮಠದಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು 2010ರಜೂನ್ 06ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಬಂದಿದ್ದು ಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಸುಮಾರು 60 ವರ್ಷಗಳ ಕಾಲ ಖಾಲಿ ಉಳಿದಿದ್ದಶ್ರೀಮಠದ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಭಕ್ತರ ಸಹಕಾರದೊಂದಿಗೆಮುನ್ನಡೆಯುತ್ತಿದ್ದಾರೆ. ಶ್ರೀಮಠದ ಗದ್ದುಗೆಗಳನ್ನು ನವೀಕರಣಗೊಳಿಸುವ ಯೋಜನೆಹೊಂದಿರುವ ಶ್ರೀಗಳು ಗದ್ದುಗೆಗಳಿಗೆ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ. ಹಾಗೂ ಚೈತ್ರಮಾಸದಲ್ಲಿ 11 ದಿನಗಳ ಕಾಲ ಪುರಾಣ ಪ್ರವಚನಗಳನ್ನು ಹೇಳಿಸುವ ಶ್ರೀಗಳು ಕೊನೆಯದಿವಸ ಯುಗಾದಿಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
23-05-1975
Place :
ಶ್ರೀನಿವಾಸ ಸರಡಗಿ, ಕಲಬುರಗಿ ತಾ||
Pattadikara :
03-06-2010
Photo :
Programs
ಚೈತ್ರ ಮಾಸದಲ್ಲಿ 11 ದಿನಗಳ ಕಾಲ ಪುರಾಣ ಪ್ರವಚನ ಹಾಗೂ ಕೊನೆ ದಿವಸ ಯುಗಾದಿಯಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಹಿರೇಮಠ
ಶ್ರೀನಿವಾಸ ಸರಡಗಿ - 585 102
ಕಲಬುರಗಿ ತಾ|| ಜಿ||