Shree Hiremtha Kalkere – Virapura, Kalkere

Shree Hiremtha Kalkere – Virapura, Kalkere Claimed

ಶ್ರೀ ಹಿರೇಮಠ ಕಲ್ಕೆರೆ-ವಿರುಪಾಪುರ, ಕಲ್ಕೆರೆ

Average Reviews

Description

ಶ್ರೀ ಹಿರೇಮಠ ಕಲ್ಕೆರೆ-ವಿರುಪಾಪುರ, ಕಲ್ಕೆರೆ

ಕರ್ತೃ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಕಲ್ಕೆರೆ ವಿರುಪಾಪುರ ಅವಳಿ ಗ್ರಾಮಗಳಮದ್ಯಭಾಗದಲ್ಲಿ ಸುಮಾರು 1850ರಲ್ಲಿ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ತನ್ನ ಧಾರ್ಮಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣ ನೆಲೆಗೊಳ್ಳಲುಕಾರಣವಾಗಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸುವ ಮೊದಲು ಬುಕ್ಕಸಾಗರದ ಶ್ರೀ ಕರಿಸಿದ್ದೇಶ್ವರ ಮಠಕ್ಕೆ ಪಟ್ಟಾಧಿಕಾರವಹಿಸಿಕೊಂಡಿದ್ದವರು. ಶ್ರೀಗಳು ತಮ್ಮ ಅನುಷ್ಟಾನ ಬಲದಿಂದ ಭಕ್ತರನ್ನು ಅಪಾರಸಂಖ್ಯೆಯಲ್ಲಿ ಸೆಳೆದು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಅಭಿವೃದ್ದಿಪಡಿಸಿದ್ದು ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡಿದ್ದಾರೆ. ಶ್ರೀಗಳ ಸಮಾದಿ ಗದ್ದುಗೆಯು ಕಲ್ಕೆರೆಗ್ರಾಮದ ಮಧ್ಯಭಾಗದಲ್ಲಿರುವ ಮೂಲ ಮಠದಲ್ಲಿ ಸ್ಥಾಪನೆಯಾಗಿದೆ.ಕರ್ತೃಗುರುಗಳ ನಂತರ ಬಹುಕಾಲ ಶ್ರೀಮಠವು ಖಾಲಿ ಉಳಿದಿದ್ದು ತದನಂತರಶ್ರೀ ಮುದುಕೇಶ್ವರ ಶರಣರು ಕೆಲವು ದಿನ ಶ್ರೀ ಮಠದಲ್ಲಿದ್ದುಕೊಂಡು ಶ್ರೀಮಠದ ಧಾರ್ಮಿಕಕಾರ್ಯಗಳನ್ನು ನಡೆಸಿದ್ದಾರೆ ಆದರೆ ಶ್ರೀಗಳು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿರಲಿಲ್ಲ ಎಂದುತಿಳಿದುಬರುತ್ತದೆ. ಶ್ರೀಗಳು 1972ರಲ್ಲಿ ಲಿಂಗೈಕ್ಯರಾಗಿದ್ದು ಇವರ ಸಮಾದಿ ಗದ್ದುಗೆಸ್ಥಾಪಿತಗೊಂಡು ಪೂಜೆ ನಡೆಯುತ್ತಿದೆ. ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮುದುಕೇಶ್ವರಶಿವಾಚಾರ್ಯ ಸ್ವಾಮಿಗಳು 1982ರ ಫೆಬ್ರವರಿ 21 ರಂದು ಶ್ರೀ ಮಠದ ಅಧಿಕಾರವಹಿಸಿಕೊಂಡು ಬಹು ದಿನಗಳ ಕಾಲ ಖಾಲಿ ಉಳಿದು ಜೀರ್ಣಗೊಂಡಿದ್ದ ಮಠವನ್ನುಅಭಿವೃದ್ದಿಗೊಳಿಸಿದ್ದಾರೆ.ಶ್ರೀ ಷ.ಬ್ರ. ಮುದುಕೇಶ್ವರ ಶಿವಾಚಾರ್ಯರು ಶ್ರೀ ಮಠವನ್ನು ಸರ್ವಾಂಗೀಣವಾಗಿಅಭಿವೃದ್ದಿಗೊಳಿಸುವಲ್ಲಿ ನಿರತರಾಗಿದ್ದು ಶ್ರೀ ಮಠದ ಜಮೀನನ್ನು ಬೇಸಾಯಕ್ಕೆಯೋಗ್ಯಗೊಳಿಸಿ ಕೃಷಿ ಕಾಯಕವನ್ನು ಮಾಡಿಸುತ್ತಿದ್ದು ಶ್ರೀ ಮಠದ ಆರ್ಥಿಕ ಪರಿಸ್ಥಿತಿಯನ್ನುಸುಧಾರಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಗದ್ದುಗೆಗಳಿಗೆ ಪೂಜೆ ನಡೆಯುತ್ತಿದ್ದು ಶ್ರೀಮುಡುಕೇಶ್ವರ ದೇವಾಲಯದಲ್ಲೂ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಬರಲಾಗುತ್ತಿದೆ ಹಾಗೂ ಶ್ರೀ ಮಠದ ಜಾತ್ರಾ ಮಹೋತ್ಸವವು ಶಿವರಾತ್ರಿ ಅಮವಾಸ್ಯೆಗೆನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
ಆಗಸ್ಟ್ 1954
Place :
ವಿರುಪಾಪುರ, ಮುಂಡರಗಿ ತಾ||
Pattadikara :
21-02-1982
Photo :

Programs

ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಹಾಗೂ
ಭಕ್ತಾದಿಗಳಿಂದ ದಾಸೋಹ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ
ಶಿವರಾತ್ರಿ ಅಮವಾಸೆಗೆ ಶ್ರೀಮಠದ ಜಾತ್ರೆ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ

Photos

Full Address Kannada

ಶ್ರೀ ಹಿರೇಮಠ ಕಲ್ಕೆರೆ-ವಿರುಪಾಪುರ,
ಕಲ್ಕೆರೆ ಪೋ. - 582 118
ಮುಂಡರಗಿ ತಾ||, ಗದಗ ಜಿಲ್ಲೆ

Map

Near by Places

ಮುಂಡರಗಿ - 10 ಕಿ.ಮೀ.
ಹಡಗಲಿ - 20 ಕಿ.ಮೀ.
ಗದಗ - 40 ಕಿ.ಮೀ.
ಶಿರಹಟ್ಟಿ - 40 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!