Shree Hiremtha Asuti

Shree Hiremtha Asuti Claimed

ಶ್ರೀ ಹಿರೇಮಠ ಅಸೂಟಿ

Average Reviews

Description

ಶ್ರೀ ಹಿರೇಮಠ ಅಸೂಟಿ

ಕರ್ತೃ – ಶ್ರೀ ಗುರು ದಶಮುಖದಯ್ಯ ಮಹಾಸ್ವಾಮಿಗಳು

ಗದಗ ಜಿಲ್ಲೆ ರೋಣ ತಾಲ್ಲೂಕಿನ ಅಸೂಟಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 18ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮದ್ಯಭಾಗದಲ್ಲಿ ಪುರಾತನ ಕಾಲದಲ್ಲಿ ಶ್ರೀ ಗುರುದಶಮುಖದಯ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳಲಾದ ಶ್ರೀಹಿರೇಮಠ ಅಸ್ತಿತ್ವದಲ್ಲಿದ್ದು ತನ್ನ ವಿಶಿಷ್ಟ ಸಂಪ್ರದಾಯ ಹಾಗೂ ಧಾರ್ಮಿಕಆಚರಣೆಗಳಿಂದಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿ ಮಾಡಿದೆ.ಶ್ರೀಮದ್ ಕಾಶಿ ಪೀಠದ ಶಾಖಾ ಮಠವಾಗಿರುವ ಅಸೂಟಿಯ ಶ್ರೀ ಹಿರೇಮಠವು10ನೇ ಶತಮಾನದಲ್ಲೇ ಸ್ಥಾಪಿತಗೊಂಡಿತೆಂದು ಹಾಗೂ ಕಾಲನಂತರ ಪರಂಪರೆಯುಮುಂದುವರೆಯದೇ ತದನಂತರ ಮತ್ತೆ ಪುನರ್ಸ್ಥಾಪನೆಯಾಗಿ ಮುಂದುವರೆದುಕೊಂಡುಬಂದಿದೆಯೆಂದು ಹೇಳಲಾಗುತ್ತದಾದರೂ ಶ್ರೀಮಠದ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲದಿರುವುದು ಬೇಸರದ ಸಂಗತಿ.ಹಿಂದಿನ ಶ್ರೀಗಳಾದ ವೇ.ಮೂ.ಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀಮಠದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಮಠವು ಅಭಿವೃದ್ದಿ ಕಂಡಿದೆ. ಶ್ರೀಗಳುಧರ್ಮನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಸೆಳೆದು ಶ್ರೀಮಠದವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಶ್ರೀಮಠವು ಸುತ್ತಮುತ್ತಲಿನ 200ಹಳ್ಳಿಗಳಲ್ಲಿ ಭಕ್ತರನ್ನುಹೊಂದಿದ್ದು ಆ ಮೂಲಕ ಪ್ರಭಾವಿಯಾಗಿ ಬೆಳೆದಿದೆ.ಪ್ರಸ್ತುತ ಶ್ರೀಮಠದ ಶ್ರೀಗಳಾದ ಶ್ರೀ.ವೇ. ಮೂ. ರೇವಣ ಸಿದ್ದೇಶ್ವರ ಸ್ವಾಮಿಗಳುಶ್ರಿಮಠದ ಅಧಿಕಾರವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಶ್ರೀಗಳುಗೃಹಸ್ತರಾಗಿದ್ದುಕೊಂಡು ಶ್ರೀಮಠದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಅಭಿವೃದ್ದಿಯ ಜೊತೆಯಲ್ಲಿ ಶ್ರೀಮಠದ ಶಾಖಾ ಮಠಗಳ ಕಡೆಗೂ ಗಮನ ಹರಿಸಿಅಭಿವೃದ್ದಿಗೊಳಿಸುವತ್ತ ಚಿತ್ತ ಹರಿಸಿದ್ದಾರೆ.ಶ್ರಿಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ. ಪ್ರತಿ ಅಮವಾಸ್ಯೆಗೆವಿಶೇಷ ಪೂಜೆಗಳು ನಡೆಯುತ್ತವೆ. ಬಸವ ಜಯಂತಿಯಲ್ಲಿ ಶ್ರೀ ಮಠದ ಜಾತ್ರೆಯುನಡೆಯುತ್ತಿದ್ದು ಆಗ ಶಿವದೀಕ್ಷೆ, ಅಯ್ಯಚಾರ ಸಾಮೂಹಿಕ ವಿವಾಹಗಳ ಜೊತೆಯಲ್ಲಿಧಾರ್ಮಿಕ ಹಾಗೂ ಸಾಮಾಜಿಕವಾಗಿ ವಿಶೇಷ ಕಾರ್ಯಕ್ರಮಗಳುಆಯೋಜನೆಗೊಂಡಿರುತ್ತವೆ.

Swamiji

Swamiji Name :
ಶ್ರೀ ವೇ.ಮೂ.ರೇವಣಸಿದ್ದೇಶ್ವರ ಸ್ವಾಮಿಗಳು
Date of Birth :
31-05-1953
Place :
ಅಸೂಟಿ, ರೋಣ ತಾ.
Photo :

Programs

ಪ್ರತಿ ಅಮಾವಾಸೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಬಸವ ಜಯಂತಿಗೆ ಶ್ರೀ ಮಠದ ಜಾತ್ರೆ ಹಾಗೂ ಶಿವದೀಕ್ಷೆ,
ಅಯ್ಯಚಾರ, ಸಾಮೂಹಿಕ ವಿವಾಹಗಳು ಮತ್ತು ವಿಶೇಷ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಹಿರೇಮಠ
ಅಸೂಟಿ - 582 203
ರೋಣ ತಾ||, ಗದಗ ಜಿಲ್ಲೆ

Map

Near by Places

ಕೊಣ್ಣೂರು - 16 ಕಿ.ಮೀ.
ನರಗುಂದ - 36 ಕಿ.ಮೀ.
ಅಸೂಟಿ ಕ್ರಾಸ್ - 3 ಕಿ.ಮೀ.
ರೋಣ - 18 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!