ಕರ್ತೃ – ಪೂಜ್ಯ ಶ್ರೀ ಕೆಂಜಡೇಶ್ವರ ಮಹಾಸ್ವಾಮಿಗಳು ಗುಡ್ಡದ ಮೇಲೆ ಮಠ
ಸವಣೂರು ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವಮಂತ್ರವಾಡಿ ಗ್ರಾಮದ ಹೊರವಲಯದ ಗುಡ್ಡದ ಮೇಲೆ ಅತ್ಯಂತ ಪ್ರಾಚೀನವಾದ ಮಠವುಅಸ್ತಿತ್ವದಲ್ಲಿದ್ದು ಇತ್ತೀಚೆಗೆ 1926ರಲ್ಲಿ ಪೂಜ್ಯ ಶ್ರೀ ಕೆಂಜಡೇಶ್ವರ ಮಹಾಸ್ವಾಮಿಗಳಿಂದ ಪುನರ್ಸ್ಥಾಪಿತಗೊಂಡು ರಂಭಾಪುರಿ ಶಾಖಾಮಠವಾಗಿ ಬೆಳೆದು ಬಂದಿದೆ.ಹನ್ನೊಂದನೇ ಶತಮಾನದ ಮಧ್ಯಭಾಗದಲ್ಲಿ ಶ್ರೀ ರಂಭಾಪುರಿ ಪೀಠದ ಆಗಿನಜಗದ್ಗುರುಗಳಾದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಭಗವತ್ಪಾದರು ಇಲ್ಲಿನ ಗುಡ್ಡದಮೇಲೆ ಅನುಷ್ಠಾನಗೊಂಡು ಶ್ರೀಮಠವನ್ನು ಸ್ಥಾಪಿಸಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯಸ್ವಾಮಿಗಳನ್ನು ಪ ್ರಥಮ ಗುರುಗಳನ್ನಾಗಿ ಮಾಡಿ ಮುನ್ನಡೆದಿದ್ದಾರೆ ಎಂದುಹೇಳಲಾಗುತ್ತದೆಯಾದರೂ ಅಂದಿನ ಇತಿಹಾಸದ ಬಗ್ಗೆ ಮತ್ತು ನಂತರದ ಪರಂಪರೆ ಬಗ್ಗೆಯಾವುದೇ ಮಾಹಿತಿಗಳು ಲಭ್ಯವಿಲ್ಲ.1926ರಲ್ಲಿ ಶ್ರೀ ಕೆಂಜಡೇಶ್ವರ ಮಹಾಸ್ವಾಮಿಗಳು ಶ್ರೀ ರಂಭಾಪುರಿ ಜಗದ್ಗುರುಗಳಆಶೀರ್ವಾದ ಪಡೆದು ಈ ಪ್ರಾಚೀನ ಮಠದ ಪಟ್ಟಾಧಿಕಾರವನ್ನು ಹೊಂದಿ ಮಠವನ್ನುಪುನರ್ ನಿರ್ಮಿಸಿದ್ದಾರೆ. ಶ್ರೀಗಳು ಸದಾ ಸಂಚಾರಿಗಳಾಗಿ ಮಠವನ್ನು ಮತ್ತು ಸಮಾಜವನ್ನುಬೆಳೆಸಿದ್ದಾರೆ. ಶ್ರೀಗಳು ಧರ್ಮನಿಷ್ಠರಾಗಿದ್ದು ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಭಕ್ತರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ. ಹಾಗೆಯೇ ಗ್ರಾಮದ ಭಕ್ತರು ಹೇಳುವಂತೆ ಶ್ರೀಗಳುಅನೇಕ ಪವಾಡಗಳನ್ನು ನಡೆಸಿ ಭಕ್ತರನ್ನು ಉದ್ಧರಿಸಿದ್ದಾರೆ ಎಂದು ಹೇಳಲಾಗುತ್ತದೆ.ಇಂತಹ ಮಹಾಮಹಿಮರು 1978ರಲ್ಲಿ ಈಗಿನ ಶ್ರೀಗಳಾದ ಶ್ರೀ ಸಿದ್ದರಾಮೇಶ್ವರಶಿವಾಚಾರ್ಯರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು ಲಿಂಗ್ಯಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ವಿದ್ಯಾಭ್ಯಾಸವನ್ನುಮುಂದುವರೆಸಿ ನಂತರ ಶ್ರೀಮಠಕ್ಕೆ ಹಿಂದಿರುಗಿ ಬಂದು ಮಠದ ಸರ್ವಾಂಗೀಣಅಭಿವೃದ್ಧಿಯನ್ನು ನಡೆಸಿದ್ದಾರೆ. ಶ್ರೀಗಳು 2001ರಲ್ಲಿ ಪಟ್ಟವನ್ನು ಅಲಂಕರಿಸಿ ಶ್ರೀ ಕೆಂಜಡೇಶ್ವರಮಹಾಸ್ವಾಮಿಗಳ ಆಶಯದಂತೆ ಮಠವನ್ನು ಮುನ್ನಡೆಸಿದ್ದಾರೆ. ಶ್ರೀಮಠದ ರಥೋತ್ಸವವುಅವರಾತ್ರಿ ಅಮವಾಸ್ಯೆಯಂದು ಜರುಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
24-6-1964
Place :
ಸವಣೂರು ತಾ|| ಹಾವೇರಿ
Pattadikara :
2001
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಅವರಾತ್ರಿ ಅಮವಾಸ್ಯೆಗೆ ರಥೋತ್ಸವ.
ಬೆನಕನ ಅಮವಾಸ್ಯೆ ದಿನ ರಥೋತ್ಸವ, ತೆಪ್ಪೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
Photos
Full Address Kannada
ಶ್ರೀ ಹಿರೇಮಠ ಶ್ರೀ ರೇವಣ ಸಿದ್ದೇಶ್ವರ ಸುಕ್ಷೇತ್ರ
ಮಂತ್ರವಾಡಿ - 581 126
ಸವಣೂರು ತಾ||, ಹಾವೇರಿ ಜಿ||