ಧಾರವಾಡ ಜಿಲ್ಲೆ ಶಿರಕೋಳ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಶ್ರೀಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ.ಚನ್ನಬಸವ ಶಿವಯೋಗಿಗಳು ಸಂಚಾರದಲ್ಲಿ ಶಿರಕೋಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ಮಳೆಇಲ್ಲದೆ ತೊಂದರೆಗೊಳಗಾಗಿದ್ದರು. ಅದನ್ನರಿತ ಶ್ರೀಗಳು ತಮ್ಮ ಅನುಷ್ಠಾನ ಬಲದಿಂದ ಮಳೆತರಿಸಿದರೆಂದು ಗುರುಗಳ ಪ್ರಭಾವಕ್ಕೆ ಒಳಗಾದ ಭಕ್ತರು ಸುತ್ತಲಿನ ಭೂಮಿಯನ್ನು ದಾನ ನೀಡಿಮಠದ ಅಭಿವೃದ್ಧಿಗೆ ಸಹಕಾರಿಯಾದರೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರದಲ್ಲಿ ಅನೇಕ ಶ್ರೀಗಳು ಅಧಿಕಾರಕ್ಕೆ ಬಂದಿದ್ದರೂ ಅವರಕುರಿತು ದಾಖಲೆಗಳಿಲ್ಲ. ಲಭ್ಯ ಮಾಹಿತಿಗಳ ಪ್ರಕಾರ ಈವರೆಗೂ 4 ಜನ ಶ್ರೀಗಳು ಶ್ರೀಮಠದಪಟ್ಟಕ್ಕೆ ಬಂದಿದ್ದು ಈಗಿನ ಶ್ರೀಗಳನ್ನು ಐದನೇ ಶ್ರೀಗಳೆಂದು ಹೇಳಬಹುದು. ಇದಕ್ಕೆಪೂರಕವಾಗಿ ಶ್ರೀಮಠದ ಆವರಣದಲ್ಲಿ 4 ಗದ್ದುಗೆಗಳಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳುಅನುಷ್ಠಾನಪ್ರಿಯರಾಗಿದ್ದು ಸದಾ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಿ 1969ರ ಏಪ್ರಿಲ್24ರಂದು ಲಿಂಗೈಕ್ಯರಾದರು. ಶ್ರೀಗಳು ತಾವಿರುವಾಗಲೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿಕೊಂಡಿದ್ದುಈಗಿನ ಶ್ರೀಗಳು ಶಿವಯೋಗ ಮಂದಿರ ಹಾಗೂ ಕಾಶಿಯಲ್ಲಿ ಸಂಸ್ಕøತ, ಸಾಹಿತ್ಯದಲ್ಲಿಪಾಂಡಿತ್ಯ ಪಡೆದು ಶ್ರೀಮಠಕ್ಕೆ ಮರಳಿದರು.ಶ್ರೀಮಠಕ್ಕೆ ಮರಳಿದ ಶ್ರೀಗಳು ಮಠದ ಅಭಿವೃದ್ಧಿ ಕಾರ್ಯಗಳ ಕಡೆಗೆಗಮನಹರಿಸಿ ಜೀರ್ಣಗೊಂಡಿದ್ದ ಹಳೆಯ ಕಟ್ಟಡವನ್ನು ತೆಗೆಸಿ ನೂತನ ಕಟ್ಟಡವನ್ನುನಿರ್ಮಿಸಿದರು. ಹಿಂದೆ ಕೈಬಿಟ್ಟು ಹೋಗಿದ್ದ ಮಠದ ಆಸ್ತಿಯನ್ನು ಪುನಃ ಗಳಿಸಿ ಶ್ರೀಮಠದಆದಾಯವನ್ನು ಹೆಚ್ಚಿಸಿದ ನಂತರವಷ್ಟೇ 1996ರ ಏಪ್ರಿಲ್ 24ರಂದು ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿದರು. ಶ್ರೀಗಳು ಉತ್ತಮ ಪ್ರವಚನಗಾರರಾಗಿದ್ದು ಅನೇಕ ಕಡೆಗಳಲ್ಲಿ ಪ್ರವಚನ ನೀಡಿಭಕ್ತ ಸಮುದಾಯವನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
17-8-1955
Place :
ಶಿರಕೋಳ, ನವಲಗುಂದ ತಾ||
Pattadikara :
24-4-1996
Programs
ಪ್ರತಿ ಅಮವಾಸ್ಯೆಗೆ ಮತ್ತು ಗುರು ಪೂರ್ಣಿಮೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ, ರುದ್ರಾಭಿಷೇಕ.
ವೈಶಾಖ ಮಾಸ ಶುದ್ಧ ಸಪ್ತಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಜಾತ್ರೆ.
Institutions
ಸಂಸ್ಕøತ ಪಾಠಶಾಲೆ.
Photos
Full Address Kannada
ಶ್ರೀ ಹಿರೇಮಠ ಶಿರಕೋಳ - 580 112
ನವಲಗುಂದ ತಾ||, ಧಾರವಾಡ ಜಿ||