Shree Hirematha, Rajeshwara

Shree Hirematha, Rajeshwara Claimed

ಶ್ರೀ ಹಿರೇಮಠ, ರಾಜೇಶ್ವರ

Average Reviews

Description

ಶ್ರೀ ಹಿರೇಮಠ, ರಾಜೇಶ್ವರ

ಕರ್ತೃ ಶ್ರೀ ಷ.ಬ್ರ. ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಿಂದ 20 ಕಿ.ಮೀ. ಅಂತರದಲ್ಲಿರುವ ರಾಜೇಶ್ವರ ಗ್ರಾಮದ ಮಧ್ಯಭಾಗದಲ್ಲಿ ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬರುತ್ತಿರುವ ಶ್ರೀ ಹಿರೇಮಠವು ತನ್ನಪ್ರಾಚೀನ ಇತಿಹಾಸದಿಂದ, ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮಠದ ಇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಮಠದಲ್ಲಿರುವ ಗದ್ದುಗೆಗಳಆಧಾರದ ಮೇಲೆ ಒಂದು ನಿರ್ಣಯಕ್ಕೆ ಬರಬಹುದು. ಶ್ರೀಮಠದಲ್ಲಿ ಒಟ್ಟು ಹನ್ನೆರಡುಗದ್ದುಗೆಗಳಿದ್ದು ಅವುಗಳ ಪ್ರಾಚೀನತೆ ಆಧಾರದ ಮೇಲೆ ಮಠವು ಸುಮಾರು 600 ವರ್ಷಗಳಇತಿಹಾಸ ಹೊಂದಿರಬಹುದೆಂದು ಅಂದಾಜಿಸಬಹುದು. ಕರ್ತೃಗುರುಗಳೆಂದು ಶ್ರೀ ಷ.ಬ್ರ.ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಗುರುತಿಸಲಾಗಿದ್ದು ಹೆಚ್ಚಿನ ಮಾಹಿತಿಯಉಪಲಬ್ಧತೆಯಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ 12ನೇ ಮಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದ್ದರು. ತ್ರಿಕಾಲ ಪೂಜಾನಿಷ್ಠರಾಗಿ, ವೀರಶೈವ ಧರ್ಮದ ಆಚರಣೆಗಳನ್ನು ಭಕ್ತರಿಗೆಪರಿಚಯಿಸುತ್ತಿದ್ದ ಶ್ರೀಗಳು 1994ರಲ್ಲಿ ಲಿಂಗೈಕ್ಯರಾದರು. ಶ್ರೀಗಳ ಐಕ್ಯಾನಂತರ ಮಠವುನಾಲ್ಕು ವರ್ಷಗಳ ಕಾಲ ಖಾಲಿ ಉಳಿಯಿತು.ಅಲ್ಪ ಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ ಊರಿನ ಭಕ್ತರೇ ನಿರ್ಣಯಿಸಿ 1998ರಏಪ್ರಿಲ್ 20ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಘನಲಿಂಗ ರುದ್ರಮುನಿ ಶಿವಾಚಾರ್ಯಸ್ವಾಮಿಗಳನ್ನು ಹುಡಗಿಯ ಶ್ರೀಮಠದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳಸಾನಿಧ್ಯದಲ್ಲಿ ಪಟ್ಟಕ್ಕೆ ತಂದರು. ಹುಬ್ಬಳ್ಳಿ ಮೂರು ಸಾವಿರ ಮಠ, ರಂಭಾಪುರಿ ಪೀಠ,ಶಿವಯೋಗಿ ಮಂದಿರ ಹಾಗೂ ಬೆಂಗಳೂರಿನ ಮಹಾಂತಿನ ಮಠದಲ್ಲಿ ಶಿಕ್ಷಣ ಪಡೆದಿರುವಶ್ರೀಗಳು ಅಪಾರ ಜ್ಞಾನವುಳ್ಳವರಾಗಿದ್ದಾರೆ. ತಮ್ಮ ಧಾರ್ಮಿಕ ಆಚರಣೆಗಳ ಮೂಲಕಶ್ರೀಮಠವನ್ನು ಹೆಚ್ಚು ಪ್ರಚುರಗೊಳಿಸುತ್ತಿರುವ ಶ್ರೀಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಘನಲಿಂಗ ರುದ್ರಮುನಿ ಶಿವಾಚಾರ್ಯ
Date of Birth :
10-7-1975
Place :
ಗುಂಡಗುರ್ತಿ, ಚಿತ್ತಾಪುರ ತಾ||
Pattadikara :
20-4-1998
Photo :

Programs

ಶ್ರಾವಣ ಮಾಸದಲ್ಲಿ ಒಂದು ವಾರ ‘ಜಪ ಯಜ್ಞ’ ಹಾಗೂ ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು.
ಪ್ರತಿ ವರ್ಷ ಏಪ್ರಿಲ್ 20ಕ್ಕೆ ಪ್ರಸ್ತುತ ಶ್ರೀಗಳ ವರ್ಧಂತಿ ಮಹೋತ್ಸವ.
ನೂಲು ಹುಣ್ಣಿಮೆ ದಿನ ವಿಶೇಷ ‘ರಕ್ಷಾ ಬಂಧನ’ ಕಾರ್ಯಕ್ರಮ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿನಿಲಯ.

Photos

Full Address Kannada

ಶ್ರೀ ಹಿರೇಮಠ
ರಾಜೇಶ್ವರ - 585 331
ಬಸವಕಲ್ಯಾಣ ತಾ||, ಬೀದರ್ ಜಿ||

Map

Near by Places

ಬಸವಕಲ್ಯಾಣ - 20 ಕಿ.ಮೀ.
ಹುಮನಾಬಾದ್ - 10 ಕಿ.ಮೀ.
ಬೀದರ್ - 60 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!