Shree Hirematha, Mulavada

Shree Hirematha, Mulavada Claimed

ಶ್ರೀ ಹಿರೇಮಠ, ಮುಳವಾಡ

Average Reviews

Description

ಶ್ರೀ ಹಿರೇಮಠ, ಮುಳವಾಡ

ಕರ್ತೃ ಲಿಂ. ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು

ವಿಜಯಪುರ ಜಿˉÉ್ಲ ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮವುತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಕಾಲದ್ದೆಂದುಹೇಳˉÁಗಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೆಸರಾಗಿದೆ. ಶ್ರೀಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಹಿರೇಮಠವು ಪುರಾತನ ಕಾಲದ್ದೆಂದು ಹೇಳˉÁದರೂ ಸೂಕ್ತವಾದಆಧಾರಗಳ ಅಲಭ್ಯತೆಯಿಂದ ಸಾಕ್ಷೀಕರಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಶ್ರೀಮಠಪ್ರಾರಂಭವಾದ ನಿರ್ದಿಷ್ಟ ಕಾಲಮಾನ ಯಾವುದು, ನಂತರದ ಪರಂಪರೆಯಲ್ಲಿಬಂದಿರಬಹುದಾದ ಗುರುಗಳು ಯಾರು ಮುಂತಾದ ಯಾವುದೇ ಮಾಹಿತಿಗಳುಲಭ್ಯವಿಲ್ಲದಿರುವುದು ಬೇಸರದ ಸಂಗತಿ.ಲಿಂ. ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ಕತೃಗುರುಗಳೆಂದುಹೇಳˉÁಗುತ್ತಿದ್ದು ಈ ಬಗ್ಗೆ ಸ್ವಲ್ಪ ಮಾಹಿತಿಗಳು ದೊರಕುತ್ತವೆ. ಶ್ರೀಗಳು ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡು, ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು, ಹಾಗೂ ತಮ್ಮ ಅನುಷ್ಠಾನ ಬಲದಿಂದ, ವೀರಶೈವ ಧರ್ಮಾಚರಣೆಗಳಪ್ರಚಾರದಿಂದ ಭಕ್ತರನ್ನು ಸಂಪಾದಿಸಿಕೊಂಡರು. ಶ್ರೀಗಳು ತಮ್ಮ ಅಪಾರ ಭಕ್ತರಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ವಿರೂಪಾಕ್ಷ ದೇವರು ಹಿಂದಿನ ಶ್ರೀಗಳುಲಿಂಗೈಕ್ಯರಾದಾಗ ಶ್ರೀಮಠದ ಉತ್ತಾರಾಧಿಕಾರಿಗಳಾಗಿ ನೇಮಕಗೊಂಡಿದ್ದು ತದನಂತರವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಗಳು ಪ್ರಸ್ತುತ ಕಾಶಿಯಲ್ಲಿ ಅಧ್ಯಯನಶೀಲರಾಗಿದ್ದು ಶ್ರೀಮಠದ ಆವರಣದಲ್ಲಿರುವ ಗದ್ದುಗೆಗಳಿಗೆ ಶ್ರೀಮಠದ ವಂಶಸ್ಥರೇ ಪೂಜಾಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಶ್ರಾವಣ ಮಾಸದ ವಿಶೇಷರುದ್ರಾಭಿಷೇಕ ಪೂಜೆ, ಶ್ರೀ ರೇಣುಕಾಚಾರ್ಯ ಜಯಂತಿಯ ಆಚರಣೆ ಹಾಗೂವಿಜಯದಶಮಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

Swamiji

Swamiji Name :
ಪೂಜ್ಯ ಶ್ರೀ ವಿರೂಪಾಕ್ಷ ದೇವರು
Date of Birth :
6-8-1989
Place :
ಮುಳವಾಡ, ಬಸವನಬಾಗೇವಾಡಿ ತಾ||
Photo :

Programs

ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ.
ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ.
ವಿಜಯದಶಮಿಗೆ ವಿಶೇಷ ಪೂಜೆ.

Photos

Full Address Kannada

ಶ್ರೀ ಹಿರೇಮಠ
ಮುಳವಾಡ - 586 121
ಬಸವನಬಾಗೇವಾಡಿ ತಾ||, ವಿಜಯಪುರ ಜಿ||

Map

Near by Places

ಮುಳವಾಡ ಕ್ರಾಸ್ - 8 ಕಿ.ಮೀ.
ಮನಗೂಳಿ - 10 ಕಿ.ಮೀ.
ಬ.ಬಾಗೇವಾಡಿ - 30 ಕಿ.ಮೀ.
ವಿಜಯಪುರ - 27 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!