ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ಮಧ್ಯಭಾಗದಲ್ಲಿಪುರಾತನ ಕಾಲದಲ್ಲಿ ಶ್ರೀ.ಷ.ಬ್ರ. ಸಂಗನಬಸವ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳˉÁಗಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀಮಠವು 4ನೇ ಶತಮಾನದ್ದೆಂದು ಹೇಳˉÁದರೂ ಸೂಕ್ತ ಆಧಾರಗಳಅಲಭ್ಯತೆಯಿಂದ ಶ್ರೀಮಠದ ಸ್ಥಾಪನೆಯ ನಿಖರವಾದ ಕಾಲಮಾನವನ್ನು ಗುರುತಿಸಲುಸಾಧ್ಯವಾಗುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 18 ಜನ ಶ್ರೀಗಳುಅಧಿಕಾರ ನಡೆಸಿದ್ದು 16ನೇ ಶ್ರೀಗಳಾದ ಶ್ರೀ ಷ.ಬ್ರ. ರೋಣಿಹಾಳು ಸಂಗನಬಸವ ಸ್ವಾಮಿಗಳುಮಹಾತಪಸ್ವಿಗಳಾಗಿದ್ದು ಸುಮಾರು 107 ವರ್ಷಗಳ ಸಾರ್ಥಕ ಜೀವನ ನಡೆಸಿ ಇಂದಿಗೂಜನರ ಮನಸ್ಸಿನಲ್ಲಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಡಾ|| ಮಹಾಂತ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ 1976ರಲ್ಲಿ ಮಹಾಪ್ರಬಂಧವನ್ನು ಮಂಡಿಸಿ ಪಿ.ಹೆಚ್.ಡಿಯನ್ನು ಗಳಿಸಿಕೊಂಡವರು, ಮುಂದೆ 2008ರಲ್ಲಿ ಹರಿಹರದಲ್ಲಿಶ್ರೀ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪಿತಗೊಂಡಾಗ ಶ್ರೀಗಳನ್ನು ಸ್ಥಿರಪೀಠಾಧಿಪತಿಗಳೆಂದು ನೇಮಕ ಮಾಡˉÁಗಿದ್ದು ಶ್ರೀಮಠದ ಹೆಗ್ಗಳಿಕೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯಮಹಾಸ್ವಾಮಿಗಳು 2014ರ ಫೆಬ್ರವರಿ 4 ರಂದು ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು ಹಿಂದಿನ ಗುರುಗಳ ಹಾದಿಯಲ್ಲಿಯೇ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹಾಗೂ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ಏಪ್ರಿˉï-ಮೇತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಆಯೋಜಿಸುತ್ತಾರೆ.
Swamiji
Swamiji Name :
ಶ್ರೀ ಶ್ರೀ ಶ್ರೀ 2008 ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಮನಗೂಳಿ,
Date of Birth :
29-9-1938
Place :
ಮನಗೂಳಿ, ಬ.ಬಾಗೇವಾಡಿ ತಾ|| 17ನೇ ಶ್ರೀಗಳು
Pattadikara :
14-6-1959
Photo :
Swamiji Name :
ಶ್ರೀ ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
17-10-1987
Place :
ನಂದಿಹಾಳ, ಬಸವನಬಾಗೇವಾಡಿ ತಾ||
Pattadikara :
4-2-2014
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ವೈಶಾಖ ಬಹುಳ ಏಕಾದಶಿಯಂದು ಕತೃಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪಾದಪೂಜೆ, ಪುರಾಣ ಪ್ರವಚನ.
ಮಾಘ ಮಾಸದಲ್ಲಿ ಶ್ರೀ ಶ್ರೀ ಶ್ರೀ 2008 ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
Photos
Full Address Kannada
ಶ್ರೀ ಹಿರೇಮಠ
ಮನಗೂಳಿ - 586 122
ಬಸವನಬಾಗೇವಾಡಿ ತಾ||, ವಿಜಯಪುರ ಜಿ||