Shree Hirematha – Malli

Shree Hirematha – Malli Claimed

ಶ್ರೀ ಹಿರೇಮಠ - ಮಳ್ಳಿ

Average Reviews

Description

ಶ್ರೀ ಹಿರೇಮಠ – ಮಳ್ಳಿ

ಕರ್ತೃ ಶ್ರೀ. ಷ.ಬ್ರ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಕೇಂದ್ರದಿಂದ 55 ಕಿ.ಮೀ. ದೂರದಲ್ಲಿರುವಮಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಹಿರೇಮಠವು ಸ್ಥಾಪಿತಗೊಂಡಿದ್ದು ಪ್ರಾಚೀನಪರಂಪರೆಯನ್ನು ಹೊಂದಿದೆ. ಪುರಾತನ ಕಾಲದಲ್ಲಿ ಪೂಜ್ಯ ಶ್ರೀ ಪ.ಬ್ರ.ಗಂಗಾಧರಶಿವಾಚಾರ್ಯ ಮಹಾಸ್ವಾಮಿಗಳು ಸಂಚಾರದಲ್ಲಿ ಇಲ್ಲಿಗೆ ಬಂದು ಅನುಷ್ಠಾನಗೊಂಡಿದ್ದುಭಕ್ತರ ಒತ್ತಾಯ ಪೂರ್ವಕ ಪ್ರೀತಿಗೆ ಸ್ಪಂದಿಸಿ ಮಳ್ಳಿ ಗ್ರಾಮದಲ್ಲಿ ಮಠವನ್ನು ಸ್ಥಾಪಿಸಿದರೆಂದುಹೇಳಲಾಗುತ್ತದೆ. ಶ್ರೀ ಗಂಗಾಧರ ಶಿವಾಚಾರ್ಯರು ಮಹಾತಪಸ್ವಿಗಳಾಗಿ ಶ್ರೀಮಠವನ್ನುಬೆಳೆಸಿ ಲಿಂಗೈಕ್ಯರಾಗಿದ್ದು ಇಂದಿಗೂ ಜನಮಾನಸದಲ್ಲಿ ಬೇರೂರಿದ್ದಾರೆ.ಸುಮಾರು 600 ವರ್ಷ ಇತಿಹಾಸವನ್ನು ಹೊಂದಿರುವ ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಹಿರೇಮಠದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃಗುರುಗಳ ನಂತರದಲ್ಲಿ 27 ಜನಶ್ರೀಗಳು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿರುವುದಾಗಿ ಈಗಿನ ಶ್ರೀಗಳುಅಭಿಪ್ರಾಯಪಡುತ್ತಾರೆ. ಆದರೆ ಸೂಕ್ತ ದಾಖಲೆಗಳ ಕೊರತೆಯಿಂದಾಗಿ ಸ್ಪಷ್ಟವಾಗಿದಾಖಲಿಸಲು ಸಾಧ್ಯವಿಲ್ಲ. ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿ ಭಕ್ತರ ಉದ್ದಾರಕ್ಕೆ ಶ್ರಮಿಸಿದ್ದರು. ಇವರು ಸಂಸ್ಕøತಪಂಡಿತರಾಗಿರಾಜ್ಯಪ್ರಶಸ್ತಿಯನ್ನು ಪಡೆದ ಗೌರವಕ್ಕೆ ಪಾತ್ರರಾಗಿದ್ದು 1995ರ ನವೆಂಬರ್ 29ರಲ್ಲಿಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು2008ರ ಏಪ್ರಿಲ್ 18ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಶ್ರೀಮಠವನ್ನುಸರ್ವತೋಮುಖವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಪ್ರಾಥಮಿಕ ಮತ್ತುಪ್ರೌಢಶಿಕ್ಷಣವನ್ನು ಮಳ್ಳಿ ಗ್ರಾಮದಲ್ಲಿ ಮುಗಿಸಿ, ರಂಭಾಪುರಿ ಪೀಠದ ಶ್ರೀ ರೇಣುಕಾಚಾರ್ಯಗುರುಕುಲದಲ್ಲಿ ಸಂಸ್ಕøತ, ವೇದಾಧ್ಯಯನಗಳನ್ನು ಮಾಡಿದ್ದಾರೆ. ಶ್ರೀಗಳು ಶ್ರೀಮಠಕ್ಕೆಬಂದಂದಿನಿಂದ ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳುವಿಸ್ತಾರಗೊಂಡಿದ್ದು ಶ್ರೀಮಠದ ಜಮೀನನ್ನು ಅಭಿವೃದ್ಧಿಗೊಳಿಸಲಾಗಿದೆ. ಶ್ರೀಮಠದಲ್ಲಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಮಾರ್ಗಶಿರ ಮಾಸದಲ್ಲಿ ಲಿಂ|| ಶ್ರೀ.ಷ.ಬ್ರ.ಸಿದ್ದಲಿಂಗಶಿವಾಚಾರ್ಯರ ಪುಣ್ಯಾರಾಧನೆಯನ್ನು ನಡೆಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
12-04-1983
Place :
ಮಳ್ಳಿ, ಜೇವರ್ಗಿ ತಾ||
Pattadikara :
18-04-2008
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ಶಿವರಾತ್ರಿಗೆ ವಿಶೇಷ ಪೂಜೆ, ಜಾಗರಣೆ
ಮಾರ್ಗಶಿರ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಸಿದ್ದಲಿಂಗ
ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
ಹಾಗೂ ಪುರಾಣ ಪ್ರವಚನ ಮತ್ತು

Photos

Full Address Kannada

ಶ್ರೀ ಹಿರೇಮಠ ಮಳ್ಳಿ - 585 325
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ

Map

Near by Places

ಮಳ್ಳಿ ಕ್ರಾಸ್ - 2 ಕಿ.ಮೀ.
ಚಿಗರಹಳ್ಳಿ ಕ್ರಾಸ್ - 40 ಕಿ.ಮೀ.
ಜೇವರ್ಗಿ - 55 ಕಿ.ಮೀ
ಕಲಬುರಗಿ - 100 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!