Shree Hirematha, Lingadalli

Shree Hirematha, Lingadalli Claimed

ಶ್ರೀ ಹಿರೇಮಠ, ಲಿಂಗದಹಳ್ಳಿ

Average Reviews

Description

ಶ್ರೀ ಹಿರೇಮಠ, ಲಿಂಗದಹಳ್ಳಿ

ಕರ್ತೃ – ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು

ರಾಣೆಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿಯ ಹೊರಭಾಗದ ಕುಮದ್ವತಿ ನದಿದಡದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಹಿರೇಮಠವು ಅಸ್ತಿತ್ವದಲ್ಲಿದೆ. ಶ್ರೀಮಠದ ಮೂಲವು ತಂಬರಹಳ್ಳಿಯಾಗಿದ್ದು, ತುಂಗಭದ್ರಾಆಣೆಕಟ್ಟೆಯಿಂದಾಗಿ ತಂಬರಹಳ್ಳಿಯು ಮುಳುಗಡೆಯಾದ್ದರಿಂದ ಈ ಮಠದ ವಂಶಸ್ಥರುಲಿಂಗದಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಆದರೆ ಮೂಲಮಠ ಸ್ಥಳಾಂತರಗೊಳ್ಳದೆಪರಂಪರೆಯು ಸ್ಥಗಿತಗೊಂಡಿತು. ಈಗಿನ ಶ್ರೀ ವೀರಭದ್ರ ಶಿವಾಚಾರ್ಯರ ಸ್ವಪ್ರಯತ್ನದಿಂದಾಗಿ ಮಠವು ಲಿಂಗದಹಳ್ಳಿಯಲ್ಲಿ ಪುನರಾರಂಭಗೊಂಡಿದೆ.ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಶ್ರೀ ರಂಭಾಪುರಿ ಪೀಠದಶಾಖಾಮಠವಾದ ಶ್ರೀ ಹಿರೇಮಠವನ್ನು ಸ್ಥಾಪಿಸುವುದರ ಮೂಲಕ ನಶಿಸಿಹೋಗುತ್ತಿದ್ದಪುರಾತನ ಕಾಲದ್ದೆಂದು ಹೇಳಲಾದ ತಂಬರಹಳ್ಳಿಯ ಮೂಲಮಠದ ಇತಿಹಾಸವನ್ನುಉಳಿಸಿಕೊಂಡು ವೀರಶೈವ ಧರ್ಮದ ಬೆಳವಣಿಗೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ.ಶ್ರೀ ಮಠದ ಕಟ್ಟಡವನ್ನು ತಮ್ಮ ಅವಶ್ಯಾನುಸಾರವಾಗಿ ನಿರ್ಮಿಸಿಕೊಂಡ ಶ್ರೀಗಳು1998ರ ಡಿಸೆಂಬರ್ 01 ರಂದು ಶ್ರೀ ರಂಭಾಪುರಿ ಜಗದ್ಗುರುಗಳ ಸಮ್ಮುಖದಲ್ಲಿ ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡರು. ಶ್ರೀಗಳು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಲ್ಲಿಮೇಲ್ವಿಚಾರಕ ಹುದ್ದೆಯಲ್ಲಿದ್ದುಕೊಂಡೇ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಅತ್ಯಂತ ಸರಳವಾಗಿ ಜೀವಿಸಿಕೊಂಡೇ ಭಕ್ತರೊಂದಿಗೆ ಸುಮಧುರಒಡನಾಟವನ್ನಿಟ್ಟುಕೊಂಡು ಅವರಿಗೆ ಧರ್ಮಬೋಧನೆಯನ್ನು ಮಾಡುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿ ಶ್ರೀಗಳು ಪ್ರತಿ ಅಮವಾಸ್ಯೆಗೆ “ಧಾರ್ಮಿಕಚಿಂತನ” ಕಾರ್ಯಕ್ರಮವನ್ನು ಹಮ್ಮಿಕೊಂಡು ಉಪನ್ಯಾಸಗಳನ್ನು ಆಯೋಜಿಸುತ್ತಾರೆ.ಶ್ರೀ ಮಠದಲ್ಲಿ ವಿಶೇಷವಾಗಿ ಸ್ಫ್ಪಟಿಕ ಲಿಂಗ, ಹನ್ನೆರಡು ಜ್ಯೋತಿರ್ಲಿಂಗಗಳು,ಹದಿನೆಂಟು ಕಂಬಗಳಲ್ಲಿ ಅಷ್ಠದಶ ಶಕ್ತಿದೇವತೆಗಳು ಹಾಗೂ ಮಧ್ಯದ ಹನ್ನೆರಡು ಕಂಬಗಳಲ್ಲಿದ್ವಾದಶ ರಾಣಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು ಶ್ರೀಮಠದ ರಥೋತ್ಸವವು ಶ್ರೀರೇಣುಕಾಚಾರ್ಯ ಜಯಂತಿಯೊಂದಿಗೆ ಶ್ರೀಮಠದಲ್ಲಿ ಜರುಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
5-2-1966
Place :
ಲಿಂಗದಹಳ್ಳಿ,
Pattadikara :
1-12-1998
Photo :

Programs

ಪ್ರತಿ ಅಮವಾಸ್ಯೆಗೆ ಧಾರ್ಮಿಕ ಚಿಂತನ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭೀಷೇಕ.
ಶಿವರಾತ್ರಿಗೆ ಜಾಗರಣೆ ವಿಶೇಷ ಪೂಜೆ.
ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ, ರಥೋತ್ಸವ, ಶಿವದೀಕÉ್ಷ, ಶೀವಯೋಗ ಶಿಬಿರ, ಸಾಮೂಹಿಕ ವಿವಾಹ,
ವೀರಭದ್ರ ದೇವರ ಗುಗ್ಗಳ, ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು. ಕುಮದ್ವತಿ ನದಿ ದಡದಲ್ಲಿ ಮಠ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ /
ವಿದ್ಯಾರ್ಥಿ ನಿಲಯ
ಸಂಸ್ಕøತ ವೇದ ಪಾಠಶಾಲೆ
ಗೋಶಾಲೆ

Photos

Full Address Kannada

ಶ್ರೀ ಹಿರೇಮಠ ಲಿಂಗದಹಳ್ಳಿ - 581 119
ರಾಣೆಬೆನ್ನೂರು ತಾ., ಹಾವೇರಿ ಜಿ.

Map

Near by Places

ಹರಿಹರ - 18 ಕಿ.ಮೀ.
ಕರೂರು ಕ್ರಾಸ್ - 15 ಕಿ.ಮೀ.
ರಾಣೆಬೆನ್ನೂರು - 16 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!