Shree Hirematha, Ingaleshwara

Shree Hirematha, Ingaleshwara Claimed

ಶ್ರೀ ಹಿರೇಮಠ, ಇಂಗಳೇಶ್ವರ

Average Reviews

Description

ಶ್ರೀ ಹಿರೇಮಠ, ಇಂಗಳೇಶ್ವರ

ಕರ್ತೃ – ಶ್ರೀ ಷ.ಬ್ರ. ಭೃಂಗೇಶ್ವರ ಶಿವಾಚಾರ್ಯ ಸ್ವಾಮಿಗಳು

ಇಂಗಳೇಶ್ವರ ಗ್ರಾಮ ಎಂದಾಕ್ಷಣ ನೆನಪಿಗೆ ಬರುವುದು 12ನೇ ಶತಮಾನದಕˉÁ್ಯಣ ಕ್ರಾಂತಿಯ ರೂವಾರಿ ವಿಶ್ವಗುರು ಮಹಾಮಾನವತಾವಾದಿ ಬಸವಣ್ಣನವರು.ಬಸವಣ್ಣನವರ ತಾಯಿಯ ತವರುಮನೆ ಇಂಗಳೇಶ್ವರವಾಗಿದ್ದು ಇˉÉ್ಲೀ ಬಸವಣ್ಣನವರ ಜನನವಾಗಿದ್ದು ಎಂಬ ನಂಬಿಕೆಯಿದೆ. ಹಾಗೆಯೇ 12ನೇ ಶತಮಾನದ ಜ್ಞಾನದ ಜ್ಯೋತಿಯಾಗಿದ್ದಚನ್ನಬಸವಣ್ಣನ ಹುಟ್ಟೂರಾದ ಇಂಗಳೇಶ್ವರದ ಮದ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಮಠವೇ ಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿರುವ ಶ್ರೀ ಹಿರೇಮಠ.ಶ್ರೀ ಹಿರೇಮಠವು ಪುರಾತನ ಕಾಲದ್ದೆಂದು ಹೇಳˉÁದರೂ ಸೂಕ್ತ ದಾಖˉÉಗಳಿಲ್ಲವಾದ್ದರಿಂದ ಯಾವ ಕಾಲಮಾನದ್ದೆಂದು ಹಾಗೂ ಶ್ರೀಮಠದ ಸ್ಥಾಪಕರು ಯಾರೆಂದು ತಿಳಿದುಬರುವುದಿಲ್ಲ. ಈಗ ಒಂದು ಶತಮಾನದ ಹಿಂದೆ ಜೀವಿತವಿದ್ದ ಶ್ರೀ ಷ.ಬ್ರ. ಭೃಂಗೇಶ್ವರಶಿವಾಚಾರ್ಯರಿಂದ ಮುಂದಿನ ಪರಂಪರೆಯ ಮಾಹಿತಿ ಲಭ್ಯವಿರುವುದರಿಂದ ಅವರನ್ನೇಕರ್ತೃಗುರುಗಳೆಂದು ಕರೆಯಬಹುದು.ಶ್ರೀ ಭೃಂಗೇಶ್ವರ ಶಿವಾಚಾರ್ಯರ ನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು ಧೀರ್ಘಕಾಲ ಶ್ರೀ ಮಠದ ಆಡಳಿತವನ್ನುನಡೆಸಿ ಧಾರ್ಮಿಕ ಆಚರಣೆಗಳನ್ನು ತೀವ್ರಗೊಳಿಸಿದ್ದಾರೆ. ಹಾಗೂ ತಮ್ಮ ಧಾರ್ಮಿಕನಿಷ್ಠೆಯಿಂದ ಭಕ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಮಾನಸದಲ್ಲಿ ನೆˉÉಯೂರಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಭೃಂಗೇಶ್ವರ ಶಿವಾಚಾರ್ಯ ಸ್ವಾಮಿಗಳು 1993ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು, ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರಶ್ರೀಮಠದ ಕಾರ್ಯವ್ಯಾಪ್ತಿಯನ್ನು ವಿಸ್ತಾರಗೊಳಿಸಿ ಭಕ್ತರನ್ನು ಶ್ರೀಮಠಕ್ಕೆ ಸೆಳೆದು ಅವರಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಶ್ರೀಗಳು ಪ್ರತಿಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮುಂತಾದಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಾಗೂ ಆಗಿಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಭೃಂಗೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
22-7-1974
Place :
ಇಂಗಳೇಶ್ವರ, ಬಸವನಬಾಗೇವಾಡಿ ತಾ||
Pattadikara :
30-6-1994
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ವಿವಿಧ ಕಾರ್ಯಕ್ರಮಗಳು
ಆಗಿ ಹುಣ್ಣಿಮೆಗೆ ಲಿಂ. ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ
ಇಂಗಳೇಶ್ವರ - 586 203
ಬಸವನಬಾಗೇವಾಡಿ ತಾ||, ವಿಜಯಪುರ ಜಿ||

Map

Near by Places

ಬ.ಬಾಗೇವಾಡಿ - 11 ಕಿ.ಮೀ.
ಮನಗೂಳಿ - 27 ಕಿ.ಮೀ.
ವಿಜಯಪುರ - 40 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!