Shree Hirematha, Humnabad

Shree Hirematha, Humnabad Claimed

ಶ್ರೀ ಹಿರೇಮಠ, ಹುಮನಾಬಾದ್

Average Reviews

Description

ಶ್ರೀ ಹಿರೇಮಠ, ಹುಮನಾಬಾದ್

ಕರ್ತೃ ಶ್ರೀ ಷ.ಬ್ರ. ಶಿವಯೋಗಿ ಮಹಾಸ್ವಾಮಿಗಳು

ಬೀದರ್ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಹುಮನಾಬಾದ್ ಪಟ್ಟಣವುಪುರಾತನ ವೀರಶೈವ ಧರ್ಮಕೇಂದ್ರವಾಗಿದ್ದು ಈ ಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಶ್ರೀಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವೆನಿಸಿದೆ. ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಹಿರೇಮಠವನ್ನು ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿದ್ದು ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ.ಶ್ರೀಮಠದ ಪರಂಪರೆಯ ಗುರುಗಳ ಬಗ್ಗೆ ನಿಖರವಾದ ದಾಖಲೆಗಳ ಅಲಭ್ಯತೆಇದೆ. ಇದಕ್ಕೆ ಕಾರಣ ಶ್ರೀಮಠವು ಸುಧೀರ್ಘ ಕಾಲ ಖಾಲಿ ಉಳಿದಿರುವುದು. ಹಿಂದಿನಶ್ರೀಗಳಾದ ಶ್ರೀ ಷ.ಬ್ರ. ತಪೋರತ್ನ ಶಿವಯೋಗಿ ಶಿವಾಚಾರ್ಯರು ಮಹಾತಪಸ್ವಿಗಳಾಗಿದ್ದುಲೋಕೋದ್ಧಾರಕ್ಕಾಗಿ ಅನುಷ್ಠಾನಾದಿಗಳನ್ನು ಕೈಗೊಳ್ಳುತ್ತಿದ್ದರು. ತಮ್ಮ ಅನುಷ್ಠಾನ ಶಕ್ತಿಯಿಂದಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದ ಶ್ರೀಗಳು ಸುಮಾರು 60 ವರ್ಷಗಳ ಹಿಂದೆ ಲಿಂಗೈಕ್ಯರಾದರು.ಇವರ ಐಕ್ಯಾನಂತರ ಶ್ರೀಮಠವು ಸುಧೀರ್ಘ 50 ವರ್ಷಗಳ ಕಾಲ ಖಾಲಿ ಉಳಿಯಿತು.ಪ್ರಸ್ತುತ ಶ್ರೀ ಷ.ಬ್ರ. ರೇಣುಕಾ ಗಂಗಾಧರ ಶಿವಾಚಾರ್ಯ ಸ್ವಾಮಿಗಳು 2013ರನವೆಂಬರ್ 22ರಲ್ಲಿ ಶ್ರೀಮಠದ ಪಟ್ಟಾಭಿಷೇಕದ ಅನುಗ್ರಹವನ್ನು ಶ್ರೀಮದ್ ರಂಭಾಪುರಿಜಗದ್ಗುರುಗಳಿಂದ ಸ್ವೀಕರಿಸಿದರು. ಶ್ರೀಗಳು ಗುಲಬರ್ಗಾ ವಿಶ್ವವಿದ್ಯಾನಿಲಯದಲ್ಲಿಬಯೋಟೆಕ್ನಾಲಜಿ ವಿಷಯದ ಮೇಲೆ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಪೂರೈಸಿದ್ದುಅಗಾಧ ಜ್ಞಾನ ಸಂಪಾದಿಸಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಗಮನ ಕೊಡದೇ ಸಾಮಾಜಿಕವಾಗಿಯೂ ಶ್ರೀಮಠವನ್ನು ಕೊಂಡೊಯ್ಯುತ್ತಿದ್ದಾರೆ. ಪ್ರತಿವರ್ಷ ಮಕರ ಸಂಕ್ರಾಂತಿಯಲ್ಲಿಶ್ರೀಮಠದ ವತಿಯಿಂದ ‘ಧರ್ಮರತ್ನ’ ಪ್ರಶಸ್ತಿಯನ್ನು ಅರ್ಹರಿಗೆ, ಸಾಧಕರಿಗೆ ನೀಡಿಗೌರವಿಸಲಾಗುತ್ತಿದೆ. ಮತ್ತು ಶ್ರೀ ಶಿವಯೋಗೇಶ್ವರ ವಿದ್ಯಾಲಯದ ಅಡಿಯಲ್ಲಿ ಪ್ರಾಥಮಿಕಶಾಲೆಯನ್ನು ನಡೆಸುತ್ತಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಭಾಗದ ಬಡ ವಿದ್ಯಾರ್ಥಿಗಳಿಗೋಸ್ಕರ ಯೋಜನೆ ರೂಪಿಸಲಾಗಿದೆ.

Swamiji

Swamiji Name :
ಶ್ರೀ ಷ.ಬ್ರ. ರೇಣುಕಾ ಗಂಗಾಧರ ಶಿವಾಚಾರ್ಯ ಸ್ವಾಮಿಗಳು
Date of Birth :
22-8-1989
Place :
ಹುಮನಾಬಾದ್, ಬೀದರ್ ಜಿ||
Pattadikara :
22-11-2013
Photo :

Programs

ಜನವರಿ ತಿಂಗಳಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ.
ಶ್ರೀ ರೇಣುಕಾ ಜಯಂತಿ ಆಚರಣೆ.
ಮೇ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Institutions

ಕಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಹಿರೇಮಠ ಬಾಲಾಜಿ ಮಂದಿರದ ಹತ್ತಿರ,
ಹುಮನಾಬಾದ್ -585 330
ಹುಮನಾಬಾದ್ ತಾ||, ಬೀದರ್ ಜಿ||

Map

Near by Places

ಬಸವಕಲ್ಯಾಣ - 40 ಕಿ.ಮೀ.
ಭಾಲ್ಕಿ - 40 ಕಿ.ಮೀ.
ಬೀದರ್ - 55 ಕಿ.ಮೀ.

Statistic

67 Views
0 Rating
0 Favorite
0 Share
error: Content is protected !!