Shree Hirematha, chikkanada-Lalasangi

Shree Hirematha, chikkanada-Lalasangi Claimed

ಶ್ರೀ ಹಿರೇಮಠ, ಚಿಕ್ಕನಾದ - ಲಾಳಸಂಗಿ

Average Reviews

Description

ಶ್ರೀ ಹಿರೇಮಠ, ಚಿಕ್ಕನಾದ – ಲಾಳಸಂಗಿ

ಕರ್ತೃ – ಶ್ರೀ ಷ.ಬ್ರ. ಅಜಾತ ಶಿವಾಚಾರ್ಯ ಸ್ವಾಮಿಗಳು

ಇಂಡಿ ತಾಲ್ಲೂಕಿನ ಚಿಕ್ಕನಾದ-ˉÁಳಸಂಗಿ ಗ್ರಾಮಗಳಲ್ಲಿ ಸ್ಥಾಪನೆಗೊಂಡಿರುವ ಶ್ರೀಹಿರೇಮಠವು ಉಜ್ಜಯಿನಿ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಸುಮಾರು 16ನೇ ಶತಮಾನದಲ್ಲಿ ಶ್ರೀ ಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ.ಅಜಾತ ಶಿವಾಚಾರ್ಯ ಸ್ವಾಮಿಗಳು ˉÉೂೀಕಸಂಚಾರ ಮಾಡುತ್ತಾ ˉÁಳಸಂಗಿಗೆ ಬಂದುನೆˉÉಸಿ ಶ್ರೀ ಮಠವನ್ನು ಸ್ಥಾಪಿಸಿದ್ದರು. ಶ್ರೀಗಳು ಪವಾಡ ಪುರುಷರಾಗಿದ್ದು ಭಕ್ತರನ್ನುದ್ದರಿಸಿˉÁಳಸಂಗಿಯಲ್ಲಿ ಲಿಂಗೈಕ್ಯರಾದರು.ಕರ್ತೃಗುರುಗಳಾದ ನಂತರ ಶ್ರೀಮಠದ ಅಧಿಕಾರಕ್ಕೆ ಬಂದಂತಹ ಶ್ರೀ ಷ.ಬ್ರ.ಗುಡೀರಪ್ಪ ಶಿವಾಚಾರ್ಯರು, ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯರು, ಶ್ರೀ ಷ.ಬ್ರ.ಪರ್ವತೇಶ್ವರ ಶಿವಾಚಾರ್ಯರು ಹಾಗೂ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರುಗಳುˉÁಳಸಂಗಿಯಲ್ಲಿಯೇ ಧಾರ್ಮಿಕ ಆಚರಣೆಗಳನ್ನು ನಡೆಸಿ ಭಕ್ತರಿಗೆ ಸನ್ಮಾರ್ಗ ತೋರಿಲಿಂಗೈಕ್ಯರಾಗಿದ್ದು, ಇವರ ಗದ್ದುಗೆಗಳು ˉÁಳಸಂಗಿಯಲ್ಲಿವೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳುಅಧಿಕಾರವಹಿಸಿಕೊಂಡು ಶ್ರೀಮಠದ ಆಡಳಿತವನ್ನು ˉÁಳಸಂಗಿಯಿಂದ ಚಿಕ್ಕನಾದಕ್ಕೆವರ್ಗಾಯಿಸಿ ಶ್ರೀ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ. ಶ್ರೀಗಳುವಾಕ್ಸಿದ್ಧಿ ಪುರುಷರಾಗಿ ತಮ್ಮ ಉಪದೇಶಾಮೃತದಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡಿ 1980 ಜನವರಿ 29 ರಂದು ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳುಶಿವಯೋಗಮಂದಿರ ಹಾಗೂ ಧಾರವಾಡದಲ್ಲಿ ಅಭ್ಯಸಿಸಿದ್ದು ಸ್ನಾತಕೋತ್ತರ ಪದವೀದರರಾಗಿದ್ದಾರೆ. ಶ್ರೀಗಳು 1981ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದುಸಮಾಜವನ್ನು ಧಾರ್ಮಿಕ ತಳಹದಿಯ ಮೇˉÉ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಆವರಣದಲ್ಲಿ ಪುರಾತನ ಕಾಲದ ಗವಿಯು ಅಸ್ತಿತ್ವದಲ್ಲಿದ್ದು ಪರಂಪರೆಯ ಗುರುಗಳೆˉÁ್ಲ ಅಲ್ಲಿಅನುಷ್ಠಾನಗೊಂಡು ಸಿದ್ಧಿಯನ್ನು ಪಡೆದುಕೊಂಡಿದ್ದರು. ಹಾಗೆಯೇ ಈಗಿನ ಶ್ರೀಗಳು ಸಹ1998ರಲ್ಲಿ ಆ ಗವಿಯಲ್ಲಿ ಧೀರ್ಘಾನುಷ್ಠಾನ ಕೈಗೊಂಡು ಸಿದ್ದಿಯನ್ನು ಪಡೆದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
15-7-1966
Place :
ಚಿಕ್ಕನಾದ ಕೆ.ಡಿ., ಇಂಡಿ ತಾ||
Pattadikara :
25-1-1981
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ಅಭಿಷೇಕ ಹಾಗೂ ಪುರಾಣ ಪ್ರವಚನ.
ಮಾಘ ಶುದ್ಧ ದ್ವಾದಶಿಯಂದು ಲಿಂ. ಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ 11 ದಿನಗಳ ಕಾಲ ಪುರಾಣ ಪ್ರವಚನ, ನಾಡಿನ ಹರಗುರುಚರಮೂರ್ತಿಗಳಿಂದ ಆಶೀರ್ವಚನ.

Photos

Full Address Kannada

ಶ್ರೀ ಹಿರೇಮಠ ನಾದ- ಲಾಳಸಂಗಿ,
ಚಿಕ್ಕನಾದ ಕೆ.ಡಿ. ಪೋಸ್ಟ್ - 586 209
ಇಂಡಿ ತಾ||, ವಿಜಯಪುರ ಜಿ||

Map

Near by Places

ಅಲಮೇಲು - 12 ಕಿ.ಮೀ.
ಇಂಡಿ - 20 ಕಿ.ಮೀ.
ವಿಜಯಪುರ - 70 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!