Shree Hirematha, Byahatti

Shree Hirematha, Byahatti Claimed

ಶ್ರೀ ಹಿರೇಮಠ, ಬ್ಯಾಹಟ್ಟಿ

Average Reviews

Description

ಶ್ರೀ ಹಿರೇಮಠ, ಬ್ಯಾಹಟ್ಟಿ

ಕರ್ತೃ ಶ್ರೀ ಷ.ಬ್ರ. ಅನ್ನದಾನೇಶ್ವರ ಶಿವಾಚಾರ್ಯ ಸ್ವಾಮಿಗಳು

ಹುಬ್ಬಳ್ಳಿ ತಾಲ್ಲೂಕು ಕೇಂದ್ರದಿಂದ 16 ಕಿ.ಮೀ. ದೂರದಲ್ಲಿರುವ ಬ್ಯಾಹಟ್ಟಿಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಹಿರೇಮಠವು ಸುಮಾರು 700 ವರ್ಷಗಳ ಇತಿಹಾಸವನ್ನುಹೊಂದಿದೆ. ಶ್ರೀ ಷ.ಬ್ರ. ಅನ್ನದಾನೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದುಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀಮಠದ ಇತಿಹಾಸವು ಪುರಾತನ ಕಾಲದ್ದಾದರೂ ಮಠದ ಪರಂಪರೆಯ ಬಗ್ಗೆನಿಖರತೆಯಿಲ್ಲ. ಲಭ್ಯ ಮಾಹಿತಿಗಳ ಪ್ರಕಾರ ಈ ತನಕ ಸುಮಾರು 9 ಜನ ಶ್ರೀಗಳು ಶ್ರೀಮಠದಅಧಿಕಾರವನ್ನು ಮುನ್ನಡೆಸಿದ್ದಾರೆಂದು ತಿಳಿದುಬರುತ್ತದೆ. ಪುರಾತನ ಕಾಲದಲ್ಲಿ ವಿಸ್ತಾರವಾಗಿಹರಡಿಕೊಂಡಿದ್ದ ಮಠದ ಕಟ್ಟಡವು ಕಾಲಾನಂತರ ನಶಿಸಿ ಹೋಗಿದ್ದು ಈಗ ಮಠದ ಅಗತ್ಯಕ್ಕೆತಕ್ಕಂತೆ ಮೂಲ ಮಠದ ಒಂದು ಭಾಗವನ್ನು ಉಳಿಸಿಕೊಂಡು ನವೀಕರಣ ಮಾಡಲಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯರು ಧರ್ಮನಿಷ್ಠರಾಗಿದ್ದು ಇವರ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿಪಥದತ್ತ ಮುನ್ನಡೆದಿದೆ. ನಶಿಸಿಹೋಗುತ್ತಿದ್ದಮಠದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಶ್ರೀಗಳು ಅಪಾರ ಭಕ್ತ ಬಳಗವನ್ನುಹೊಂದಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿದರು. ಶ್ರೀಮಠದಜಮೀನನ್ನು ಸಾಗುವಳಿಗೊಳಿಸಿ ಆದಾಯ ಮೂಲವನ್ನಾಗಿ ಪರಿವರ್ತಿಸಿದ ಶ್ರೀಗಳು 1994ರಲ್ಲಿ ಲಿಂಗೈಕ್ಯರಾದರು.ಹಿಂದಿನ ಶ್ರೀಗಳ ಕಾಲಾನಂತರ ಸುಮಾರು ಎರಡು ದಶಕಗಳ ಕಾಲ ಖಾಲಿಉಳಿದಿದ್ದ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಬಂದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು. ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ ಶ್ರೀಗಳು ಕುಂಠಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆನೀಡಿದರು. ಶ್ರೀಮಠದಲ್ಲಿ ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಹಾಗೂ ನವರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಪಾರಾಯಣ ನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
3-10-1981
Pattadikara :
27-5-2013
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಪೂಜೆ.
ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ. ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.
ನವರಾತ್ರಿಯಲ್ಲಿ ನಿತ್ಯ ಶ್ರೀದೇವಿ ಪುರಾಣ ಪಾರಾಯಣ.

Full Address Kannada

ಶ್ರೀ ಹಿರೇಮಠ
ಬ್ಯಾಹಟ್ಟಿ - 580 023
ಹುಬ್ಬಳ್ಳಿ ತಾ||, ಧಾರವಾಡ ಜಿ||

Map

Near by Places

ಹೆಬ್ಸೂರು - 10 ಕಿ.ಮೀ.
ಹುಬ್ಬಳ್ಳಿ - 16 ಕಿ.ಮೀ.
ಧಾರವಾಡ - 22 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!