ಗದಗ ಜಿಲ್ಲೆ ರೋಣ ತಾಲ್ಲೂಕಿನ ಬೆನಹಾಳ ಗ್ರಾಮದ ಮಧ್ಯಭಾಗದಲ್ಲಿ ಸುಮಾರು400 ವರ್ಷಗಳ ಇತಿಹಾಸವಿರುವ ಶ್ರೀ. ಮ.ಘ.ಚ. ಚನ್ನಬಸವ ಶಿವಾಚಾರ್ಯರಿಂದಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ಶ್ರೀ ಉಜ್ಜಯಿನಿಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳು ಶ್ರೀ ಚನ್ನಬಸವ ಶಿವಾಚಾರ್ಯರು ತಮ್ಮ ತಪೋಶಕ್ತಿಯಿಂದಾಗಿಶ್ರೀಮಠವನ್ನು ಹೆಚ್ಚು ಪ್ರಚಾರಗೊಳಿಸಿದ್ದಾರೆ. ತಮ್ಮ ಧಾರ್ಮಿಕ ಆಚರಣೆಗಳ ಮೂಲಕಭಕ್ತರನ್ನು ಸೆಳೆದು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದರು ಎಂದುತಿಳಿದುಬರುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗೆ ್ಗ ನಿಖರವಾಗಿತಿಳಿಯುವುದಿಲ್ಲವಾದರೂ ಈಗಿನ ಶ್ರೀಗಳನ್ನು 7ನೇಯವರೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರ ಬಂದ ಎಲ್ಲಾ ಗುರುಗಳು ಶ್ರೀಮಠವನ್ನು ಧಾರ್ಮಿಕಅಚರಣೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಂಗಮೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವುಸರ್ವಾಂಗೀಣವಾಗಿ ಅಭಿವೃದ್ದಿ ಕಂಡಿದೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸಮಾಡಿದವರಾಗಿದ್ದು ತಮ್ಮ ಉಪದೇಶಗಳಿಂದ ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆಮುನ್ನಡೆಸಿದ್ದು ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನು ಮೂಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹಿರಿಯಶ್ರೀಗಳು ಇರುವಾಗಲೇ 1982ರಲ್ಲಿ ಶ್ರೀಮಠಕ್ಕೆ ಉತ್ತರಾದಿಕಾರಿಗಳಾಗಿ ನೆಮಕಗೊಂಡುವಿದ್ಯಾಭ್ಯಾಸಕ್ಕಾಗಿ ಶಿವಯೋಗಮಂದಿರ ಮತ್ತು ತಿರುಪತಿಗಳಿಗೆ ತೆರಳಿ ಸಂಸ್ಕøತವೇದಾದ್ಯಯನ ಮಾಡಿ ಮಠಕ್ಕೆ ಹಿಂದಿರುಗಿದರು. ಶ್ರೀಗಳು 2007ರ ಜನವರಿ 25ರಲ್ಲಿಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಆದಿಬಸವೇಶ್ವರ ಮೂರ್ತಿಯು ಉದ್ಬವವಾಗಿದ್ದು ಇದಕ್ಕೆದೇವಸ್ಥಾನ ನಿರ್ಮಿಸಿ ಪೂಜಿಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ನಿತ್ಯ ಪುರಾಣಪ್ರವಚನಗಳನ್ನು ಆಯೋಜಿಸಲಾಗುತ್ತಿದ್ದು, ಮಾಘ ಶುದ್ದ ಸಪ್ತಮಿಗೆ ಶ್ರೀಗಳ ವಾರ್ಷಿಕೋತ್ಸವಕಾರ್ಯಕ್ರಮಗಳು ನಡೆಯುತ್ತಿವೆ
Swamiji
Swamiji Name :
ಕರ್ತೃ ಶ್ರೀ ಮ.ಘ.ಚ. ಚನ್ನಬಸವ ಶಿವಾಚಾರ್ಯರು
Date of Birth :
01-05-1972
Place :
ಬೆನಹಾಳ, ರೋಣ ತಾ.
Pattadikara :
25-01-2007
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ
ದಸರಾದಲ್ಲಿ ನವರಾತ್ರಿ, ಶ್ರೀ ದೇವಿ ಪುರಾಣ
ಮಾಘ ಶುದ್ಧ ಸಪ್ತಮಿಗೆ ಶ್ರೀಗಳ ಪಟ್ಟಾಧಿಕಾರದ ವಾರ್ಷಿಕೋತ್ಸವ
Photos
Full Address Kannada
ಶ್ರೀ ಹಿರೇಮಠ ಬೆನಹಾಳ,
ಹುನಗುಂಡಿ ಪೋ. - 582 203
ರೋಣ ತಾ||, ಗದಗ ಜಿಲ್ಲೆ