ವಿಜಯಪುರ ಜಿಲ್ಲೆಯಆಸ್ಕಿ ಗ್ರಾಮದಲ್ಲಿ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದುತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀ ಹಿರೇಮಠದಕರ್ತೃಗುರುಗಳು ಮಹಾತಪಸ್ವಿಗಳಾಗಿದ್ದು ಧೀರ್ಘಾನುಷ್ಠಾನ ಪ್ರಿಯರಾಗಿದ್ದರು ಎಂದುಹೇಳˉÁಗಿದೆ. ಶ್ರೀಗಳು ಇಲ್ಲಿ ಮಠವನ್ನು ಸ್ಥಾಪಿಸಿದ ಮೇˉÉ ಭಕ್ತರಿಗೆ ಧರ್ಮೋಪದೇಶಮಾಡುತ್ತಾ ಅನ್ನ ದಾಸೋಹದ ವ್ಯವಸ್ಥೆಯನ್ನು ಮಾಡುತ್ತಿದ್ದುದು ತಿಳಿದುಬರುತ್ತದೆ.ಹೀಗೆ ಕರ್ತೃಗುರುಗಳಿಂದ ಹೆಚ್ಚು ಪ್ರಸಿದ್ದಿಗೆ ಬಂದ ಶ್ರೀ ಹಿರೇಮಠದ ಮುಂದಿನಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದ ಆವರಣದಲ್ಲಿ ಸಿಕ್ಕಿರುವಗದ್ದುಗೆಗಳ ಆಧಾರದ ಮೇˉÉ ಶ್ರೀಮಠದಲ್ಲಿ 6 ಜನ ಗುರುಗಳನ್ನು ಗುರುತಿಸˉÁಗುತ್ತದೆ.ಆದರೆ ಸ್ಪಷ್ಟವಾಗಿ ಯಾವುದೇ ದಾಖˉÉಗಳು ಲಭ್ಯವಿಲ್ಲದಿರುವುದರಿಂದ ಪರಂಪರೆಯ ಬಗ್ಗೆಹೆಚ್ಚು ತಿಳಿದು ಬರುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವೃಷಭೇಂದ್ರ ಶಿವಾಚಾರ್ಯ ಸ್ವಾಮಿಗಳು ಮಹಾಮಹಿಮ ಪುರುಷರಾಗಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡುಈ ಪ್ರಾಂತ್ಯದ ಹಳ್ಳಿಗಳಲ್ಲಿ ಸಂಚರಿಸುತ್ತಾ ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆಹಾಗೂ ಪ್ರತಿ ತಿಂಗಳು ಪುರಾಣ ಪ್ರವಚನಗಳನ್ನು ನಡೆಸಿ ಭಕ್ತರನ್ನು ಸನ್ಮಾರ್ಗದಲ್ಲಿಕೊಂಡೊಯ್ದು 1992 ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಿರೂಪಾಕ್ಷೇಶ್ವರ ಶಿವಾಚಾರ್ಯ ಸ್ವಾಮಿಗಳು1982ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು ಹಿರಿಯ ಗುರುಗಳ ಸೇವೆಹಾಗೂ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು. ಹಿರಿಯ ಶ್ರೀಗಳ ಹಾದಿಯಲ್ಲಿಯೇಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳು ಯುಗಾದಿ ನಂತರಲಿಂ. ಶ್ರೀ ವೃಷಭೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆಯನ್ನು ನಡೆಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ವಿರೂಪಾಕ್ಷೇಶ್ವರ ಶಿವಾಚಾರ್ಯ
Date of Birth :
15-10-1960
Place :
ಸ್ವಾಮಿಗಳು ಅಸ್ಕಿ, ಸಿಂಧಗಿ ತಾ||
Pattadikara :
1982
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಯುಗಾದಿ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Photos
Full Address Kannada
ಶ್ರೀ ಹಿರೇಮಠ
ಅಸ್ಕಿ - 586 118
ಸಿಂಧಗಿ ತಾ||, ವಿಜಯಪುರ ಜಿ||