Shree Hirematha, Ahirsanga

Shree Hirematha, Ahirsanga Claimed

ಶ್ರೀ ಹಿರೇಮಠ, ಅಹಿರಸಂಗ

Average Reviews

Description

ಶ್ರೀ ಹಿರೇಮಠ, ಅಹಿರಸಂಗ

ಕರ್ತೃ – ಶ್ರೀ ಷ.ಬ್ರ. ಬಸಲಿಂಗಯ್ಯ ಶಿವಾಚಾರ್ಯ ಸ್ವಾಮಿಗಳು

ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮವು ತಾಲ್ಲೂಕು ಕೇಂದ್ರದಿಂದ 12 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಕರ್ತೃ ಶ್ರೀ ಷ.ಬ್ರ. ಬಸಲಿಂಗಯ್ಯ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಗ್ರಾಮದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಹಿರೇಮಠವು ಸಕಲ ಧರ್ಮಗಳ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿಪ್ರಸಿದ್ಧಿಗೊಂಡಿದೆ. ಕತೃಗುರುಗಳಾದ ಶ್ರೀ ಬಸಲಿಂಗಯ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮಅನುಷ್ಠಾನ ಬಲದಿಂದ ಭಕ್ತರನ್ನು ಶ್ರೀಮಠಕ್ಕೆ ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.ಕರ್ತೃಗುರುಗಳ ನಂತರ ಬಂದಿರುವ ಇಬ್ಬರು ಸ್ವಾಮಿಗಳ ಬಗ್ಗೆ ನಿಖರವಾದಮಾಹಿತಿಗಳು ಲಭ್ಯವಿಲ್ಲ. ಅನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡವರು ಹಿಂದಿನಗುರುಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ತ್ರಿಕಾಲ ಪೂಜಾನಿಷ್ಠರಾಗಿದ್ದು ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಾ ಅವರನ್ನು ಸನ್ಮಾರ್ಗಕ್ಕೆ ತರಲು ಶ್ರಮಿಸಿ1993ರ ಜನವರಿ 6ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ತಾವಿರುವಾಗˉÉೀ ಶ್ರೀಮಠಕ್ಕೆ ಈಗಿನಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದರು.ಈಗಿನ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತಮ್ಮ ವಿದ್ಯಾಭ್ಯಾಸಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿ 2013ರ ಡಿಸೆಂಬರ್ 12ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿದ್ದಾರೆ.ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿಕಾರ್ಯೋನ್ಮುಖರಾಗಿದ್ದು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪುಷ್ಯಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆಯನ್ನುನಡೆಸುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾˉÉ್ಗೂಂಡುಗುರುಗಳಿಂದ ಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
6-6-1982
Place :
ಅಗರಖೇಡ, ಇಂಡಿ ತಾ||
Pattadikara :
12-12-2013
Photo :

Programs

ಶ್ರೀಗಳಿಂದ ಪ್ರತಿ ಸೋಮವಾರ, ಗುರುವಾರ ಹಾಗೂ ರವಿವಾರ ಭಕ್ತರಿಗೆ ದರ್ಶನ.
ಪುಷ್ಯಮಾಸದಲ್ಲಿ ಲಿಂ. ಶ್ರಿ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಹಿರೇಮಠ ಅಹಿರಸಂಗ - 586 211
ಇಂಡಿ ತಾ||, ವಿಜಯಪುರ ಜಿ||

Map

Near by Places

ರೈಲುನಿಲ್ದಾಣ - 6 ಕಿ.ಮೀ.
ಇಂಡಿ - 12 ಕಿ.ಮೀ.
ವಿಜಯಪುರ - 60 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!