Shree Hirematha Abbigiri

Shree Hirematha Abbigiri Claimed

ಶ್ರೀ ಹಿರೇಮಠ ಅಬ್ಬಿಗೇರಿ

Average Reviews

Description

ಶ್ರೀ ಹಿರೇಮಠ ಅಬ್ಬಿಗೇರಿ

ಕರ್ತೃ – ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು

ಗದಗ ಜಿಲ್ಲೆ ರೋಣ ತಾಲ್ಲೂಕು ಅಬ್ಬಿಗೇರಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 12ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಬ್ಬಿಗೇರಿ – ನರೇಗಲ್ಲುರಸ್ತೆಯಲ್ಲಿರುವ ಶ್ರೀ ಹಿರೇಮಠವು (ಶ್ರೀ ರೇಣುಕಾಚಾರ್ಯ ಮಂದಿರ) ತನ್ನ ಪುರಾತನಪರಂಪರೆಯಿಂದ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದಲ್ಲಿ ಹೆಸರುವಾಸಿಯಾಗಿದೆ. ಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವಶ್ರೀ ಹಿರೇಮಠವು ಶ್ರೀ. ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿದೆ. ಆದರೆ ಶ್ರೀಗಳ ಕಾಲಮಾನದ ಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲ.ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಜೀವಂತ ಸಮಾದಿಯಾದರೆಂದುಹೇಳಲಾಗಿದ್ದು ಕರ್ತೃಗದ್ದುಗೆಯ ಮೇಲೆ ಲಿಂಗವನ್ನು ಸ್ಥಾಪಿಸಿ ಬೆಳ್ಳಿಪಾದುಕೆ ಹಾಗೂಮುಖವಾಡ ಮಾಡಿಸಲಾಗಿದ್ದು ದಿನ ನಿತ್ಯ ಪೂಜಿಸಲ್ಪಡುತ್ತಿದೆ. ಕರ್ತೃಗುರುಗಳ ನಂತರದಪರಂಪರೆಯಲ್ಲಿ 10ಜನ ಶ್ರೀಗಳು ಬಂದಿರಬಹುದೆಂದು ಹೇಳಲಾಗಿದ್ದು 1936ರಲ್ಲಿಪ್ರಕಟವಾಗಿರುವ “ಗುರುವರ್ಗದರ್ಪಣ” ಕೃತಿಯಲ್ಲಿ ಶ್ರೀ ವಿರೂಪಾಕ್ಷ ಶಾಸ್ತ್ರಿಗಳುನಮೂದಿಸಿದ್ದಾರೆ.ಶ್ರೀಮಠದ ಪರಂಪರೆಯ 9ನೇ ಶ್ರೀಗಳಾದ ಶ್ರೀ ಷ.ಬ್ರ. ವೀರಯ್ಯಶಿವಾಚಾರ್ಯರು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರ ಬಗ್ಗೆಮಾತ್ರ ತಿಳಿದು ಬರುತ್ತಿದ್ದು ಉಭಯರೂ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಶ್ರೀ ಹಿರೇಮಠವು ಊರ ಮದ್ಯಭಾಗದಲ್ಲಿಸ್ಥಾಪಿತಗೊಂಡಿದ್ದು ಮಠದ ಆವರಣದಲ್ಲಿ ಒಟ್ಟು ನಾಲ್ಕು ಗದ್ದುಗೆಗಳು ಕಾಣ ಸಿಗುತ್ತವೆ.ಈಗಿನ ಶ್ರೀಗಳು ಊರ ಒಳಗಿನ ಮಠಕ್ಕಿಂತ ಹೆಚ್ಚಾಗಿ ಊರ ಹೊರಗಿನ ಶ್ರೀ ಜಗದ್ಗುರುರೇಣುಕಾಚಾರ್ಯ ಮಂದಿರದಲ್ಲೇ ಹೆಚ್ಚು ಕಾಣಸಿಗುತ್ತಾರೆ.ಪ್ರಸ್ತುತ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು 1970ರ ಜುಲೈ14 ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಪುರಾತನವಾದ ಮಠವನ್ನು ಸುಸ್ಥಿತಿಗೆತರುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳು ಊರ ಒಳಗಿನ ಮಠವನ್ನು ಸರ್ವಾಂಗೀಣವಾಗಿಅಭಿವೃದ್ದಿ ಪಡಿಸಿ ಗದ್ದುಗೆಗಳನ್ನು ನಿರ್ಮಿಸಿರುವದಲ್ಲವೇ ಊರ ಹೊರಗೆ ಶ್ರೀರೇಣುಕಾಚಾರ್ಯ ಮಂದಿರವನ್ನು ಸ್ಥಾಪಿಸಿ ಶ್ರೀ ರೇಣುಕಾಚಾರ್ಯ ಲಿಂಗೋದ್ಬವಮೂರ್ತಿಯನ್ನು ಸ್ಥಾಪಿಸಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ.

Swamiji

Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1952
Place :
ಅಬ್ಬಿಗೇರಿ, ರೋಣ ತಾ.
Pattadikara :
14-07-1970
Photo :

Programs

ಪ್ರತಿ ಅಮಾವಾಸ್ಯೆಗೆ ರುದ್ರಾಭಿಷೇಕ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ಆಷಾಡ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಹಿರೇಮಠ
ಅಬ್ಬಿಗೇರಿ - 582 111
ರೋಣ ತಾ||, ಗದಗ ಜಿಲ್ಲೆ

Map

Near by Places

ಅಬ್ಬಿಗೇರಿ - 2 ಕಿ.ಮೀ.
ನರೇಗಲ್ಲು - 3 ಕಿ.ಮೀ.
ರೋಣ - 12 ಕಿ.ಮೀ.
ಗದಗ - 28 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!