ಕುಷ್ಟಗಿ ತಾಲ್ಲೂಕಿನ ನಿಡಸೇಸಿ ಗ್ರಾಮದಲ್ಲಿ ಶ್ರೀ ಚನ್ನಬಸವ ಶಿವಾಚಾರ್ಯಸ್ವಾಮಿಗಳಿಂದ ಸುಮಾರು 150 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವುಈ ಭಾಗದ ಜನರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಶ್ರೀ ಉಜ್ಜಯಿನಿಪೀಠದ ಶಾಖಾಮಠವಾಗಿ ಬೆಳೆದು ಬಂದಿರುವ ಶ್ರೀ ಹಿರೇಮಠವು ಕರ್ತೃಗುರುಗಳ ಕರ್ತೃತ್ವಶಕ್ತಿಯಿಂದಾಗಿ ಮನೆಮಾತಾಗಿದೆ.ಕರ್ತೃಗುರುಗಳಾದ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಲೋಕ ಸಂಚಾರಕೈಗೊಂಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೆಜ್ಜೆಬಾವಿಯಲ್ಲಿ ನೆಲೆಸಿ ಮಠಸ್ಥಾಪನೆ ಮಾಡಿದ್ದಾರೆ. ತದನಂತರ ಕುಷ್ಟಗಿಗೆ ಬಂದು ಮಠವನ್ನು ಸ್ಥಾಪಿಸಿ ಕೆಲಕಾಲಅನುಷ್ಟಾನ ಕೈಗೊಂಡರು ನಂತರ ನಿಡಸೇಸಿಗೆ ಆಗಮಿಸಿ ತಪೋನುಷ್ಠಾನ ಕೈಗೊಳ್ಳುತ್ತಾರೆ.ಕರ್ತೃಗುರುಗಳು ನಿಡಸೇಸಿಯಲ್ಲಿ ತಪೋನುಷ್ಠಾನ ಕೈಗೊಂಡಿದ್ದಾಗ ಗುರುಗಳತಪೋಶಕ್ತಿಗೆ ಮನಸೋತ ಭಕ್ತರು ಗುರುಗಳನ್ನು ನಿಡಸೇಸಿಯಲ್ಲಿಯೇ ನೆಲೆಸುವಂತೆಒತ್ತಾಯಿಸಿದರು. ಭಕ್ತರ ಒತ್ತಾಯಕ್ಕೆ ಮಣಿದ ಗುರುಗಳು ಇಲ್ಲಿ ನೆಲೆನಿಂತು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳು ನಿರಂತರವಾಗಿನಡೆಯುವ ವ್ಯವಸ್ಥೆ ಕಲ್ಪಿಸಿದರು. ಶ್ರೀಗಳು ಈ ಸ್ಥಳಗಳಲ್ಲದೇ ತಾವು ಲೋಕಸಂಚಾರದಲ್ಲಿದ್ದಾಗ ಅನುಷ್ಟಾನದಲ್ಲಿದ್ದ ಎಲ್ಲಾ ಕಡೆಗಳಲ್ಲಿಯೂ ಮಠಗಳನ್ನು ಸ್ಥಾಪಿಸಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಈಗಿನವರು 4ನೇ ಶ್ರೀಗಳು. ಹಿಂದಿನಶ್ರೀಗಳಾದ ಶ್ರೀ ಕರಿಬಸವ ಶಿವಾಚಾರ್ಯರು 1952ರಲ್ಲಿ ಪಟ್ಟಾದಿಕಾರಗೊಂಡು ಗೆಜ್ಜೆಬಾವಿ,ಕುಷ್ಟಗಿ ಮತ್ತು ನಿಡಸೇಸಿಯ ಆಡಳಿತವನ್ನು ನೋಡಿಕೊಳ್ಳುತ್ತಾ ಶ್ರೀಮಠವನ್ನುಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ವೀರಶೈವ ಧರ್ಮಾಚರಣೆಗಳಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಚನ್ನಬಸವ ಶಿವಾಚಾರ್ಯರು 2000ದ ಫೆಬ್ರವರಿ 21ರಂದು ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದಾರೆ. ಶ್ರೀಗಳು ಪರಂಪರೆಯ ಗುರುಗಳ ಹಾದಿಯಲ್ಲಿಯೇ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದು ಎಲ್ಲಾಶಾಖಾಮಠಗಳ ಅಭಿವೃದ್ಧಿಗೂ ಯೋಜನೆ ರೂಪಿಸಿಕೊಂಡಿದ್ದಾರೆ.