Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ

ಕರ್ತೃ – ಪೂಜ್ಯ ಶ್ರೀ ಸದಾಶಿವ ದೇಶಿಕರು

ಕೊಪ್ಪಳ ಜಿಲ್ಲೆಯ ಮೈನಳ್ಳಿ-ಬಿಕನಳ್ಳಿ ಗ್ರಾಮಗಳ ಭಕ್ತಿಪೂರ್ವಕ ಶ್ರದ್ಧಾಕೇಂದ್ರವಾದಶ್ರೀ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ಸೃಷ್ಟಿಸಿದೆ. ಶ್ರೀ ಉಜ್ಜಯಿನಿ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಹಿರೇಮಠವು ಡಿಂಬಳದ ಶ್ರೀ ತೋಂಟದ ಜಗದ್ಗುರುಗಳಅಪ್ಪಣೆಯಂತೆ ಶ್ರೀ ಸದಾಶಿವ ದೇಶಿಕರಿಂದ ಸ್ಥಾಪಿತಗೊಂಡಿದೆ ಎಂದು ತಿಳಿದುಬರುತ್ತದೆ.ಶ್ರೀ ಸದಾಶಿವ ದೇಶಿಕರ ಪೂರ್ವಜರು ಬನ್ನಿಕೊಪ್ಪದಿಂದ ಮೈನಳ್ಳಿಗೆ ಬಂದವರಾಗಿದ್ದಾರೆ. ಶ್ರೀ ಸದಾಶಿವ ದೇಶಿಕರು ಮಹಾಶಿವಶರಣೆ ಬುಡ್ಡಮ್ಮನವರ ಗುರುಗಳಾಗಿದ್ದರು.ಬುಡ್ಡಮ್ಮ ತಾಯಿಯವರು ಹುಟ್ಟುವ ಮೊದಲೇ ಆ ಮನೆಯವರಿಗೆ ಗುರುಗಳು ನಿಮ್ಮಮನೆಯಲ್ಲಿ ಒಬ್ಬ ಮಹಾ ಶಿವಶರಣೆಯ ಜನನವಾಗುತ್ತದೆ ಎಂದು ತಿಳಿಸಿದ್ದರಂತೆ.ಹಾಗೆಯೇ ಬುಡ್ಡಮ್ಮನವರು ಈ ಭಾಗದ ಶರಣ ಶ್ರೇಷ್ಠರಲ್ಲಿ ಒಬ್ಬರಾಗಿ ಕಂಗೊಳಿಸಿದ್ದಾರೆ.ಶ್ರೀ ಸದಾಶಿವ ದೇಶಿಕರ ನಂತರ ಶ್ರೀ ತೋಟಪ್ಪಯ್ಯ ದೇಶಿಕರು ಶ್ರೀಮಠದಅಧಿಕಾರ ವಹಿಸಿಕೊಂಡಿದ್ದು ತದನಂತರ ಶ್ರೀ ಗುರುಮೂರ್ತಿ ದೇಶಿಕರು ಬಂದಿದ್ದಾರೆ.ಉಭಯರು ಮಹಾಮಹಿಮರಾಗಿದ್ದು ತ್ರಿಕಾಲ ಪೂಜಾನಿಷ್ಠರಾಗಿ ಭಕ್ತರ ಭವರೋಗಗಳನ್ನುದೂರಮಾಡಿದ್ದಾರೆ. ಶ್ರೀ ಗುರುಮೂರ್ತಿ ದೇಶಿಕರು ಗೋವು ಪರಿಪಾಲಕರಾಗಿದ್ದು ಮೌನತಪಸ್ವಿಗಳಾಗಿದ್ದರು. ಶ್ರೀಗಳು ಮುಂದೆ ಬರತಕ್ಕಂತ ಕಾಲಜ್ಞಾನವನ್ನು ಬರೆದುಕೊಡುತ್ತಿದ್ದರಂತೆ.ಇವರ ನಂತರ ಹಿಂದಿನ ಶ್ರೀಗಳಾದ ಶ್ರೀ ಬಿಸರಳ್ಳಿ ವೀರೇಶ ದೇಶಿಕರು ಶ್ರೀಮಠದಪಟ್ಟಕ್ಕೆ ಬಂದಿದ್ದು ಶ್ರೀಗಳು ಮಹಾನ್ ತಪಸ್ವಿಗಳಾಗಿದ್ದರು. ಕೊಪ್ಪಳದ ಶ್ರೀ ಮರಿಶಾಂತವೀರಸ್ವಾಮಿಗಳಿಂದ ಆಶೀರ್ವಾದ ಪಡೆದ ನಂತರ ಶ್ರೀಗಳು ಸರಳ ರೀತಿಯಲ್ಲಿ ಜೀವಿಸಿ ತಮ್ಮಆಹಾರ ಪದ್ಧತಿಯಿಂದ ದೇಹವನ್ನು ದಂಡಿಸುತ್ತಾ ತಮ್ಮ ಕಾಯಕಯೋಗದಿಂದ ಮಠಹಾಗೂ ಸಮಾಜವನ್ನು ಮುನ್ನಡೆಸಿದವರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು2010ರ ಮೇ 26ರಲ್ಲಿ ಶ್ರೀಮಠದ ಅಧಿಕಾರವನ್ನು ಉಜ್ಜಯಿನಿ ಜಗದ್ಗುರು ಶ್ರೀಮರುಸಿದ್ಧರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ವೀಕರಿಸಿ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಸುಮಾರು 20 ವರ್ಷಗಳ ಕಾಲ ಖಾಲಿ ಉಳಿದಿದ್ದ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1976
Place :
ಮೈನಳ್ಳಿ, ಕೊಪ್ಪಳ ತಾ||
Pattadikara :
26-5-2010
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ವೈಶಾಖ ಮಾಸದಲ್ಲಿ ವರ್ಧಂತಿ ಮಹೋತ್ಸವ (ಅಯ್ಯಾಚಾರ, ಲಿಂಗದೀಕ್ಷೆ,
ಸಾಮೂಹಿಕ ವಿವಾಹಗಳು). ಕಾರ್ತೀಕ ಮಾಸದಲ್ಲಿ ದೀಪೋತ್ಸವ.
ನವರಾತ್ರಿಗೆ ಶ್ರೀದೇವಿ ಪುರಾಣ ಪಾರಾಯಣ.

Photos

Full Address Kannada

ಶ್ರೀ ಹಿರೇಮಠ
ಮೈನಳ್ಳಿ ಬಿಕನಳ್ಳಿ - 583238
ಕೊಪ್ಪಳ ತಾ||, ಜಿ||

Map

Near by Places

ಕೊಪ್ಪಳ - 13 ಕಿ.ಮೀ.
ಮುಂಡರಗಿ - 20 ಕಿ.ಮೀ.

Statistic

72 Views
0 Rating
0 Favorite
0 Share
error: Content is protected !!