Shree Hirematha

Shree Hirematha Claimed

ಶ್ರೀ ಹಿರೇಮಠ, ಚನ್ನಗಿರಿ

Average Reviews

Description

ಶ್ರೀ ಹಿರೇಮಠ, ಚನ್ನಗಿರಿ

ಕರ್ತೃ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು

ಚನ್ನಗಿರಿ ಪಟ್ಟಣದಲ್ಲಿ ಸ್ಥಾಪನೆಯಾಗಿರುವ ಶ್ರೀ ಹಿರೇಮಠವು ಪಂಚಪೀಠಗಳಲ್ಲಿಒಂದಾದ ಶ್ರೀ ಕೇದಾರಪೀಠದ ಪರಂಪರೆಯ ಶಿಷ್ಯವರ್ಗದ ಮಠವಾಗಿದ್ದು ತನ್ನ ಧಾರ್ಮಿಕಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಶ್ರೀ ಹಿರೇಮಠವು ಪುರಾತನವಾದಮಠವಾಗಿದ್ದು, ಆಧಾರಗಳು ಲಭ್ಯವಿಲ್ಲದ ಕಾರಣ ಮಠದ ಪರಂಪರೆಯನ್ನು ನಿಖರವಾಗಿಹೇಳಲಾಗುತ್ತಿಲ್ಲ. ಎಂಬತ್ತು ವರ್ಷಗಳ ದೀರ್ಘಕಾಲ ಬದುಕಿದ್ದ ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮಿಗಳಿಗಿಂತ ಪೂರ್ವದ ಮಾಹಿತಿಗಳು ಲಭ್ಯವಿಲ್ಲ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಹಾನ್ ತಪಸ್ವಿಗಳಾಗಿದ್ದು,ಲೌಕಿಕವಾಗಿ ಏನನ್ನೂ ಬಯಸದೆ ಆಧ್ಯಾತ್ಮ ಚಿಂತನೆಯಲ್ಲಿ ತಪೋನುಷ್ಠಾನ ಕೈಗೊಂಡುಸಾಮಾಜಿಕ ಹಾಗೂ ಧಾರ್ಮಿಕ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಭಕ್ತರಿಗೆ ದೀರ್ಘಕಾಲಮಾರ್ಗದರ್ಶನ ನೀಡಿ ಲಿಂಗೈಕ್ಯರಾದರು. ಇವರ ನಂತರ 1992 ರಲ್ಲಿ ಪಟ್ಟಾಧಿಕಾರಗೊಂಡಶ್ರೀನೀಲಕಂಠಲಿಂಗ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಮಠದ ಆಸ್ತಿಯನ್ನು ಕಾನೂನುಬದ್ಧಗೊಳಿಸಲು ಹೋರಾಡಿದರು.ಇವರ ನಂತರ ಈಗಿನ ಶ್ರೀಗಳಾದ ಶ್ರೀ ಕೇದಾರಲಿಂಗ ಶಿವಶಾಂತವೀರಶಿವಾಚಾರ್ಯ ಮಹಾಸ್ವಾಮಿಗಳು 2011ರ ಫೆಬ್ರವರಿ 14 ರಂದು ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಗಳು ಪಟ್ಟಾಧಿಕಾರ ವಹಿಸಿಕೊಂಡ ದಿನದಿಂದಲೂ ಮಠದಲ್ಲಿ ವಿನೂತನವಾದ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಶ್ರೀಗಳು ಮಠದಕಟ್ಟಡ ನಿರ್ಮಾಣದ ಯೋಜನೆಯನ್ನು ಹಾಕಿಕೊಂಡು ಕಾರ್ಯೋನ್ಮುಖಗೊಳಿಸಲುಶ್ರಮಿಸುತ್ತಿದ್ದಾರೆ. ಮಠದ ಭಕ್ತರ ಮನೆಗಳಿಗೆ ಬೇಟಿ ನೀಡಿ ಅವರ ಮನೆಗಳಲ್ಲೇ ಇಷ್ಠಲಿಂಗಪೂಜೆಯ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ ಹಾಗೂ ಮಠವನ್ನು ಆರ್ಥಿಕವಾಗಿಸದೃಢಗೊಳಿಸಲು ಪ್ರಯತ್ನಿಸುತ್ತಿದ್ದಾರೆ.ವಿಶೇಷತೆ: ಶ್ರೀಮಠದಲ್ಲಿ ಶ್ರೀ ಕೇದಾರ ಪೀಠದ ಏಕೋರಾಮರಾಧ್ಯರು, ಶ್ರೀವೀರಭದ್ರಸ್ವಾಮಿ ದೇವಸ್ಥಾನ, ಶ್ರೀ ಭದ್ರಕಾಳಿಯ ದೇವಸ್ಥಾನವಿದೆ.

Swamiji

Swamiji Name :
ಶ್ರೀ ಷ.ಬ್ರ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
3-9-1975
Place :
ಕಾರಿಗನೂರು, ಚನ್ನಗಿರಿ ತಾ.
Pattadikara :
14-2-2011
Photo :

Programs

ಹುಣ್ಣಿಮೆಗೆ ಶಿವಾನುಭವ ಗೋಷ್ಠಿ ಹಾಗೂ ಇಷ್ಠಲಿಂಗ ಪೂಜೆ.
ಪುಷ್ಯ ಮಾಸದಲ್ಲಿ ಶ್ರೀ ಕೇದಾರನಾಥ ಸ್ವಾಮಿ ರಥೋತ್ಸವ, ಶ್ರೀ ಮಠದ ಜಾತ್ರೆ.
ಯುಗಾದಿಯಂದು ಪಂಚಾಂಗ ಶ್ರವಣ.
ವೈಶಾಖ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ.ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ.
ಕಾರ್ತಿಕ ಮಾಸದಲ್ಲಿ ದೀಪೋತ್ಸವ.

Photos

Full Address Kannada

ಶ್ರೀ ಹಿರೇಮಠ
ಚನ್ನಗಿರಿ - 577 213
ದಾವಣಗೆರೆ ಜಿ||

Map

Near by Places

ಚಿತ್ರದುರ್ಗ - 60 ಕಿ.ಮೀ
ಹೊಳಲ್ಕೆರೆ - 30 ಕಿ.ಮೀ
ಭದ್ರಾವತಿ - 32 ಕಿ.ಮೀ
ದಾವಣಗೆರೆ - 58 ಕಿ.ಮೀ

Statistic

11 Views
0 Rating
0 Favorite
0 Share
error: Content is protected !!