ಕರ್ತೃ – ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ದೊಡ್ಡಗುಣಿ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಹಿರೇಮಠವುಪುರಾತನ ಕಾಲದ್ದಾಗಿದ್ದು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ಹಿರೇಮಠವು ಮೊದಲು ಊರ ಮಧ್ಯಭಾಗದಲ್ಲಿದ್ದುಇತ್ತೀಚೆಗೆ ಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಶ್ರೀ ಮಠದ ಸ್ಥಾಪಿತ ಕಾಲಮಾನದ ಬಗ್ಗೆಮಾಹಿತಿಗಳು ಲ¨s À್ಯವಿಲ್ಲವಾದರೂ ಶ್ರೀ ಷ.ಬ್ರ. ನಂದೀಶ ್ವರ ಶಿವಾಚಾರ್ಯಮಹಾಸ್ವಾಮಿಗಳನ್ನು ಕರ್ತೃ ಗುರುಗಳೆಂದು ಗುರುತಿಸಲಾಗಿದೆ.ಶ್ರೀ ಹಿರೇಮಠ ಪೂರ್ವೇತಿಹಾಸದ ಬಗ್ಗೆ ನಿಖರ ದಾಖಲೆಗಳ ಕೊರತೆಯಿದ್ದು ಶ್ರೀಗುರುಲಿಂಗ ಶಿವಾಚಾರ್ಯರ ನಂತರದ ಪರಂಪರೆ ಲಭ್ಯವಿದೆ. ತಮ್ಮ ವಿದ್ವತ್ನಿಂದಪ್ರಸಿದ್ಧರಾಗಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರು ಶ್ರೀ ಮಠವನ್ನು ಅಭಿವೃದ್ಧಿಗೊಳಿಸಿದ್ದರು.ಶ್ರೀ ರಂಭಾಪುರಿ ಪೀಠದ ಜಗದ್ಗುರು ಶ್ರೀ ಶಿವಾನಂದ ಶಿವಾಚಾರ್ಯ ಭಗವತ್ಪಾದರ ಆಪ್ತಶಿಷ್ಯರಾಗಿ ಬೆಳೆದಿದ್ದ ಶ್ರೀಗಳು ಬೀರೂರಿನ ಶಿವಾನಂದಾಶ್ರಮದ ವೇದ ಜ್ಯೋತಿಷ್ಯಪಾಠಶಾಲೆಯ ಅಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಶ್ರೀ ಮಠದ ಅಭಿವೃದ್ಧಿಗಾಗಿ ಮತ್ತುವೀರಶೈವ ಧರ್ಮದ ಬೆಳವಣಿಗೆಗಾಗಿ ಅವಿರತ ಶ್ರಮಿಸಿದ ಶ್ರೀಗಳು 1947ರಲ್ಲಿಲಿಂಗೈಕ್ಯರಾದರು.ಇವರ ನಂತರ 1952ರಲ್ಲಿ ಅಧಿಕಾರಕ್ಕೆ ಬಂದ ಶ್ರೀ ರೇಣುಕಾ ಶಿವಾಚಾರ್ಯಸ್ವಾಮಿಗಳು ಶ್ರೀ ಮಠದ ಧಾರ್ಮಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದರು. ತೋಟವನ್ನುಅಭಿವೃದ್ಧಿಪಡಿಸಿದರು ಹಾಗೂ ಶ್ರೀ ಮಠವನ್ನು ಊರ ಹೊರಗಿನ ತೋಟದಲ್ಲಿದ್ದ ಗುರುಗಳಗದ್ದುಗೆ ಸ್ಥಳಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿ ವಿಶಾಲವಾದ ಕಟ್ಟಡವನ್ನು ನಿರ್ಮಿಸಿಸ್ಥಳಾಂತರಿಸಿದರು. ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು 1987ರಲ್ಲಿಈಗಿನ ಶ್ರೀಗಳನ್ನು ಪಟ್ಟಕ್ಕೆ ತಂದು 1995ರಲ್ಲಿ ಲಿಂಗೈಕ್ಯರಾದರು.1987ರ ನವೆಂಬರ್ 22ರಂದು ಅಧಿಕಾರ ಸ್ವೀಕರಿಸಿದ ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯರು ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶ್ರೀ ಮಠಕ್ಕೆಆಗಮಿಸಿದ ನಂತರ ಹಿರಿಯ ಗುರುಗಳ ಹಾದಿಯಲ್ಲಿ ಶ್ರೀ ಮಠವನ್ನು ಧಾರ್ಮಿಕಆಚರಣೆಗಳೊಂದಿಗೆ ವಿಸ್ತಾರಗೊಳಿಸಿದರು. ಅನೇಕ ಬಾರಿ ಸರ್ವ ಧರ್ಮ ಸಮ್ಮೇಳನಗಳು.ರೈತ ಹಿತ ಚಿಂತನಗೋಷ್ಠಿಗಳನ್ನು ಆಯೋಜಿಸಿರುವ ಶ್ರೀಗಳು ಪ್ರಬಲ ಧಾರ್ಮಿಕ ಚಿಂತಕರು.
Swamiji
Swamiji Name :
ಷ. ಬ್ರ. ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
22-06-1960
Place :
ದೊಡ್ಡಗುಣಿ, ಗುಬ್ಬಿ ತಾ||
Pattadikara :
22-11-1987
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಆಷಾಢ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು
Institutions
ರೇಣುಕ ವಿದ್ಯಾಪೀಠ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಹಿರೇಮಠ ದೊಡ್ಡಗುಣಿ - 572 211 ಗುಬ್ಬಿ ತಾ||, ತುಮಕೂರು ಜಿಲ್ಲೆ