ಶಿಕಾರಿಪುರ ತಾಲ್ಲೂಕಿನ ಸಾಲೂರಿನ ಹೊರಭಾಗದಲ್ಲಿರುವ ಕೆರೆಯ ಮಧ್ಯಸ್ಥಾಪಿತಗೊಂಡಿರುವ ಶ್ರೀ ಸಾಲೂರು ಹಿರೇಮಠವು ಸುಮಾರು 800 ವರ್ಷಗಳಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗಿದೆ. ಶ್ರೀಮಠವು ಶ್ರೀ ಕಾಶೀ ಪೀಠದಶಾಖಾಮಠವಾಗಿದ್ದು, ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಂದ ಸ್ಥಾಪನೆಯಾಗಿದೆ.ಆದರೆ ಶ್ರೀಮಠದ ಇತಿಹಾಸದಲ್ಲಿ ಬಂದಿರಬಹುದಾದ ಗುರುಗಳ ಬಗ್ಗೆನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದ ಆವರಣದಲ್ಲಿ ಐದು ಗದ್ದುಗೆಗಳಿದ್ದು,ಅದರಲ್ಲಿ ನಾಲ್ಕು ಗದ್ದುಗೆಗಳನ್ನು ಗುರುತಿಸಬಹುದಾಗಿದೆ. ಶ್ರೀ ಮಠದ ಗುರುಗಳ ಗದ್ದುಗೆಗಳುಸಾಲೂರಿನಲ್ಲಿ ಅಲ್ಲದೇ ಕರ್ನಾಟಕದಾದ್ಯಂತ ಕಾಣಸಿಗುತ್ತವೆ. ಅವುಗಳಲ್ಲಿ ಮಲೆಮಾದೇಶ್ವರಬೆಟ್ಟದಲ್ಲಿ ಇರುವ ಶಾಖಾಮಠದ, ರಾಣೇಬೆನ್ನೂರು ತಾಲ್ಲೂಕು ಅಸುಂಡಿ ಮಠದಲ್ಲಿರುವಗದ್ದುಗೆಗಳು ಎಂದು ಹೇಳಲಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ಮಠವುಹೆಚ್ಚು ಅಭಿವೃದ್ಧಿಗೊಂಡಿದೆ. ಹಾಗೂ ಶ್ರೀಗಳು ಪವಾಡ ಪುರುಷರಾಗಿದ್ದರೆಂದು ಹೇಳುವಜಾನಪದ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತಿವೆ.ಈಗಿನ ಶ್ರೀಗಳಾದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು 1992ರ ಜೂನ್17 ರಂದು ಪಟ್ಟಾಧಿಕಾರದ ಅನುಗ್ರಹ ಪಡೆದು ಹಿಂದಿನ ಶ್ರೀಗಳ ಆಶಯದಂತೆ ಮಠವನ್ನುಮುನ್ನಡೆಸುತ್ತಿದ್ದಾರೆ. ಹಾಗೆಯೇ ಶ್ರೀಮಠದಲ್ಲಿ ಪ್ರತಿದಿನ ಧಾರ್ಮಿಕ ಆಚರಣೆಗಳ ಜೊತೆಗೆಶಿವರಾತ್ರಿ, ಶ್ರಾವಣ ಮಾಸ ಹಾಗೂ ದಸರಾದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳುಜರುಗುತ್ತವೆ. ಹಾಗೆಯೇ ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿದ್ದು, ನಾಡಿನಾದ್ಯಂತ ಸಂಚರಿಸಿವೀರಶೈವ ಧರ್ಮಾಚರಣೆಯನ್ನು ಪಸರಿಸಿ ಸಮಾಜದ ಏಳಿಗೆಗೆÀ ತಮ್ಮದೇ ಆದಕೊಡುಗೆಯನ್ನು ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
8-6-1971
Place :
ಅಸೊಂಡಿ ರಾಣೆಬೆನ್ನೂರು ತಾ||
Pattadikara :
17-6-1992
Photo :
Programs
ಶಿವರಾತ್ರಿ, ಶ್ರಾವಣಮಾಸ ಹಾಗೂ ದಸರಾದಲ್ಲಿ ವಿಶೇಷ ಪೂಜೆ. ವೈಶಾಖ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Institutions
ಸಂಸ್ಕøತ ಪಾಠಶಾಲೆ
Photos
Full Address Kannada
ಶ್ರೀ ಹಿರೇಮಠ ಸಾಲೂರು - 577 214 ಶಿಕಾರಿಪುರ ತಾ., ಶಿವಮೊಗ್ಗ ಜಿ.