ದಿಂಡದಹಳ್ಳಿಯ ಹೊರಭಾಗದ ಗುಡ್ಡದ ಮೇಲೆ ಶ್ರೀ ಉಜ್ಜಯಿನಿ ಪೀಠದಶಾಖಾಮಠವಾದ ಶ್ರೀ ಹಿರೇಮಠವು ಪ್ರಾಚೀನ ಕಾಲದಲ್ಲಿ ಸ್ಥಾಪನೆಗೊಂಡು ಈ ಭಾಗದಲ್ಲಿಧಾರ್ಮಿಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠವು ಪ್ರಾಚೀನ ಕಾಲದ್ದೆಂದು ಹೇಳಲಾದರೂ ಅದಕ್ಕೆ ಪುರಾವೆಗಳುಸಿಗುವುದಿಲ್ಲ. ಆದರೆ ಇಲ್ಲಿನ ದೇವಸ್ಥಾನಗಳು ಪ್ರಾಚೀನ ಇತಿಹಾಸವನ್ನು ಹೊಂದಿದ್ದು ಅದರಆಧಾರದ ಮೇಲೆ ಶ್ರೀಮಠದ ಕಾಲನಿರ್ಣಯ ಮಾಡಬಹುದು. ಸದ್ಯದಲ್ಲಿ ಶ್ರೀಮಠದಪರಂಪರೆಯನ್ನು ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಶಿವಾನಂದ ಮಹಾಸ್ವಾಮಿಗಳಿಂದಗುರುತಿಸಬಹುದಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನುಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಜೊತೆಗೆ ಅಭಿವೃದ್ಧಿಪಡಿಸಿದ್ದಾರೆ. ಹಾಗೆಯೇಮಠದಲ್ಲಿ ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಗದ್ದುಗೆಯನ್ನು ನಿರ್ಮಿಸಿಕೊಂಡಿದ್ದರು.ಶ್ರೀಗಳು ತಾವಿರುವಾಗಲೇ ಈಗಿನ ಶ್ರೀಗಳಾದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ.ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳುಹಿರಿಯ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿಯೇ ಶ್ರೀಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಪ್ರತಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಗೆ ಸಾಮಾಜಿಕವಾಗಿಯೂಜನಾನುರಾಗಿಯಾಗಿ ಜನರ ಹಾಗೂ ಭಕ್ತರ ಒಡನಾಟದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಹಳೆಯ ಕಟ್ಟಡದ ಜೊತೆಗೆ ಭಕ್ತರ ಸಹಕಾರದೊಂದಿಗೆನೂತನವಾಗಿ ಮಂಟಪ ಮಾದರಿಯಲ್ಲಿ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡನಿರ್ಮಿಸುತ್ತಿದ್ದಾರೆ. ಹಾಗೆಯೇ ಬಂದ ಭಕ್ತಾದಿಗಳಿಗೆ ದಾಸೋಹ ಮತ್ತು ಉಳಿದುಕೊಳ್ಳಲುವ್ಯವಸ್ಥೆ ಮಾಡುತ್ತಿದ್ದಾರೆ. ಶ್ರೀಗಳು ಶ್ರೀಮಠದ ಜೊತೆಯಲ್ಲಿಯೇ ನಾಡಿನ ನಾನಾಭಾಗಗಳಲ್ಲಿರುವ ಆರಕ್ಕೂ ಹೆಚ್ಚು ಮಠಗಳನ್ನು ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಶ್ರೀಗಳಿಂದ ಪ್ರತಿ ಶ್ರಾವಣ ಮಾಸದಲ್ಲಿ “ಮೌನ ಅನುಷ್ಠಾನ”ಜಾರಿಯಲ್ಲಿರುತ್ತದೆ. ಹಾಗೆಯೇ ಆಶ್ವೀಜ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆನಡೆಯುತ್ತದೆ. ಶ್ರೀಮಠದಲ್ಲಿ ಭರತ ಹುಣ್ಣಿಮೆಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
20-8-1979
Place :
ದಿಂಡದಹಳ್ಳಿ, ಶಿಕಾರಿಪುರ ತಾ||
Pattadikara :
13-3-2003
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ. ಭರತ ಹುಣ್ಣಿಮೆಯಂದು ಶ್ರೀಮಠದ ಜಾತ್ರೆ. ಶಿವರಾತ್ರಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ. ಶಾ್ರವಣ ಮಾಸದಲ್ಲಿ ಶ್ರೀಗಳ “ಮೌನ ಅನುಷ್ಠಾನ”. ಶ್ವೀಜ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ.
Institutions
ಸಂಸ್ಕøತ ಪಾಠಶಾಲೆ ಗೋಶಾಲೆ
Photos
Full Address Kannada
ಶ್ರೀ ಹಿರೇಮಠ, ದಿಂಡದಹಳ್ಳಿ ಕಿಟ್ಟದಹಳ್ಳಿ ಪೋಸ್ಟ್ - 577 427 ಶಿಕಾರಿಪುರ ತಾ., ಶಿವಮೊಗ್ಗ ಜಿ.