Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ಗುರುಮಠಕಲ್

ಕರ್ತೃ – ಪರಮಪೂಜ್ಯ ಶ್ರೀ ಗುರುಬಸಯ್ಯ ಸ್ವಾಮಿಗಳು

ಯಾದಗಿರಿ ಜಿಲ್ಲೆಯ ಗುರುಮಠಕಲ್ ಗ್ರಾಮದ ಮೊದಲ ಹೆಸರುನಾರಾಯಣಪುರ ಎಂಬುದಾಗಿತ್ತು. ಈ ಗ್ರಾಮದಲ್ಲಿ ವೀರಶೈವ ಧರ್ಮವು ಬಹುಶ್ರೀಮಂತವಾಗಿ ಬೆಳೆದು ಧರ್ಮಜಾಗೃತಿಯನ್ನುಂಟು ಮಾಡಿರುವುದು ಕಂಡುಬರುತ್ತದೆ.ಸುಮಾರು 4-5 ಶತಮಾನಗಳ ಹಿಂದೆ ಈ ಗ್ರಾಮದಲ್ಲಿ 63 ಮಠಗಳು ಅಸ್ತಿತ್ವದಲ್ಲಿದ್ದವೆಂದುಹೇಳಲಾಗಿದ್ದು ಕಾಲಾನಂತರ ಬಹುತೆಕ ಮಠಗಳು ಅಸ್ತಿತ್ವ ಕಳೆದುಕೊಂಡಿವೆ.ಕಾಲನ ದಾಳಿಯ ನಡುವೆಯೂ ಸುಮಾರು 4 ಶತಮಾನಗಳಿಂದ ತನ್ನಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಶ್ರೀ ಹಿರೇಮಠದ ಕರ್ತೃಗುರುಗಳು ಪೂಜ್ಯ ಶ್ರೀಗುರುಬಸಯ್ಯ ಸ್ವಾಮಿಗಳೆಂದು ತಿಳಿದುಬರುತ್ತದೆ. ಪುರಾತನ ಕಾಲದಲ್ಲಿ ಸ್ಥಾಪನೆಯಾದಶ್ರೀಮಠದ ಗುರುಗಳು ಕಾಕಳವಾಡ ಶ್ರೀ ರಾಜಾಲಕ್ಷ್ಮಣಪ್ಪನ ಆಸ್ಥಾನ ಗುರುಗಳಾಗಿದ್ದರೆಂದುತಿಳಿದುಬರುತ್ತದೆ.ಬಹುಹಿಂದೆ ರಾಜಾಶ್ರಯದಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದ್ದ ಶ್ರೀಮಠವು ಕಾಲಕ್ರಮೇಣ ಖಾಲಿ ಉಳಿದು ಅಲ್ಲಲ್ಲಿ ಜೀರ್ಣಗೊಂಡಿರುವುದುಕಂಡುಬರುತ್ತದೆ. ಶ್ರೀಮಠದ ಪರಂಪರೆಯ ಬಗ್ಗೆ ಯಾವುದೇ ಮಾಹಿತಿಗಳು ದೊರೆಯುವುದಿಲ್ಲವಾದ್ದರಿಂದ ದಾಖಲಿಸಲು ಸಾಧ್ಯವಾಗುವುದಿಲ್ಲ.ಪ್ರಸ್ತುತ ವೇದಮೂರ್ತಿ ಶ್ರೀ ರಾಜಶೇಖರಯ್ಯ ಸ್ವಾಮಿಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಕರ್ತೃಗದ್ದುಗೆಯಿದ್ದು ಆಗದ್ದುಗೆಗೆ ಪ್ರತಿನಿತ್ಯ ಪೂಜೆ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿರುದ್ರಾಭಿಷೇಕ ನಡೆಯುತ್ತಿದ್ದು ಗೌರಿ ಹುಣ್ಣಿಮೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗುತ್ತದೆ.

Swamiji

Swamiji Name :
ಶ್ರೀ ವೇ.ಮೂ. ರಾಜಶೇಖರಯ್ಯ ಸ್ವಾಮಿಗಳು
Place :
ಗುರುಮಠಕಲ್, ಯಾದಗಿರಿ ತಾ||
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಗೌರಿಹುಣ್ಣಿಮೆಗೆ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು.
ಶ್ರಾವಣ ಹಾಗೂ ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆ.

Photos

Full Address Kannada

ಶ್ರೀ ಹಿರೇಮಠ
ಗುರುಮಠಕಲ್ - 585 216 ಯಾದಗಿರಿ ತಾ|| ಜಿ||

Map

Near by Places

ಯಾದಗಿರಿ - 40 ಕಿ.ಮೀ.
ಶಹಾಪುರ - 70 ಕಿ.ಮೀ.
ಸುರಪುರ - 65 ಕಿ.ಮೀ.
ಕಲಬುರ್ಗಿ - 100 ಕಿ.ಮೀ.

Statistic

29 Views
0 Rating
0 Favorite
0 Share
error: Content is protected !!