ಕರ್ತೃ – ಶ್ರೀ ಷ.ಬ್ರ. ಮುಪ್ಪಿನಯ್ಯ ಶಿವಾಚಾರ್ಯ ಸ್ವಾಮಿಗಳು
ಶಹಾಪುರ ಪಟ್ಟಣದ ಕುಂಬಾರ ಓಣಿಯಲ್ಲಿ ಸುಮಾರು 12ನೇ ಶತಮಾನದಲ್ಲೇಶ್ರೀ ಷ.ಬ್ರ. ಮುಪ್ಪನಯ್ಯ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಹಿರೇಮಠವು ಅಸ್ತಿತ್ವದಲ್ಲಿದ್ದು, ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠವು ಶ್ರೀ ಉಜ್ಜಯಿನಿ ಪೀಠದಶಾಖಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಪುರಾತನ ಪರಂಪರೆಯ ಶ್ರೀ ಹಿರೇಮಠದ ನಿಖರವಾದ ಇತಿಹಾಸಲಭ್ಯವಾಗುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ 8 ಜನ ಶ್ರೀಗಳು ಅದಿಕಾರ ನಡೆಸಿರಬಹುದೆಂದು ಹೇಳಲಾಗಿದ್ದು ಶ್ರೀಮಠವು ವೀರಶೈವ ಧರ್ಮದ ಬೆಳವಣಿಗೆಗೆ ತನ್ನದೇ ಆದಕೊಡುಗೆಯನ್ನು ನೀಡಿದೆ.ಹಿಂದಿನ ಗುರುಗಳದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಅಭಿವೃದ್ಧಿಗೊಳಿಸಿದ್ದು 1920ರಲ್ಲಿಲಿಂಗೈಕ್ಯರಾಗಿದ್ದಾರೆ. ತದನಂತರ ಸುಮಾರು 7 ದಶಕಗಳ ಕಾಲ ಶ್ರೀಮಠವುಪೀಠಾಧಿಪತಿಗಳಿಲ್ಲದೇ ಖಾಲಿ ಉಳಿದಿದ್ದು ಜೀರ್ಣಗೊಂಡಿದೆ.ತದನಂತರ 1988ರಲ್ಲಿ ಇಟಗಿಯ ಶ್ರೀ ಅನ್ನದಾನ ಸ್ವಾಮಿಗಳ ನೇತೃತ್ವದಲ್ಲಿ ಈಗಿನಶ್ರೀ ಸೂಗೂರೇಶ್ವರ ದೇವರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. 1973ರಲ್ಲಿಜನಿಸಿದ ಶ್ರೀಗಳು ಹೊನ್ನಾಳಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಕನ್ನಡದಲ್ಲಿಸ್ನಾತಕೋತ್ತರ ಪದವಿಯನ್ನು ಪಡೆದು ಮಠಕ್ಕೆ ಆಗಮಿಸಿದ್ದಾರೆ. ಶ್ರೀಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದು ಈ ಎಲ್ಲಾಕಾರ್ಯಗಳು ಪೂರ್ಣಗೊಳಿಸಿದ ನಂತರವಷ್ಟೇ ಪಟ್ಟಾಧಿಕಾರವನ್ನು ಸ್ವೀಕರಿಸಲುನಿರ್ಧರಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಸೂಗೂರೇಶ್ವರ ಸ್ವಾಮಿಗಳು
Date of Birth :
9-2-1978
Place :
ಶಹಾಪುರ (ತಾ||)
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.
ನವರಾತ್ರಿ ಉತ್ಸವ ಆಚರಣೆ.
ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.