ಕರ್ತೃ ಶ್ರೀ ಜಗದ್ಗುರು ಜಡೆಯ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳು
ಹೊನ್ನಾಳಿ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಹಿರೇಕಲ್ಮಠವು ತುಂಗಾಭದ್ರಾನದಿಯ ದಡದಲ್ಲಿದ್ದು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕವಾಗಿ ಚಟುವಟಿಕೆಗಳನ್ನುನಡೆಸುತ್ತಾ ತಮ್ಮ ಅನ್ನದಾಸೋಹ ಹಾಗೂ ಜ್ಞಾನದಾಸೊಹದಿಂದ ಸಾಮಾಜಿಕ ಸೇವೆಯಲ್ಲಿತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಜನಮನದಲ್ಲಿ ಉಳಿದು ಬೆಳೆದಿದೆ.ಶ್ರೀ ಜಡೆಯ ಶಂಕರ ಶಿವಾಚಾರ್ಯರು ಶ್ರೀಶೈಲದಿಂದ ಬಾಳೆಹೊನ್ನೂರಿಗೆಆಗಮಿಸುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಅರಳಿಮರದ ಕೆಳಗೆ ವಿಶ್ರಾಂತಿಗೆಂದು ತಂಗಿ ತಮ್ಮಪವಾಡದಿಂದ ಹೊನ್ನನ್ನು ಸುರಿಸಿ ಭಕ್ತರನ್ನು ಉದ್ಧರಿಸಿದ್ದರೆಂದು ಹೇಳಲಾಗಿದೆ.ಕಾಲಾನಂತರ ಸಂಚಾರದಲ್ಲಿದ್ದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಇಲ್ಲಿಗೆ ಆಗಮಿಸಿಗುರುಗಳ ಗದ್ದುಗೆಯ ಮೇಲೆ ಮಠವನ್ನು ಸ್ಥಾಪಿಸಿ ಭಕ್ತರ ಸಹಕಾರದೊಂದಿಗೆ ಮಠಕ್ಕೆ ಭವ್ಯಕಟ್ಟಡ ನಿರ್ಮಿಸಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದರು.ಶ್ರೀಮಠದ 4ನೇ ಗುರುಗಳಾದ ಶ್ರೀ ಚನ್ನಬಸವ ಶಿವಾಚಾರ್ಯರು ಕೆಳದಿ ಅರಸರಗುರುಗಳಾಗಿ ಅವರ ಇಷ್ಟಾರ್ಥಸಿದ್ಧಿಗೆ ಆಶೀರ್ವಾದ ನೀಡಿ ಅನೇಕ ಗೌರವ ಕಾಣಿಕೆಗಳನ್ನುಸ್ವೀಕರಿಸಿದ ನಿದರ್ಶನವಿದ್ದು ಹಾಗೆಯೇ 7ನೇ ಗುರುಗಳಾದ ಶ್ರೀ ಕೆಂಚವೀರೇಶ್ವರಶಿವಾಚಾರ್ಯರು ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. 11ನೇ ಗುರುಗಳಾದ ಶ್ರೀ ಷ.ಬ್ರ.ಚನ್ನಮಲ್ಲಪ್ಪಯ್ಯ ಶಿವಾಚಾರ್ಯ ಸ್ವಾಮಿಗಳ ಪಟ್ಟಾಧಿಕಾರಕ್ಕೆ ಆಗಮಿಸಿದ್ದ ನಾಲ್ವಡಿ ಕೃಷ್ಣರಾಜಒಡೆಯರ್ರವರು ಶ್ರೀಗಳ ಪಟ್ಟಾಭಿಷೇಕ ಕಾರ್ಯವನ್ನು ಸ್ವತಃ ನೋಡಿ ಸಂತೋಷ ಗೊಂಡುಪರಂಪರೆಯ ಪಟ್ಟದ ಸ್ವಾಮಿಗಳಿಗೆ ‘ಒಡೆಯರ್’ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಒಡೆಯರ್ ಚಂದ್ರಶೇಖರ ಮಹಾಸ್ವಾಮಿಗಳುಸ್ನಾತಕೋತ್ತರ ಪದವೀಧರರಾಗಿದ್ದು ದಿ. 6-11-1972ರಲ್ಲಿ ಹಿರೇಕಲ್ಮಠದ ಅಧಿಕಾರವನ್ನುವಹಿಸಿಕೊಂಡಿದ್ದಾರೆ. ಶ್ರೀಗಳು ಹೊನ್ನಾಳಿಯಲ್ಲಿ ಚನ್ನಪ್ಪಸ್ವಾಮಿ ವಿದ್ಯಾಪೀಠವನ್ನು ಪ್ರಾರಂಭಿಸಿಹೊನ್ನಾಳಿ ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಲ್ಲಿ ಶಾಲಾಕಾಲೇಜುಗಳನ್ನು ತೆರೆದರು.ಶ್ರೀಗಳು ವಿಶೇಷವಾಗಿ ಸಾಂಸ್ಕøತಿಕ ಕಲೆಗಳನ್ನು ಬೆಳೆಸಿ ಪ್ರೋತ್ಸಾಹಿಸಲು ಮಠದಲ್ಲಿ ಶ್ರೀಚನ್ನಮಲ್ಲಿಕಾರ್ಜುನ ಗಾನ ಕಲಾಸಂಘವನ್ನು ಪ್ರಾರಂಭಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿಬೆಳೆಸಿದರಲ್ಲದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-7-1935
Place :
ಪುರ, ಹೂವಿನಹಡಗಲಿ ತಾ.
Pattadikara :
6-11-1972
Photo :
Programs
ಪ್ರತೀ ಅಮಾವಾಸ್ಯೆಗೆ ರುದ್ರಾಭಿಷೇಕ ಹಾಗೂ 'ಧರ್ಮಸಭೆ'.
ಯುಗಾದಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಪಂಚಾಂಗ ಶ್ರವಣ ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು, ಕೊನೆಯ ದಿನ ರಥೋತ್ಸವ,
ನವರಾತ್ರಿಗೆ ವಿಶೇಷ ಧಾರ್ಮಿಕ ಆಚರಣೆಗಳು, ಸಂಜೆ ಶ್ರೀದೇವಿ ಪುರಾಣ ಪಾರಾಯಣ ಪಾಲ್ಗುಣ ಶುದ್ಧ ದ್ವಾದಶಿಗೆ ಲಿಂ|| ಶ್ರೀ ಷ.ಬ್ರ.ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.
Institutions
ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಸಂಸ್ಥೆ - 3000 ವಿದ್ಯಾರ್ಥಿಗಳು
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ / ಪದವಿ ಕಾಲೇಜು ಬಿ.ಎಡ್.,/ ಐ.ಟಿ.ಐ. ಕಾಲೇಜು
ಸಂಸ್ಕøತ ವೇದ ಪಾಠಶಾಲೆಗಳು