ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ.ದೂರದಲ್ಲಿರುವ ಚಂಗಡಹಳ್ಳಿ ಗ್ರಾಮದ ಸರಹದ್ದಿನಲ್ಲಿ ಕಾಡಿನಲ್ಲಿ ಸ್ಥಾಪಿತಗೊಂಡಿರುವ ಶ್ರೀಹೆಗ್ಗಡಹಳ್ಳಿ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಗಿರಿರಾಜಸೂರ್ಯ ಸಿಂಹಾಸನ ಶ್ರೀಶೈಲಪೀಠದ ಶಾಖಾಮಠವಾಗಿ ಪಂಚಪೀಠಗಳಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಶ್ರೀ ಹೆಗ್ಗಡಹಳ್ಳಿ ಮಠದ ಸ್ಥಾಪಕಗುರುಗಳು ಶ್ರೀ ಷಡ್ಬಾವ ರಹಿತೇಶ್ವರ ಮಹಾಸ್ವಾಮಿಗಳು.ಸುಮಾರು 200 ವರ್ಷಗಳ ಹಿಂದೆ ತಪಸ್ವಿ ಶ್ರೀ ಷಡ್ಬಾವ ರಹಿತೇಶ್ವರ ಸ್ವಾಮಿಗಳುಸಂಚಾರ ಕೈಗೊಂಡು ಅಲ್ಲಲ್ಲಿ ನೆಲೆನಿಂತು ಭಕ್ತರನ್ನು ಪೊರೆಯುತ್ತಾ ಕೊನೆಯಲ್ಲಿ ಚಂಗಡಹಳ್ಳಿಹೊರವಲಯದ ಕಾಡಿಗೆ ಬಂದಾಗ ಇಲ್ಲಿನ ಪ್ರಶಾಂತತೆಗೆ ಮನಸೋತು ಇಲ್ಲಿಯೇಅನುಷ್ಠಾನಗೊಳ್ಳುತ್ತಾರೆ. ಈ ಸುದ್ದಿ ಸುತ್ತಮುತ್ತಲ ಗ್ರಾಮಸ್ಥರಿಗೆ ತಿಳಿದು ತಂಡೋಪತಂಡವಾಗಿಗುರುಗಳ ದರ್ಶನಕ್ಕೆ ಆಗಮಿಸತೊಡಗಿ ಶ್ರೀ ಹೆಗ್ಗಡಹಳ್ಳಿ ಮಠವು ಸ್ಥಾಪನೆಯಾಗುತ್ತದೆ.ಈ ರೀತಿಯಾಗಿ ಕರ್ತೃಗುರುಗಳಿಂದ ಹೆಸರಾದ ಶ್ರೀಮಠದ ನಂತರದಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳ ಕೊರತೆಯಿದೆ. ಪರಂಪರೆಯ ಹಿಂದಿನಶ್ರೀಗಳಾದ ಶ್ರೀ.ಷ.ಬ್ರ. ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, 1939ರಲ್ಲಿ ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿ ವೀರಶೈವ ತತ್ತ್ವಾಚರಣೆಗಳನ್ನು ಪ್ರಚುರಗೊಳಿಸಿದರು. ಸಮಷ್ಠಿಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಈ ಪ್ರಾಂತ್ಯವನ್ನೆಲ್ಲಾ ಸುತ್ತಿ ವೀರಶೈವ ಧರ್ಮದ ಏಳಿಗೆಗೆಕಾರಣರಾದ ಶ್ರೀಗಳು 1997ರ ಅಕ್ಟೋಬರ್ 20ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಷಡ್ಬಾವ ರಹಿತೇಶ್ವರ ಶಿವಾಚಾರ್ಯಸ್ವಾಮಿಗಳುಹಿಂದಿನ ಗುರುಗಳಿರುವಾಗಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದುಹಿಂದಿನ ಗುರುಗಳ ಐಕ್ಯಾನಂತರ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಇತ್ತೀಚೆಗೆ2014ರ ಅಕ್ಟೋಬರ್ 4 ರಲ್ಲಿ ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆಬಂದರು. ಪರಂಪರೆಯ ಗುರುಗಳ ಹಾದಿಯಲ್ಲಿಯೇ ಶ್ರೀಮಠದ ಹಾಗೂ ಸಮಷ್ಠಿಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಗಳು ಶ್ರೀಮಠದಲ್ಲಿ ಮಕರ ಸಂಕ್ರಾಂತಿ ನಂತರದಎರಡು ದಿನ ಅದ್ದೂರಿ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಷಡ್ಬಾವ ರಹಿತೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
4-10-1985
Place :
ಬ್ಯಾಡಗಿ, ಹಾವೇರಿ ತಾ||
Pattadikara :
4-10-2014
Photo :
Programs
ಮಕರ ಸಂಕ್ರಾಂತಿ ಮರುದಿನ (2 ದಿನ) ಶ್ರೀಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ನಿತ್ಯ ರುದ್ರಾಭಿಷೇಕ
Photos
Full Address Kannada
ಶ್ರೀ ಹೆಗ್ಗಡಹಳ್ಳಿ ಮಠ ಚಂಗಡಹಳ್ಳಿ,
ಯಸಳೂರು ಹೋಬಳಿ
ಸಕಲೇಶಪುರ ತಾ||, ಹಾಸನ ಜಿಲ್ಲೆ