Shree Havagi Lingeshwara Samstana Hirematha

Shree Havagi Lingeshwara Samstana Hirematha Claimed

ಶ್ರೀ ಹಾವಗಿ ಲಿಂಗೇಶ್ವರ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಹಾವಗಿ ಲಿಂಗೇಶ್ವರ ಸಂಸ್ಥಾನ ಹಿರೇಮಠ

ಕರ್ತೃ ಪೂಜ್ಯ ಶ್ರೀ ಹಾವಗಿ ಲಿಂಗೇಶ್ವರ ಮಹಾಸ್ವಾಮಿಗಳು

ಬಸವಕಲ್ಯಾಣ ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ 16 ಕಿ.ಮೀ. ದೂರದಲ್ಲಿರುವಗಡಿಗೌಡಗಾಂವ ಗ್ರಾಮದಲ್ಲಿ ಶ್ರೀ ಷ.ಬ್ರ. ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಹಾವಗಿ ಲಿಂಗೇಶ್ವರ ಸಂಸ್ಥಾನ ಹಿರೇಮಠವುಅಸ್ತಿತ್ವದಲ್ಲಿದ್ದು ಅಂದಿನಿಂದ ಇಂದಿನ ತನಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿ ವೀರಶೈವಧರ್ಮವನ್ನು ಅಭಿವೃದ್ಧಿಪಡಿಸಿದೆ. ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಪುರಾತನ ಕಾಲದಿಂದಲೂ ವೀರಶೈವ ಧರ್ಮದ ಚಟುವಟಿಕೆಗಳ ಕೇಂದ್ರವಾಗಿರೂಪುಗೊಂಡಿರುವ ಶ್ರೀಮಠವು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಹೆಚ್ಚಿನ ಹೆಸರುಗಳಿಸಿದೆ. ಸುಮಾರು 600 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀಮಠವುಡೋಣಗಾಂವ್ ಹಿರೇಮಠದ 308 ಶಾಖಾಮಠಗಳಲ್ಲಿ ಒಂದೆಂದು ಹೇಳಲಾಗಿದ್ದುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಅದಕ್ಕೆ ಕಾರಣ ಬಹುಶಃ ಶ್ರೀಮಠವು ಆಗಾಗ್ಗೆ ಖಾಲಿಉಳಿಯುತ್ತಾ ಬಂದಿರುವುದು.ಕರ್ತೃಗುರುಗಳಾದ ಶ್ರೀ ಹಾವಗಿ ಲಿಂಗೇಶ್ವರರು ಪವಾಡ ಪುರುಷರಾಗಿ ಅನೇಕಪವಾಡಗಳನ್ನು ಮಾಡಿ ಭಕ್ತರನ್ನು ಉದ್ಧರಿಸಿದ್ದರೆಂಬ ಜಾನಪದ ಕಥೆಗಳು ಈ ಭಾಗದಲ್ಲಿಪ್ರಚಲಿತದಲ್ಲಿವೆ. ಆದರೆ ಗುರುಗಳ ಕಾಲಮಾನದ ಬಗ್ಗೆಯಾಗಲೀ ಆನಂತರ ಅಧಿಕಾರನಡೆಸಿರಬಹುದಾದ ಗುರುಗಳ ಬಗ್ಗೆ ಮಾಹಿತಿಗಳು ಲಭ್ಯವಾಗದೇ ಇರುವುದು ಬೇಸರದಸಂಗತಿ. ಆದರೆ ಬಂದಿರುವ ಎಲ್ಲಾ ಗುರುಗಳು ಶ್ರೀಮಠವನ್ನು ಅಭಿವೃದ್ಧಿಪಡಿಸಿರುವುದುಕಂಡುಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಕಳೆದ ಶತಮಾನದಲ್ಲಿ ಶ್ರೀ ಬಸವಲಿಂಗ ದೇಶಿಕರುಸ್ಥಿರ ಪಟ್ಟಾಧ್ಯಕ್ಷರಾಗಿ ಹಾಗೂ ಶ್ರೀ ಷ.ಬ್ರ. ನಾಗಮಾರಪ್ಪ ಶಿವಾಚಾರ್ಯರು ಚರಪಟ್ಟಾಧ್ಯಕ್ಷರಾಗಿ ಶ್ರೀಮಠವನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಪಡಿಸಿದ್ದರೆಂದುತಿಳಿದುಬರುತ್ತಿದ್ದು ಅವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಈಗಿನ ಶ್ರೀಗಳ ಹಿಂದಿನಶ್ರೀಗಳ್ಯಾರೆಂಬುದರ ಬಗ್ಗೆಯೂ ತಿಳಿದುಬರುವುದಿಲ್ಲ.ಈಗಿನ ಮಠಾಧ್ಯಕ್ಷರಾಗಿರುವ ಶ್ರೀ ಮ.ಘ.ಚ. ಶಾಂತವೀರ ಶಿವಾಚಾರ್ಯಸ್ವಾಮಿಗಳು 1970ರ ಏಪ್ರಿಲ್ 4ರಲ್ಲಿ ಸಿಂಧಗಿ ತಾಲ್ಲೂಕಿನ ಕನ್ನೋಳ್ಳಿ ಗ್ರಾಮದಲ್ಲಿಜನಿಸಿದವರಾಗಿದ್ದು ಇವರ ತಂದೆ ಗುರುಸಂಗಯ್ಯ ಹಾಗೂ ತಾಯಿ ಶಾರದಾಬಾಯಿಯವರು.ಕನ್ನೋಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಶ್ರೀಗಳು ಕೊಪ್ಪಳದ ಗವಿಮಠದಲ್ಲಿದ್ದುಕೊಂಡುಬಿ.ಎ. ಪದವಿ ಪಡೆದರು. ಆನಂತರ ಶಿವಯೋಗಮಂದಿರದಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದಶ್ರೀಗಳು ಗಡಿಗೌಡಗಾಂವ್ಗೆ ಆಗಮಿಸಿದರು.ಢೋಣಗಾಂವ್ ಮೂಲ ಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅವರ ಕೃಪಾಶೀರ್ವಾದದಿಂದ 1996ರ ಏಪ್ರಿಲ್9ರಲ್ಲಿ ಶ್ರೀ ಮ.ಘ.ಚ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದೊಂದಿಗೆಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದರು. ಬಹುಕಾಲ ಖಾಲಿ ಉಳಿದಿದ್ದ ಶ್ರೀಮಠವನ್ನುಭಕ್ತರ ಸಹಕಾರದೊಂದಿಗೆ ಈ ಎರಡು ದಶಕಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಗೊಳಿಸುತ್ತಾಬಂದಿರುವ ಶ್ರೀಗಳು ಶ್ರೀಮಠದ ದ್ವಾರಬಾಗಿಲಿಗೆ ದ್ವಾರಮಂಟಪವನ್ನು ನಿರ್ಮಿಸಿ ಅದರ ಮೇಲೆಶ್ರೀ ರೇಣುಕಾಚಾರ್ಯರ ಹಾಗೂ ಶ್ರೀ ಹಾವಗಿ ಲಿಂಗೇಶ್ವರ ಮೂರ್ತಿಗಳ ಮಧ್ಯೆ ಶ್ರೀಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.ಶ್ರೀಗಳು ಉತ್ತಮ ವಾಗ್ಮಿಗಳಾಗಿದ್ದು ನಾಡಿನ ನಾನಾಭಾಗಗಳಲ್ಲಿ ಪುರಾಣ ಪ್ರವಚನಗಳನ್ನು ಮಾಡುತ್ತಾ ವೀರಶೈವ ಧರ್ಮವನ್ನು ಬೆಳೆಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗಳಲ್ಲಿ ಶಿವಾನುಭವಗೋಷ್ಠಿಗಳನ್ನುನಡೆಸುತ್ತಾ ಬಂದಿದ್ದು ಆ ಗೋಷ್ಠಿಗಳ ಮೂಲಕ ಜನರಲ್ಲಿನ ಮೌಢ್ಯ, ಕಂದಾಚಾರಗಳನ್ನುಹೊಡೆದೋಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿವರ್ಷ ಮಹಾಲಯ ಅಮವಾಸ್ಯೆಗೆ ಶ್ರೀಗಳ ಹುಟ್ಟುಹಬ್ಬ ಆಚರಣೆಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಶ್ರಾವಣದಲ್ಲಿ ತಿಂಗಳ ಪರ್ಯಂತಭಜನೆ ಕಾರ್ಯಕ್ರಮ ನಡೆಯುತ್ತದೆ. ಪ್ರತಿವರ್ಷ ಶಿವರಾತ್ರಿಯಿಂದ ಯುಗಾದಿಯವರೆಗೆಪ್ರವಚನ ನಡೆಸುತ್ತಾ ಬರಲಾಗುತ್ತಿದ್ದು ಯುಗಾದಿ ದಿನದಂದು ಶ್ರೀಮಠದ ರಥೋತ್ಸವಜರುಗುತ್ತದೆ.

Swamiji

Swamiji Name :
ಶ್ರೀ ಮ.ಘ.ಚ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು
Date of Birth :
4-4-1970
Place :
ಕನ್ನೋಳ್ಳಿ, ಸಿಂಧಗಿ ತಾ||
Pattadikara :
9-4-1996
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ಶಿವರಾತ್ರಿಯಿಂದ ಯುಗಾದಿಯವರೆಗೆ ಪ್ರವಚನ ಮತ್ತು ಯುಗಾದಿಗೆ ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ಭಜನೆ.
ಮಹಾಲಯ ಅಮವಾಸ್ಯೆಗೆ ಶ್ರೀಗಳ ಹುಟ್ಟುಹಬ್ಬ ಆಚರಣೆ.

Photos

Full Address Kannada

ಶ್ರೀ ಹಾವಗಿ ಲಿಂಗೇಶ್ವರ ಸಂಸ್ಥಾನ ಹಿರೇಮಠ
ಗಡಿಗೌಡಗಾಂವ - 585 416
ಬಸವಕಲ್ಯಾಣ ತಾ||, ಬೀದರ್ ಜಿ||

Map

Near by Places

ಬಸವಕಲ್ಯಾಣ - 16 ಕಿ.ಮೀ.
ಹುಮನಾಬಾದ್ - 40 ಕಿ.ಮೀ.
ಬೀದರ್ - 80 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!