Shree Hanneradu Matha

Shree Hanneradu Matha Claimed

ಶ್ರೀ ಹನ್ನೆರಡು ಮಠ

Average Reviews

Description

ಶ್ರೀ ಹನ್ನೆರಡು ಮಠ – ಗೋಕರ್ಣ

ಕರ್ತೃ – ಶ್ರೀ.ಷ.ಬ್ರ. ವೀರತಪಸ್ವಿ ಶಿವಯೋಗ ಭೂಷಣ ಚರಪಟ್ಟಾಧ್ಯಕ್ಷ ಮಡಿವಾಳ ಶಿವಾಚಾರ್ಯರತ್ನ ಮಹಾಸ್ವಾಮಿಗಳು

ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕಿನ ಗೋಕರ್ಣವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಇತಿಹಾಸ, ಪುರಾಣ ಪ್ರಸಿದ್ದ ಸ್ಥಳ. ನಿತ್ಯ ಜಗತ್ತಿನಮೂಲೆ ಮೂಲೆಗಳಿಂದ ಸಹಸ್ರ, ಸಹಸ್ರ ಭಕ್ತರು, ಪ್ರವಾಸಿಗರು ಭೇಟಿ ನೀಡುವ ಪುಣ್ಯಭೂಮಿ.ಗೋಕರ್ಣದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಮಠವೇ ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾದ ಶ್ರೀ ಹನ್ನೆರಡು ಮಠ ಅಥವಾ ವೀರಶೈವ ಮಠ.ಕರಾವಳಿಯ ಈ ಭಾಗದಲ್ಲಿ ವೀರಶೈವ ಧರ್ಮದ ಬೆಳವಣಿಗೆಗೆ ನೆರವಾಗಲುಹುಬ್ಬಳ್ಳಿ – ಕಲಘಟಗಿಯ ಶ್ರೀ ಹನ್ನೆರಡು ಮಠದ ಶ್ರೀ ಷ.ಬ್ರ. ವೀರತಪಸ್ವಿ ಶಿವಯೋಗಭೂಷಣ ಚರಪಟ್ಟಾಧ್ಯಕ್ಷ ಮಡಿವಾಳ ಶಿವಾಚಾರ್ಯರತ್ನ ಮಹಾಸ್ವಾಮಿಗಳು ಸುಮಾರು1960ರ ಸುಮಾರಿನಲ್ಲಿ ಈ ಮಠವನ್ನು ಸ್ಥಾಪಿಸಿದರು. ಇಲ್ಲಿ ಒಂದು ಛತ್ರವನ್ನು ಸ್ಥಾಪಿಸಿ,ಧಾರ್ಮಿಕ ಚಟುವಟಿಕೆಗಳು ನಡೆಯುವಂತೆ ಮಾಡಿದರು. ಅಂದು ಸ್ಥಾಪಿತಗೊಂಡ ಶ್ರೀಮಠವು ಇಂದಿಗೂ ಈ ಭಾಗದಲ್ಲಿ ವೀರಶೈವ ಧರ್ಮದ ಬೆಳವಣಿಗೆಗೆ ಶ್ರಮಿಸುತ್ತಿದೆ.ಶ್ರೀ ಮಡಿವಾಳ ಶಿವಾಚಾರ್ಯ ಮಹಾಸ್ವಾಮಿಗಳು ಮಹಾತಪಸ್ವಿಗಳಾಗಿದ್ದು ತಮ್ಮಅನುಷ್ಠಾನಗಳ ಮೂಲಕ ಮನೆಮಾತಾಗಿದ್ದರು. ಮೊದಲು ಹುಬ್ಬಳ್ಳಿಯಲ್ಲಿ ಶ್ರೀ ಹನ್ನೆರಡುಮಠವನ್ನು ಸ್ಥಾಪಿಸಿದ್ದ ಶ್ರೀಗಳು ಸಂಚಾರದಲ್ಲಿದ್ದಾಗ ಕಲಘಟಗಿ ಹಾಗೂ ಅನಂತರಗೋಕರ್ಣದಲ್ಲೂ “ಶ್ರೀ ಹನ್ನೆರಡು ಮಠ” ಗಳನ್ನು ಸ್ಥಾಪಿಸಿದರು. ಸುಮಾರು 4 ದಶಕಗಳಕಾಲ ತಮ್ಮ ಜೀವನವನ್ನು ಧರ್ಮ ಹಾಗೂ ಸಮಾಜದ ಶ್ರೀಯೋಭಿವೃದ್ದಿಗೆ ಮುಡಿಪಾಗಿಟ್ಟಶ್ರೀಗಳು 1971ರಲ್ಲಿ ಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಪಟ್ಟಕ್ಕೆ ತಂದು1991ರಲ್ಲಿ ಲಿಂಗೈಕ್ಯರಾದರು.ಕೇವಲ 17ರ ಪ್ರಾಯದಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದ ಈಗಿನ ಶ್ರೀಗಳಾದಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡು. ಗುರುಗಳ ಐಕ್ಯಾನಂತರ ಎಲ್ಲಾ ಮೂರು ಮಠಗಳ ಜವಬ್ದಾರಿಯನ್ನುವಹಿಸಿಕೊಂಡು ಸರ್ವತೋಮುಖವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಮಠದಲ್ಲಿಮಹಾಶಿವರಾತ್ರಿಗೆ ವಿಶೇಷ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ.

Swamiji

Swamiji Name :
ಶ್ರೀ. ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
04-10-1954
Place :
ಹುಬ್ಬಳ್ಳಿ, ಧಾರವಾಡ ಜಿಲ್ಲೆ
Pattadikara :
16-5-1971
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಮಹಾಶಿವರಾತ್ರಿಗೆ ಪಲ್ಲಕ್ಕಿ ಉತ್ಸವ ಹಾಗೂ ವಿವಿದ ಕಾರ್ಯಕ್ರಮಗಳು

Photos

Full Address Kannada

ಶ್ರೀ ಹನ್ನೆರಡು ಮಠ (ವೀರಶೈವ ಮಠ)
ಓಂ ಬೀಚ್ ರೋಡ್, ಗೋಕರ್ಣ - 581326
ಅಂಕೋಲ ತಾ|| ಉತ್ತರ ಕನ್ನಡ ಜಿ||

Map

Statistic

19 Views
0 Rating
0 Favorite
0 Share
error: Content is protected !!