Shree Hanneradu Matha

Shree Hanneradu Matha Claimed

ಶ್ರೀ ಹನ್ನೆರಡು ಮಠ

Average Reviews

Description

ಶ್ರೀ ಹನ್ನೆರಡು ಮಠ

ಕರ್ತೃಶ್ರೀ ಷ.ಬ್ರ. ವೀರತಪಸ್ವಿ ಶಿವಯೋಗ ಭೂಷಣ ಚರಪಟ್ಟಾಧ್ಯಕ್ಷ ಮಡಿವಾಳ ಶಿವಾಚಾರ್ಯರತ್ನ ಮಹಾಸ್ವಾಮಿಗಳು

ಧಾರವಾಡ ಜಿಲ್ಲಾ ಕೇಂದ್ರದಿಂದ 31 ಕಿ.ಮೀ. ದೂರದಲ್ಲಿರುವ ಕಲಘಟಗಿಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು ಈ ಪಟ್ಟಣದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀಹನ್ನೆರಡು ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕಪ್ರಜ್ಞೆಯನ್ನು ಮೂಡಿಸುತ್ತಿದೆ. ಸುಮಾರು 65 ವರ್ಷಗಳ ಹಿಂದೆ ಶ್ರೀ ಷ.ಬ್ರ. ವೀರ ತಪಸ್ವಿಶಿವಯೋಗ ಭೂಷಣ ಚರಪಟ್ಟಾಧ್ಯಕ್ಷ ಮಡಿವಾಳ ಶಿವಾಚಾರ್ಯರತ್ನ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಹನ್ನೆರಡು ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದೆ. ಶ್ರೀಮಠದ ಮೂಲಮಠವು ಹುಬ್ಬಳ್ಳಿಯ ಶ್ರೀ ಹನ್ನೆರಡು ಮಠವಾಗಿದ್ದು ಈಗಿನಶ್ರೀಗಳು ಉಭಯ ಮಠಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಮಡಿವಾಳ ಶಿವಾಚಾರ್ಯರತ್ನ ಸ್ವಾಮಿಗಳು ಮಹಾತಪಸ್ವಿಗಳಾಗಿದ್ದು ತಮ್ಮತಪೋನುಷ್ಠಾನಗಳ ಮೂಲಕ ಹೆಸರಾಗಿದ್ದವರು. ಸದಾ ಸಂಚರಿಸುತ್ತ ಜನರಲ್ಲಿನ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರಗಳನ್ನು ನಿವಾರಿಸಲು ಶ್ರಮಿಸುತ್ತಿದ್ದ ಶ್ರೀಗಳು ಅವರಿಗೆವೀರಶೈವ ಪಂಚಾಚಾರ ತತ್ವಗಳ ಹಾಗೂ ಬಸವಾದಿ ಶರಣರ ರಚನೆಗಳ ಮಹತ್ವವನ್ನುತಿಳಿಯಪಡಿಸುತ್ತಿದ್ದರು. ಇಂತಹ ಮಹಾಮಹಿಮರು ಸಂಚಾರದಲ್ಲಿ ಕಲಘಟಗಿ ಗ್ರಾಮಕ್ಕೆಬಂದಾಗ ವೀರಶೈವರಿಗೆ ಧಾರ್ಮಿಕ ಕೇಂದ್ರಗಳ ಕೊರತೆ ಕಂಡು ಭಕ್ತರ ಒತ್ತಾಯಪೂರ್ವಕಭಕ್ತಿಗೆ ಆಶೀರ್ವದಿಸಿ ಇಲ್ಲಿಯೇ ನೆಲೆನಿಂತರು. ಭಕ್ತರು ಶ್ರೀಗಳಿಗೆ ಒಂದು ಎಕರೆ ಎರಡುಗುಂಟೆ ಜಾಗವನ್ನು ಕಲಘಟಗಿಯ ಹೊರವಲಯದಲ್ಲಿ ನೀಡಿದ್ದು ಗುರುಗಳು ಅಲ್ಲಿಯೇಕುಟೀರವನ್ನು ಕಟ್ಟಿಕೊಂಡು ಪ್ರಥಮವಾಗಿ ಶ್ರೀ ವೀರಭದ್ರ ದೇವಸ್ಥಾನವನ್ನು ಸ್ಥಾಪಿಸಿದರು.ಶ್ರೀಗಳು ದೇವಸ್ಥಾನ ಹಾಗೂ ಕುಟೀರವನ್ನು ಕಟ್ಟಿಕೊಂಡು ಬಂದ ಭಕ್ತರಿಗೆವೀರಶೈವ ತತ್ವಾಚರಣೆಗಳು, ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಳಗಳ ಕುರಿತುಉಪದೇಶ ನೀಡುತ್ತಾ ಗುರುಲಿಂಗ ಜಂಗಮದ ಕಲ್ಪನೆಯನ್ನು ಮಾಡಿಸಿದರು. ಸುಮಾರು 4ದಶಕಗಳ ಕಾಲ ತಮ್ಮ ಜೀವನವನ್ನು ಸಮಾಜ ಹಾಗೂ ಶ್ರೀಮಠದ ಶ್ರೇಯೋಭಿವೃದ್ಧಿಗೆಮುಡಿಪಾಗಿಟ್ಟ ಶ್ರೀಗಳು ಶ್ರೀಮಠವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿ 1990ರನವೆಂಬರ್ 15ರಂದು ಲಿಂಗೈಕ್ಯರಾದರು.ಶ್ರೀ ಮಡಿವಾಳ ಶಿವಾಚಾರ್ಯರು ತಾವಿರುವಾಗಲೇ 1971ರಲ್ಲಿ ಈಗಿನ ಶ್ರೀಗಳಾದಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದ್ದರು. ಆಗ ಶ್ರೀ ರೇವಣಸಿದ್ದಶಿವಾಚಾರ್ಯರಿಗೆ ಕೇವಲ 17ರ ಕಿರಿಪ್ರಾಯ. ಅಲ್ಲಿಂದ ಎರಡು ದಶಕಗಳ ಕಾಲ ಹಿರಿಯಗುರುಗಳ ಸೇವೆಯಲ್ಲಿ ವೀರಶೈವ ಧರ್ಮಾಚರಣೆಗಳು, ಪಂಚಪೀಠಗಳು ಹಾಗೂ ಬಸವಾದಿಶಿವಶರಣರ ಕುರಿತಾದ ಆಳವಾದ ಅರಿವನ್ನು ಪಡೆದ ಶ್ರೀಗಳು ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು.ಹಿರಿಯ ಗುರುಗಳ ಐಕ್ಯಾನಂತರ ಶ್ರೀಮಠದ ಸಂಪೂರ್ಣ ಜವಾಬ್ದಾರಿವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಶ್ರೀ ರೇವಣಸಿದ್ದಶಿವಾಚಾರ್ಯರು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಶ್ರೀಮಠದ ಜೊತೆಯಲ್ಲಿಶ್ರೀಮಠದ ಮೂಲ ಮಠವಾಗಿದ್ದ ಹುಬ್ಬಳ್ಳಿಯ ಶ್ರೀ ಹನ್ನೆರಡು ಮಠದ ಜವಾಬ್ದಾರಿಯನ್ನುವಹಿಸಿಕೊಂಡು ಎರಡೂ ಮಠಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ.ಶ್ರೀಮಠದ ವತಿಯಿಂದ ಆಗಾಗ್ಗೆ ಅನೇಕ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಾ ಸಮಾಜಮುಖಿ ಸೇವಾಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.ಶ್ರೀಮಠದಲ್ಲಿ ಪ ್ರತಿನಿತ ್ಯಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮವಾಸ್ಯೆಗಳಲ್ಲಿ ರುದ್ರಾಭಿಷೇಕ, ವಿಶೇಷಪೂಜೆ ಹಾಗೂ ಶ್ರಾವಣ ಮಾಸದಲ್ಲಿನಿತ್ಯ ರುದ್ರಾಭಿಷೇಕ, ವಿಶೇಷ ಧಾರ್ಮಿಕಆಚರಣೆಗಳು ಆಯೋಜನೆಗೊಂಡಿರುತ್ತವೆ. ಕಾರ್ತೀಕ ಮಾಸದಲ್ಲಿ ಶ್ರೀ ಷ.ಬ್ರ.ವೀರತಪಸ್ವಿ ಮಡಿವಾಳ ಶಿವಾಚಾರ್ಯರತ್ನ ಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸಲಾಗುತ್ತಿದ್ದು ಅಪಾರಜನಸ್ತೋಮ ಪಾಲ್ಗೊಳ್ಳುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
4-10-1954
Place :
ಹುಬ್ಬಳ್ಳಿ, ಧಾರವಾಡ ಜಿ||
Pattadikara :
6-5-1971
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ದೀಪೋತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಹನ್ನೆರಡು ಮಠ
ಕಲಘಟಗಿ - 581 204
ಧಾರವಾಡ ಜಿ||

Map

Near by Places

ಹುಬ್ಬಳ್ಳಿ - 27 ಕಿ.ಮೀ.
ಧಾರವಾಡ - 31 ಕಿ.ಮೀ.
ಹಳಿಯಾಳ - 26 ಕಿ.ಮೀ.
ಯಲ್ಲಾಪುರ - 35 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!