ಕರ್ತೃ ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪಜ್ಜ ಮಹಾಸ್ವಾಮಿಗಳು
ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಶ್ರೀ ಸದ್ಗುರುಶಿವಯೋಗಿ ಹಾಲವೀರಪ್ಪಜ್ಜ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಾಲೇಶ್ವರಸಂಸ್ಥಾನ ಮಠವು ತನ್ನ ಹಾಲಸ್ವಾಮಿ ಪರಂಪರೆಯ ವಿಶಿಷ್ಠ ಧಾರ್ಮಿಕ ಆಚರಣೆಗಳಿಂದಾಗಿಪ್ರಸಿದ್ಧಿ ಹೊಂದಿದ್ದು, ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಹಾಲವೀರಪ್ಪಜ್ಜ ಮಹಾಸ್ವಾಮಿಗಳು ಲೋಕಸಂಚಾರಕೈಗೊಂಡು ರಾಂಪುರದ ಹಾಲಸ್ವಾಮಿ ಮಠದ ಗುರುಗಳ ಆಶೀರ್ವಾದ ಬಲದಿಂದಹಿರೇಹಡಗಲಿಗೆ ಬಂದರು. ಇಲ್ಲಿನ ವಾತಾವರಣಕ್ಕೆ ಮನಸೋತ ಗುರುಗಳು ಇಲ್ಲಿಯೇಅನುಷ್ಠಾನಗೊಂಡರು. ಇವರ ಕರ್ತೃತ್ವ ಶಕ್ತಿಗೆ ಮನಸೋತ ಭಕ್ತರು ಗುರುಗಳಿಗೋಸ್ಕರಇಲ್ಲಿಯೇ ಮಠ ಕಟ್ಟಿಸಿಕೊಟ್ಟರು. ಶ್ರೀಗಳು ಭಕ್ತರಿಗೆ ತಮ್ಮ ಧಾರ್ಮಿಕ ಆಚರಣೆಗಳೊಂದಿಗೆಸನ್ಮಾರ್ಗ ತೋರಿ ಲಿಂಗೈಕ್ಯರಾಗಿದ್ದಾರೆ.ಕರ್ತೃಗುರುಗಳ ನಂತರ ಬಂದ ಗುರುಗಳ ಬಗ್ಗೆ ಸರಿಯಾದ ಮಾಹಿತಿಗಳುಲಭ್ಯವಿಲ್ಲ ಇದಕ್ಕೆ ಕಾರಣ ಬಹುಶಃ ಎಲ್ಲಾ ಸ್ವಾಮಿಗಳು ಹಾಲಸ್ವಾಮಿಗಳೆಂದೇ ನಾಮಾಂಕಿತರಾಗಿದ್ದಿರಬಹುದು. ಹಿಂದಿನ ಶ್ರೀಗಳಾದ ಶ್ರೀ ಹಾಲಶಂಕರ ಸ್ವಾಮಿಗಳು ಶ್ರೀಮಠದ ಅಧಿಕಾರವಹಿಸಿಕೊಂಡ ನಂತರ ಮಠವು ಅಭಿವೃದ್ಧಿಗೊಂಡಿದೆ. ಹಾಗೆಯೇ ಶ್ರೀಮಠಕ್ಕೆ ನೂತನಕಟ್ಟಡವನ್ನು ನಿರ್ಮಿಸಿ ಭಕ್ತರ ಧಾರ್ಮಿಕ ಆಚರಣೆಗಳ ಕೇಂದ್ರಬಿಂದುವನ್ನಾಗಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಅಭಿನವ ಹಾಲವೀರಪ್ಪಜ್ಜ ಪಂಡಿತಾರಾಧ್ಯಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡ ದಿನದಿಂದಲೂ ಕ್ರಿಯಾಶೀಲರಾಗಿದ್ದಾರೆ. ತಮ್ಮಧಾರ್ಮಿಕ ಆಚರಣೆಗಳ ಜೊತೆಗೆ ಶ್ರೀಮಠದ ಮೂಲಪರಂಪರೆಯಾದ ಹಾಲಸ್ವಾಮಿಪರಂಪರೆಯನ್ನು ಉಳಿಸಿಕೊಂಡು ವೈಚಾರಿಕ ಚಿಂತನೆಗಳನ್ನು ಜನರಿಗೆ ತಲುಪಿಸುವಲ್ಲಿಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿವರ್ಷ ಬಸವಜಯಂತಿ ಆಚರಣೆ ನಡೆಯುತ್ತಿದ್ದು ಸಮೀಪದದಿನಗಳಲ್ಲಿ 501 ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಗುತ್ತಿದೆ. ಹಾಗೂ ಸೀಗೆಹುಣ್ಣಿಮೆ ಆದ ಮೂರನೇ ದಿನಕ್ಕೆ ಮುಳ್ಳುಗದ್ದುಗೆ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
Swamiji
Swamiji Name :
ಶ್ರೀ ಸದ್ಗುರು ಶಿವಯೋಗಿ ಅಭಿನವ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಮಹಾಸ್ವಾಮಿಗಳು
Date of Birth :
28-6-1987
Place :
ಹಿರೇಹಡಗಲಿ, ಹೂವಿನಹಡಗಲಿ ತಾ||
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಶಿವಾನುಭವ ಗೋಷ್ಠಿ.
ಆಶ್ವೀಜ ಮಾಸದ ಸೀಗೆ ಹುಣ್ಣಿಮೆ ಆದ 3ನೇ ದಿನಕ್ಕೆ ಮುಳ್ಳುಗದ್ದುಗೆ ಉತ್ಸವ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ,
ಬಸವಜಯಂತಿ ಆಚರಣೆ ಮತ್ತು ಹತ್ತಿರದ ದಿನಗಳಲ್ಲಿ ಶ್ರೀಮಠದಲ್ಲಿ 501 ಸಾಮೂಹಿಕ ವಿವಾಹಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ.
ಗೋಶಾಲೆ ಇದೆ.
Photos
Full Address Kannada
ಶ್ರೀ ಹಾಲೇಶ್ವರ ಸಂಸ್ಥಾನ ಮಠ
ಹಿರೇಹಡಗಲಿ - 583216
ಹೂವಿನಹಡಗಲಿ ತಾ||, ಬಳ್ಳಾರಿ ಜಿ||