Shree Haleshwara Brahanmatha, Adavihalli

Shree Haleshwara Brahanmatha, Adavihalli Claimed

ಶ್ರೀ ಹಾಲೇಶ್ವರ ಬೃಹನ್ಮಠ, ಅಡವಿಹಳ್ಳಿ

Average Reviews

Description

ಶ್ರೀ ಹಾಲೇಶ್ವರ ಬೃಹನ್ಮಠ, ಅಡವಿಹಳ್ಳಿ

ಕರ್ತೃ ಶ್ರೀ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು

ಹರಪನಹಳ್ಳಿಯಿಂದ ಸುಮಾರು ದೂರದಲ್ಲಿರುವ ಶ್ರೀ ಹಾಲೇಶ್ವರ ಬೃಹನ್ಮಠವುಸುಮಾರು 45 ವರ್ಷಗಳ ಹಿಂದೆ ಶ್ರೀ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳಿಂದಸ್ಥಾಪಿಸಲ್ಪಟ್ಟಿದೆ. ಶ್ರೀಗಳು ಹಾಲಸ್ವಾಮಿ ಪರಂಪರೆಗೆ ಸೇರಿದವರಾಗಿದ್ದು ಇಲ್ಲಿ ಮಠವನ್ನುಸ್ಥಾಪಿಸಿದ ನಂತರ ಜನಾನುರಾಗಿಯಾಗಿ ಹಾಗೂ ಭಕ್ತರಿಗೆ ಸನ್ಮಾರ್ಗವನ್ನು ತೋರಿಸುತ್ತಾಮಠವನ್ನು ಮುಂಚೂಣಿಗೆ ತಂದರು. ಶ್ರೀಗಳು ಶ್ರೀ ಮಠದಲ್ಲಿ ಮುಳ್ಳುಗದ್ದುಗೆ ಉತ್ಸವವನ್ನುಆರಂಭಿಸಿ ಜನರಲ್ಲಿ ಸಂಚಲನ ಮೂಡಿಸಿ ಭಕ್ತರನ್ನು ಮಠದತ್ತ ಸೆಳೆದರು.ಇವರ ನಂತರ ಶ್ರೀ ಮಠದ ಎರಡನೇ ಸ್ವಾಮಿಗಳಾಗಿ ಶ್ರೀ ಸದ್ಗುರು ಶಿವಯೋಗಿವೀರಗಂಗಾಧರ ಹಾಲಸ್ವಾಮಿಗಳು ಹಿರಿಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮಠವನ್ನುಮುನ್ನಡೆಸುತ್ತಿದ್ದಾರೆ. ಶ್ರೀಗಳು ಮೂಲತಃ ಅಡವಿಹಳ್ಳಿಯವರೇ ಆಗಿದ್ದು, ನವೆಂಬರ್ 20, 1982 ರಲ್ಲಿಜನಿಸಿದವರಾಗಿದ್ದಾರೆ. ಶ್ರೀಗಳು ಇನ್ನೂ ಯುವಕರಾಗಿದ್ದರೂ ಕೂಡ ಶ್ರೀ ಮಠದಜವಾಬ್ದಾರಿಯನ್ನು ಹೊತ್ತುಕೊಂಡು ಭಕ್ತರಿಗೆ ಹಾಗೂ ಅಡವಿಹಳ್ಳಿಯ ಜನರಿಗೆ ಸನ್ಮಾರ್ಗದತ್ತಮುನ್ನಡೆಯಲು ಮಾರ್ಗದರ್ಶನ ನೀಡುತ್ತಿದ್ದಾರೆ.ಶ್ರೀ ಮಠದಲ್ಲಿ ಪ್ರತಿದಿನ ಪೂಜೆ ಪುನಸ್ಕಾರಗಳೊಂದಿಗೆ ಪ್ರತಿ ಅಮವಾಸ್ಯೆ ಹಾಗೂಹುಣ್ಣಿಮೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ಶ್ರೀಮಠದ ಹಾಲಸ್ವಾಮಿ ಪರಂಪರೆಯ ಪ್ರಮುಖ ಪದ್ದತಿಯಾದ ಮುಳ್ಳುಗದ್ದಿಗೆ ಉತ್ಸವನಡೆಯುತ್ತದೆ. ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ದಸರಾದಲ್ಲಿಪ್ರತಿದಿನ ಶ್ರೀ ದೇವಿ ಪುರಾಣ ಪಾರಾಯಣ ನಡೆಯುತ್ತದೆ.

Swamiji

Swamiji Name :
ಶ್ರೀ ಸದ್ಗುರು ಶಿವಯೋಗಿ ವೀರಗಂಗಾಧರ ಹಾಲುಸ್ವಾಮಿಗಳು
Date of Birth :
20-11-1982
Place :
ಅಡವಿಹಳ್ಳಿ, ಹರಪನಹಳ್ಳಿ ತಾ||

Programs

ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಮುಳ್ಳುಗದ್ದುಗೆ ಉತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು. ದಸರಾದಲ್ಲಿ ಶ್ರೀ ದೇವಿ ಪುರಾಣ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.

Full Address Kannada

ಶ್ರೀ ಹಾಲೇಶ್ವರ ಬೃಹನ್ಮಠ
ಅಡವಿಹಳ್ಳಿ - 583 131
ಹರಪನಹಳ್ಳಿ ತಾ||, ದಾವಣಗೆರೆ ಜಿ||

Map

Near by Places

ಹರಪನಹಳ್ಳಿ - 4 ಕಿ.ಮೀ.
ಕೊಟ್ಟೂರು ರೋಡ್ - 3 ಕಿ.ಮೀ.
ದಾವಣಗೆರೆ - 50 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!