ಸುಮಾರು ಒಂದು ಶತಮಾನದ ಹಿಂದೆ ಶ್ರೀ ಶ್ರೀ ಸಣ್ಣ ಹಾಲಸ್ವಾಮಿಗಳಿಂದಹರಪನಹಳ್ಳಿ ಪಟ್ಟಣದ ಹೊರಭಾಗದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀಹಾಲಸ್ವಾಮಿ ಮಠವು ಈ ಭಾಗದ ಜನರಲ್ಲಿ ದರ್ಮ ಜಾಗೃತಿಯನ್ನು ಮೂಡಿಸುವಲ್ಲಿಯಶಸ್ವಿಯಾಗಿದೆ.ಶ್ರೀ ಮಠವು ಈ ಭಾಗದಲ್ಲಿ ಮಠದ ಕಾರ್ಯಕ್ರಮಗಳ ಮೂಲಕ ಹಾಗೂಹಾಲಸ್ವಾಮಿ ಪರಂಪರೆಯಲ್ಲಿ ಅನೂಚಾನವಾಗಿ ನಡೆದು ಬಂದಿರುವ ಧಾರ್ಮಿಕಸಂಪ್ರದಾಯಗಳ ಮೂಲಕ ಭಕ್ತರಿಗೆ ಭಕ್ತಿಮಾರ್ಗದಲ್ಲಿ ನಡೆಯಲು ಮಾರ್ಗದರ್ಶನನೀಡುತ್ತಾ ಬಂದಿದೆ.ಈಗಿನ ಶ್ರೀಗಳಾದ ಶ್ರೀ ಶ್ರೀ ಹಾಲಸ್ವಾಮಿಗಳು ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳುಗ್ರಾಮದಲ್ಲಿ 1966ರಲ್ಲಿ ಜನಿಸಿದ್ದು ಶ್ರೀ ಮಠದ ಉತ್ತರಾಧಿಕಾರಿಗಳಾಗಿ ಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಶ್ರೀ ಮಠದಲ್ಲಿ ನಿತ್ಯ ಪೂಜೆ ಪುನಸ್ಕಾರಗಳ ಜೊತೆಗೆ ಪ್ರತಿ ಅಮವಾಸ್ಯೆಹಾಗೂ ಹುಣ್ಣಿಮೆಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಲಿದ್ದಾರೆ.ಪ್ರತಿವರ್ಷ ಆಶ್ವೀಜ ಶುದ್ಧ ದ್ವಾದಶಿಗೆ ಶ್ರೀ ಮಠದ ಜಾತ್ರೆ ಹಾಗೂ ಮುಳ್ಳುಗದ್ದುಗೆ ಉತ್ಸವಜರುಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಹಾಲಸ್ವಾಮಿಗಳು
Date of Birth :
01-6-1966
Place :
ಹೆಬ್ಬಾಳು, ಶಿರಹಟ್ಟಿ ತಾ.
Programs
ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ವಿಶೇಷ ಪೂಜೆ.
ಆಶ್ವೀಜ ಶುದ್ಧ ದ್ವಾದಶಿಗೆ ಶ್ರೀಮಠದ ಜಾತ್ರೆ, ಮುಳ್ಳುಗದ್ದುಗೆ ಉತ್ಸವ.
Full Address Kannada
ಶ್ರೀ ಹಾಲಸ್ವಾಮಿ ಮಠ
ವಾಲ್ಮೀಕಿ ನಗರ, ಹರಪನಹಳ್ಳಿ - 583 131
ದಾವಣಗೆರೆ ಜಿ.