ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೇಂದ್ರದಿಂದ ಸುಮಾರು 27 ಕಿ.ಮೀ.ದೂರದಲ್ಲಿರುವ ಬಸವಾಪಟ್ಟಣ ಗ್ರಾಮದ ಸಮೀಪದ ಗುಡ್ಡದ ಮೇಲೆ ಶ್ರೀ ಹಾಲಸಿದ್ದೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಾಲಸ್ವಾಮಿ ಮಠವು, ಶ್ರೀ ಕಾಶೀಪೀಠದಶಾಖಾಮಠವಾಗಿದ್ದು ತನ್ನ ವಿಶಿಷ್ಟ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಅರಿವನ್ನು ಮೂಡಿಸುತ್ತಿದೆ. ಶ್ರೀಮಠವು ವಿಶಿಷ್ಟವಾದ ಹಾಲಸ್ವಾಮಿಪರಂಪರೆಯನ್ನು ಹೊಂದಿದ್ದು ಆ ಪರಂಪರೆಯ ಮೂಲ ಕೇಂದ್ರಗಳಲ್ಲಿ ಒಂದಾಗಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ಹಾಲಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮತಪೋಪ್ರಭಾವದಿಂದ ಈ ಭಾಗದ ಜನರ ಸಮಸ್ಯೆಗಳನ್ನು ನಿವಾರಿಸಿದ್ದು, ಭೂತಚೇಷ್ಟೆಗಳಿಂದ ಕಾಪಾಡುತ್ತಿದ್ದರೆಂದು ಹೇಳಲಾಗುತ್ತದೆ. ಆ ಕಾರಣಗಳಿಂದಾಗಿಯೇ ಶ್ರೀಮಠವಿರುವಗುಡ್ಡಕ್ಕೆ ಹಾಲಸ್ವಾಮಿಗಿರಿಯೆಂದುಕರೆಯಲಾಗುತ್ತದೆ.ಶ್ರೀ ಮಠದ ಪರಂಪರೆ ಹಾಗೂ ರಾಂಪುರದ ಶ್ರೀ ಹಾಲಸ್ವಾಮಿ ಮಠದಪರಂಪರೆ ಒಂದೇ ಆಗಿದ್ದು ಈಗ ಎರಡೂ ಮಠಗಳು ಒಂದೇ ಆಡಳಿತಕ್ಕೆ ಒಳಪಟ್ಟಿವೆ.ಪರಂಪರೆಯ ಎಲ್ಲಾ ಗುರುಗಳು ಶ್ರಾವಣ ಮಾಸದಲ್ಲಿ ಕರ್ತೃ ಗುರುಗಳು ಅನುಷ್ಠಾನಕ್ಕೆಕುಳಿತಿದ್ದ ಗವಿಯಲ್ಲಿಯೇ ಅನುಷ್ಠಾನಕ್ಕೆ ಕುಳಿತುಕೊಳ್ಳುವ ಪರಂಪರೆ ಬೆಳೆದುಬಂದಿದೆ. ಈಗವಿಯು ಮಠದ ಪೂಜ್ಯನೀಯ ಸ್ಥಳವಾಗಿದ್ದು ನಿತ್ಯ ಪೂಜೆ ನಡೆಯುತ್ತದೆ.ಈಗಿನ ಹಿರಿಯ ಗುರುಗಳಾದ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯಹಾಲಸ್ವಾಮಿಗಳು ಶ್ರೀಮಠವನ್ನು ಅಭಿವೃದ್ದಿಪಡಿಸಿದ್ದು ಪ್ರಸ್ತುತ ಕಿರಿಯ ಶ್ರೀಗಳಾದ ಶ್ರೀವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳನ್ನು 1996ರ ಡಿಸೆಂಬರ್ 25ರಲ್ಲಿ ಪಟ್ಟಕ್ಕೆ ತಂದುನಿವೃತ್ತರಾಗಿದ್ದಾರೆ. ಕಿರಿಯ ಶ್ರೀಗಳು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.ಈ ಕ್ಷೇತ್ರವು ಜಾಗೃತ ಸ್ಥಳವಾಗಿರುವುದರಿಂದ ಬರುವ ಅಪಾರ ಸಂಖ್ಯೆಯಭಕ್ತರಿಗೆ ನಿತ್ಯ ಅನ್ನ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀಮಠದಲ್ಲಿ ಸೀಗೆಹುಣ್ಣಿಮೆಯ ನಂತರ ವಿಶಿಷ್ಟವಾದ ಮುಳ್ಳುಗದ್ದುಗೆ ಉತ್ಸವ ನಡೆಯುತ್ತದೆ.
Swamiji
Swamiji Name :
ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮಿಗಳು
Date of Birth :
1924
Place :
ರಾಂಪುರ, ಹೊನ್ನಾಳಿ ತಾ||
Pattadikara :
1934
Photo :
Swamiji Name :
ಶ್ರೀ ಷ.ಬ್ರ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು
Date of Birth :
20-7-1965
Place :
ರಾಂಪುರ, ಹೊನ್ನಾಳಿ ತಾ||
Pattadikara :
25-12-1996
Photo :
Programs
ಪ್ರತಿ ಅಮವಾಸ್ಯೆಗೆ ಭಕ್ತರ ಕಷ್ಟಗಳಿಗೆ ಶ್ರೀಗಳಿಂದ ಆಶೀರ್ವಾದ.
ಅಶ್ವೀಜ ಮಾಸ ಸೀಗೆ ಹುಣ್ಣಿಮೆಯ ನಂತರ ಮುಳ್ಳುಗದ್ದುಗೆ ಉತ್ಸವ ಹಾಗೂ ಶ್ರೀಗಳ ಕಾರ್ಣೀಕ.
ಕಾರ್ತಿಕ ಮಾಸದಲ್ಲಿ 21ದಿನ ಶ್ರೀಗಳ ಇಷ್ಟಲಿಂಗ ಅನುಷ್ಠಾನ, ರಥೋತ್ಸವ, ಸಾಮೂಹಿಕ ವಿವಾಹ, ಕುಂಭಾಭಿಷೇಕ ಮತ್ತು ಉಚಿತ ಶಿವದೀಕ್ಷೆ.