Shree Halaguru Brahanmatha

Shree Halaguru Brahanmatha Claimed

ಶ್ರೀ ಹಲಗೂರು ಬೃಹನ್ಮಠ

Average Reviews

Description

ಶ್ರೀ ಹಲಗೂರು ಬೃಹನ್ಮಠ – ಹಲಗೂರು

ಕರ್ತೃ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು

ಹಲಗೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಹಲಗೂರು ಬೃಹನ್ಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪಂಚಾಚಾರ್ಯ ತತ್ತ್ವಗಳನ್ನು ಪ್ರಚುರಪಡಿಸುತ್ತಾಬಂದಿದೆ. ಜಗದ್ಗುರು ರೇವಣಸಿದ್ದರು ಅನುಷ್ಟಾನಗೊಂಡಿದ್ದ ಸ್ಥಳದಲ್ಲಿ 15ನೇ ಶತಮಾನದಲ್ಲಿಶ್ರೀ ಶಾಂತಲಿಂಗ ಶಿವಾಚಾರ್ಯರು ಅನುಷ್ಠಾನಗೊಂಡು ಶ್ರೀ ಬೃಹನ್ಮಠವನ್ನುಸ್ಥಾಪಿಸಿದರೆಂದು ತಿಳಿದುಬರುತ್ತದೆ. ಶ್ರೀಮಠದ ಮೂಲ ಸ್ಥಳ “ಬಸವನಬೆಟ್ಟ”ವಾಗಿದ್ದು ಅಲ್ಲಿಈಗಲೂ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು ಮುಜರಾಯಿ ಇˉÁಖೆಗೆ ಸೇರಲ್ಪಟ್ಟಿದೆ.ಶ್ರೀ ಶಾಂತಲಿಂಗ ಶಿವಾಚಾರ್ಯರಿಂದ ಬಸವನಬೆಟ್ಟದಲ್ಲಿ ಸ್ಥಾಪಿತಗೊಂಡಿದ್ದಶ್ರೀಮಠವನ್ನು ಹಲಗೂರಿಗೆ ಸ್ಥಳಾಂತರಿಸಿದವರು ಏಳನೇ ಗುರುಗಳಾದ ಶ್ರೀ ರುದ್ರಮುನೀಂದ್ರಶಿವಾಚಾರ್ಯ ಸ್ವಾಮಿಗಳು. ಆದರೆ ಇವರ ಕುರಿತಾಗಲೀ ನಂತರ ಬಂದ ಗುರುಗಳಕುರಿತಾಗಲೀ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. 35ನೇ ಗುರುಗಳಾದ ಶ್ರೀ ಮಹಾದೇವಶಿವಾಚಾರ್ಯರು ಗುರುಕುಲವನ್ನು ಸ್ಥಾಪಿಸಿದ್ದು ಆನಂತರದ ಶ್ರೀ ವೀರಭದ್ರಶಿವಾಚಾರ್ಯರು “ಪಾಮಾರ್ಥಧಾಮ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರಡಿಯಲ್ಲಿ”ಅಭಯಕಲ್ಪ”, “ಶ್ವೇತಪ್ರಭ”, “ಶಿವಾಕ್ಯ ನಿರೀಕ್ಷೆ”, “ಶಿವೋಪಾಸ ನವಿವೇಕ”, “ಇಷ್ಟಲಿಂಗಾರ್ಚನಾರಹಸ್ಯ” ಎಂಬ ಪಂಚಗ್ರಂಥಗಳನ್ನು ರಚಿಸಿದ್ದರು.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ರೇಣುಕ ರಾಜೇಂದ್ರಶಿವಾಚಾರ್ಯ ಸ್ವಾಮಿಗಳ ಕುರಿತಂತೆ ಮಾಹಿತಿಗಳಿಲ್ಲ. ನಂತರದಲ್ಲಿ ಬಹುಕಾಲ ಶ್ರೀಮಠವುಖಾಲಿ ಉಳಿದಿದ್ದು ನಂತರ ಈಗಿನ ಶ್ರೀಗಳನ್ನು ಊರಿನ ಭಕ್ತರು ಕರೆತಂದರು.ಚಿಕ್ಕವಯಸ್ಸಿನˉÉ್ಲೀ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಶ್ರೀ ಷ.ಬ್ರ. ರುದ್ರಮುನಿಶಿವಾಚಾರ್ಯ ಸ್ವಾಮಿಗಳು ಜಗಳೂರು ತಾ|| ಬಿದರಕೆರೆ ಗುಡ್ಡದ ಒಳಗೆ ಇರುವ ಜಗದ್ಗುರುಗುರುಸಿದ್ದೇಶ್ವರ ಪಂಚಗ್ರಹ ಹಿರೇಮಠದ ಪೀಠಾಧಿಪತಿಗಳಾಗಿದ್ದರು. ನಂತರ ಹಲಗೂರಿನಭಕ್ತರು ಇವರನ್ನು ಕರೆತಂದು 1998ರ ಸೆಪ್ಟಂಬರ್ 18ರಲ್ಲಿ ಶ್ರೀ ಹಲಗೂರು ಬೃಹನ್ಮಠಕ್ಕೆಪಟ್ಟಾಧಿಕಾರ ನೀಡಿದರು. ಪ್ರಸ್ತುತ ಶ್ರೀಗಳು ಉಭಯ ಮಠಗಳನ್ನೂ ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಉತ್ತಮ ಬರಹಗಾರರು, ವಾಗ್ಮಿಗಳೂ ಆಗಿದ್ದುಬಹಳಷ್ಟು ಸೆಮಿನಾರ್ಗಳನ್ನು ಮಾಡಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
15-02-1971
Place :
ಬಿದರಕೆರೆ, ಜಗಳೂರು ತಾ||
Pattadikara :
18-09-1998
Photo :

Programs

ಧನುರ್ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಪುಷ್ಯ ಮಾಸದ ಶುದ್ಧ ಚತುರ್ದಶಿಯಂದು ಶ್ರೀ ಜಗದ್ಗುರು ಪಂಚಾಚಾರ್ಯರ ಹಾಗೂ ಲಿಂ|| ಶ್ರೀ ಷ.ಬ್ರ. ವೀರಭದ್ರೇಶ್ವರ ಶಿವಾಚಾರ್ಯರ ಪುಣ್ಯ ಸ್ಮರಣೆ ಕಾರ್ತಿಕ ಮಾಸದಲ್ಲಿ ಶಿವ ದೀಪೋತ್ಸವ

Photos

Full Address Kannada

ಶ್ರೀ ಹಲಗೂರು ಬೃಹನ್ಮಠ
ಹಲಗೂರು - 571 421
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಮಳವಳ್ಳಿ - 30 ಕಿ.ಮೀ.
ಕನಕಪುರ - 30 ಕಿ.ಮೀ.
ಸಾತನೂರು - 10 ಕಿ.ಮೀ.

Statistic

35 Views
0 Rating
0 Favorite
0 Share
error: Content is protected !!