ಕರ್ತೃ ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಶ್ರೀಗುರುಸಿದ್ಧೇಶ್ವರ ಸಂಸ್ಥಾನ ಮಠವು ಶ್ರೀಶೈಲ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಬಳಗಾನೂರಿನಿಂದ ಸಂಚಾರ ಬಂದುಹಳ್ಳಿಖೇಡ(ಬಿ)ದಲ್ಲಿ ನೆಲೆಸಿದ ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳುಶ್ರೀಮಠವನ್ನು ಸ್ಥಾಪಿಸಿದ್ದು ತಮ್ಮ ಧಾರ್ಮಿಕ ಆಚರಣೆಗಳು ಹಾಗೂ ಪ್ರವಚನಗಳ ಮೂಲಕಭಕ್ತರನ್ನುದ್ಧರಿಸಿದ್ದರು ಎಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರ ಐದು ಜನ ಶ್ರೀಗಳು ಶ್ರೀಮಠದ ಪಟ್ಟಕ್ಕೆ ಬಂದು ತಮ್ಮಆಚರಣೆಗಳ ಮೂಲಕ ಶ್ರೀಮಠವನ್ನು ಬೆಳೆಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು ಆಧ್ಯಾತ್ಮ ಪುರುಷರಾಗಿದ್ದು ಭಕ್ತರಲ್ಲಿ ಧಾರ್ಮಿಕಅರಿವನ್ನು ಮೂಡಿಸುತ್ತಿದ್ದರು. 1991ರಲ್ಲಿ ಪ್ರಸ್ತುತ ಶ್ರೀಗಳನ್ನು ಉತ್ತರಾಧಿಕಾರಿಗಳಾಗಿನೇಮಿಸಿಕೊಂಡ ಶ್ರೀಗಳು 2003ರಲ್ಲಿ ಲಿಂಗೈಕ್ಯರಾದರು.ಹಿರಿಯ ಗುರುಗಳಿರುವಾಗಲೇ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದ ಈಗಿನಶ್ರೀಗಳು 2005ರ ನವೆಂಬರ್ 27ರಲ್ಲಿ ಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮಠದ ಸಂಪೂರ್ಣ ಅಧಿಕಾರ ವಹಿಸಿಕೊಂಡರು.ಶ್ರೀಮಠದ ಧಾರ್ಮಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದ ಶ್ರೀಗಳು ಶ್ರೀಮಠದಅಭಿವೃದ್ಧಿಯೆಡೆಗೆ ಚಿತ್ತಹರಿಸಿದ್ದಾರೆ. ಶ್ರೀಗಳು ಪದವಿಪೂರ್ವ ಶಿಕ್ಷಣವನ್ನು ಕಮಲಾನಗರದಲ್ಲಿಪಡೆದು ಆನಂತರ ಆಧ್ಯಾತ್ಮ ಶಿಕ್ಷಣವನ್ನು ಗದಗದ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿಪಡೆದಿದ್ದಾರೆ. ಶ್ರಿಮಠದಲ್ಲಿ ಒಟ್ಟು ಐದು ಗದ್ದುಗೆಗಳನ್ನು ಕಾಣಬಹುದಾಗಿದ್ದು ನಿತ್ಯ ಪೂಜೆಗೆಒಳಪಟ್ಟಿವೆ.
Swamiji
Swamiji Name :
ಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
4-11-1981
Place :
ಹಳ್ಳಿಖೇಡ (ಬಿ), ಹುಮನಾಬಾದ್ ತಾ||
Pattadikara :
27-11-2005
Programs
ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
ವರ್ಷದ ಕಾರ್ಯಕ್ರಮಗಳು
Full Address Kannada
ಶ್ರೀ ಗುರುಸಿದ್ದೇಶ್ವರ ಸಂಸ್ಥಾನ ಮಠ
ಹಳ್ಳಿಖೇಡ (ಬಿ) ಹುಮನಾಬಾದ್
ತಾ||, ಬೀದರ್ ಜಿ||