Shree Gurunanjeshwara Virakta Matha – Bharatanuru

Shree Gurunanjeshwara Virakta Matha – Bharatanuru Claimed

ಶ್ರೀ ಗುರುನಂಜೇಶ್ವರ ವಿರಕ್ತ ಮಠ - ಭರತನೂರು

Average Reviews

Description

ಶ್ರೀ ಗುರುನಂಜೇಶ್ವರ ವಿರಕ್ತ ಮಠ – ಭರತನೂರು

ಕರ್ತೃ ಶ್ರೀ ಮ.ನಿ.ಪ್ರ. ಗುರುನಂಜೇಶ್ವರ ಶಿವಯೋಗಿಗಳು

ಚಿತ್ತಾಪುರ ತಾಲ್ಲೂಕಿನ ಭರತನೂರು ಗ್ರಾಮದ ಹೊರಭಾಗದಲ್ಲಿ ಶ್ರೀಗುರುನಂಜೇಶ್ವರ ವಿರಕ್ತಮಠವು ಸ್ಥಾಪನೆಯಾಗಿ ಈ ಭಾಗದ ಧಾರ್ಮಿಕ ಆಚರಣೆ ಹಾಗೂಶೈಕ್ಷಣಿಕ ಪ್ರಗತಿಯ ಪ್ರತೀಕವಾಗಿ ನಿಂತಿದೆ. ಶ್ರೀಮಠದ ಕಾರಣದಿಂದಾಗಿ ಭರತನೂರುಗ್ರಾಮವು ಹೆಚ್ಚು ಪ್ರಸಿದ್ದಿ ಪಡೆದಿದೆ. ಶ್ರೀಮಠವು ಪ್ರಾಚೀನ ಪರಂಪರೆಯನ್ನು ಪಡೆದು ಬೆಳೆದುಬಂದಿದ್ದು ಶ್ರೀಮಠದ ಕರ್ತೃ ಗುರುಗಳು ಶ್ರೀ ಮ.ನಿ.ಪ್ರ. ಗುರುನಂಜೇಶ್ವರ ಶಿವಯೋಗಿಗಳು.ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಉತ್ತರದ ಕಡೆಯಿಂದ ಸಂಚಾರ ಬಂದುಭರತನೂರು ಗ್ರಾಮದ ಹೊರಭಾಗದ ನಿರ್ಜನ ಪ್ರದೇಶದಲ್ಲಿ ಅನುಷ್ಠಾನದಲ್ಲಿರುತ್ತಾರೆ. ಕಾಡುಪ್ರಾಣಿಗಳ ಆವಾಸ ಸ್ಥಾನವಾಗಿದ್ದ ಈ ಪ್ರದೇಶದಲ್ಲಿ ನೆಲೆನಿಂತಿದ್ದ ಶ್ರೀಗಳು ಶಿವಯೋಗಸಿದ್ದಿಯನ್ನು ಸಾದಿಸುತ್ತಿದ್ದರು. ಕೆಲ ಕಾಲದ ನಂತರ ಜನರಿಗೆ ಅನಿರೀಕ್ಷಿತವಾಗಿ ಗುರುಗಳದರ್ಶನವಾಗಿ ಜನರು ಶ್ರೀಗಳನ್ನು ಗೌರವದಿಂದ ಗ್ರಾಮಕ್ಕೆ ಕರೆತಂದು ಪೂಜಿಸುತ್ತಾರೆ.ಗುರುಗಳು ತಮ್ಮ ಕುಟೀರದಲ್ಲಿ ಅನುಷ್ಠಾನದಲ್ಲಿರುತ್ತ ಬಂದ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುತ್ತಾ ದಿನೇದಿನೇ ಪ್ರಸಿದ್ಧಿಗೊಳ್ಳುತ್ತಾರೆ. ಭಕ್ತರು ಗುರುಗಳು ನೆಲೆನಿಂತ ಜಾಗದಲ್ಲಿಮಠವನ್ನು ಸ್ಥಾಪಿಸಿಕೊಟ್ಟಿದ್ದು ಅಂದು ಸ್ಥಾಪಿತಗೊಂಡ ಮಠವು ಈವರೆಗೂ ಅಸಂಖ್ಯಭಕ್ತರನ್ನು ಪೆÇರೆಯುವ ಜಾಗೃತ ಸ್ಥಳವಾಗಿದೆ.ಕರ್ತೃಗುರುಗಳ ಕರ್ತೃತ್ವ ಶಕ್ತಿಯಿಂದ ಬೆಳಗಿದ ಶ್ರೀಮಠವು ಈವರೆಗೂ 10 ಜನಶ್ರೀಗಳ ಮುಖೇನ ಧರ್ಮಕಾರ್ಯಗಳನ್ನು ಮುನ್ನಡೆಸಿಕೊಂಡು ಬಂದಿದೆ. ಶ್ರೀಮಠದಪರಂಪರೆಯಲ್ಲಿ ಈವರೆಗೂ ಬಂದಿರುವ ಎಲ್ಲಾ ಶ್ರೀಗಳು ಕರ್ತೃ ಗುರುಗಳ ಹೆಸರನ್ನೇಅಭಿದಾನ ಪಡೆದು ಅಧಿಕಾರ ಸ್ವೀಕರಿಸಿದ್ದು ಶ್ರೀ ಗುರುನಂಜೇಶ್ವರ ಮಹಾಸ್ವಾಮಿಗಳ ಹೆಸರನ್ನುಶಾಶ್ವತಗೊಳಿಸಿದ್ದಾರೆ. ಈ ಕಾರಣದಿಂದಾಗಿ ಶ್ರೀಮಠವನ್ನು ಶ್ರೀ ಗುರುನಂಜೇಶ್ವರವಿರಕ್ತಮಠವೆಂದೇ ಕರೆಯಲಾಗುತ್ತದೆ.ಶ್ರೀಮಠದ ಪರಂಪರೆಯಲ್ಲಿ ಈವರೆಗೂ 10 ಜನ ಶ್ರೀಗಳು ಪಟ್ಟಕ್ಕೆ ಬಂದುಅಧಿಕಾರ ನಡೆಸಿದ್ದು ಎಲ್ಲಾ ಗುರುಗಳೂ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿ ಉಳ್ಳವರಾಗಿಮಠವನ್ನು ಬೆಳೆಸಿದ್ದಾರೆ. ಕಾಯಕ ತತ್ತ್ವದಲ್ಲಿ ನಂಬಿಕೆಯುಳ್ಳವರಾಗಿ ಕ್ರಿಯಾಶೀಲವ್ಯಕ್ತಿತ್ವದಿಂದ ಜ್ಯಾತ್ಯಾತೀತ ಸಮಾಜವನ್ನು ಶರಣರು ಕಂಡಂತೆ ನಿರ್ಮಿಸಬೇಕೆಂಬಹಂಬಲವನ್ನು ಹೊಂದಿ ಆ ನಿಟ್ಟಿನಲ್ಲಿ ಎಲ್ಲಾ ಗುರುಗಳು ಶ್ರಮಿಸಿದ್ದಾರೆ ಹಾಗೂ ಸಮಷ್ಠಿಸಮಾಜದ ಅಭಿವೃದ್ದಿಗೆ ಶ್ರಮಿಸಿ ಜಾತಿ ಬೇದವನ್ನು ತೊಡೆದು ಹಾಕಲು ಶ್ರಮಿಸಿದರು.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಗುರುನಂಜೇಶ್ವರಮಹಾಸ್ವಾಮಿಗಳು ದೀನ ದಲಿತರ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಅವರ ಉದ್ದಾರಕ್ಕೆ ಶ್ರಮಿಸಿದ್ದು ತಮ್ಮ ಕಾಲಾವದಿಯಲ್ಲಿ ಜಾತಿ ನಿರ್ಮೂಲನೆ ಮಾಡಿ ಸಮಾಜದಲ್ಲಿಸಮಾನತೆಯನ್ನು ತರಲು ಶ್ರಮಿಸಿದರು. ಶ್ರೀಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿದಶ್ರೀಗಳು 1994ರ ಮಾರ್ಚ್ 31ರಲ್ಲಿ ಲಿಂಗೈಕ್ಯರಾಗಿದ್ದು ಹಿಂದಿನ ಶ್ರೀಗಳಿರುವಾಗಲೇ ಪ್ರಸ್ತುತಶ್ರೀಗಳನ್ನು ನೇಮಕಗೊಳಿಸಲಾಗಿತ್ತು.ಹಿಂದಿನ ಶ್ರೀಗಳ ಕರಕಮಲ ಸಂಜಾತರಾಗಿ ಧಾರ್ಮಿಕ ಸಂಸ್ಕಾರವನ್ನು ಪಡೆದಿದ್ದಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು 2000ನೇ ಏಪ್ರಿಲ್09ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದರು. ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಶ್ರೀಗಳು ಗದಗದಲ್ಲಿ ಡಿಪ್ಲೋಮ ಇನ್ ಮೆಕಾನಿಕಲ್ಪದವಿ ಪಡೆದರು. ಆನಂತರ ಮೈಸೂರಿನ ಸುತ್ತೂರು ಮಠದಲ್ಲಿ ಸಂಸ್ಕøತ, ವೈದಿಕಾ, ವೇದವಿಷಯಗಳಲ್ಲಿ ಬಿ.ಎ. ಪದವಿ ಪೂರೈಸಿದರು. ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆಮರಳಿದ ಶ್ರೀಗಳು ಮಠದ ಅಧಿಕಾರವನ್ನು ಸ್ವೀಕರಿಸಿ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಪ್ರಸ್ತುತ ಶ್ರೀಗಳು ಪ್ರಗತಿ ಪರ ಧಾರ್ಮಿಕ ಚಿಂತಕರಾಗಿದ್ದು ವಾಸ್ತವ ನೆಲೆಗಟ್ಟಿನಲ್ಲಿಚಿಂತಿಸಿ ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಅವಲೋಕಿಸಿಧರ್ಮವನ್ನು ಬೆಳೆಸುತ್ತಿದ್ದಾರೆ. ಬಸವಾದಿ ಶರಣರು ರೂಪಿಸಿದ ಜ್ಯಾತ್ಯಾತೀತ ಸಮಾಜದಕಲ್ಪನೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಜನಸಾಮಾನ್ಯರ ಅಭಿವೃದಿ್ಧಗೆ ಹಾಗೂಅಂದಕಾರದಲ್ಲಿರುವ ಅಸಹಾಯಕರಿಗೆ ಬೆಳಕನ್ನು ತೋರಿಸುತ್ತಿದ್ದಾರೆ. ಶ್ರೀಗಳು ಹಿಂದಿನಗುರುಗಳು ಪ್ರಾರಂಭಿಸಿದ್ದ ಶ್ರೀಮಠದ ರಥೋತ್ಸವವನ್ನು ವಿಜೃಂಭಣೆಯಿಂದ ಜರುಗಿಸುತ್ತಿದ್ದುಅಪಾರ ಜನಸ್ತೋಮ ಪಾಲ್ಗೊಳ್ಳುತ್ತದೆ.ಕರ್ತೃಗುರುಗಳಾದ ಶ್ರೀ ಗುರುನಂಜೇಶ್ವರ ಶಿವಯೋಗಿಗಳು ಅನುಷ್ಠಾನಕೈಗೊಂಡು ಸ್ಥಾಪಿಸಿದ್ದ ಮಠಗಳು ಇಂದಿಗೂ ಶ್ರೀಮಠದ ಶಾಖಾಮಠಗಳಾಗಿ ಬೆಳೆದುಬಂದಿದ್ದು. ಈಗಿನ ಗುರುಗಳು ಈ ಎಲ್ಲಾ ಮಠಗಳ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ. ಪ್ರತಿವರ್ಷ ಮಾಘ ಮಾಸದ ಶುದ್ಧ ಚೌತಿಗೆ 11 ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮನಡೆಸುತ್ತಿದ್ದು ಕೊನೇ ದಿನ ಮಂಗಳಕ್ಕೆ “ಪ್ರಗತಿ ಪರ ರೈತರು” ಪ್ರಶಸ್ತಿಯನ್ನುವಿತರಿಸಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು
Date of Birth :
01-01-1970
Place :
ಜಂಬಗಿ ಕೆ.ಡಿ., ಜಮಖಂಡಿ ತಾ||
Pattadikara :
09-04-2000
Photo :

Programs

ಪ್ರತಿ ನಿತ್ಯ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳು ಅಶ್ವಿಜ ಶುದ್ಧ ಪಂಚಮಿಯಂದು ಶ್ರೀ ಮಠದ ರಥೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು
ಮಾಘ ಶುದ್ಧ ಚೌತಿಗೆ 9ನೇ ಶ್ರೀಗಳು ಲಿಂ|| ಶ್ರೀ ಮ.ನಿ.ಪ್ರ. ಗುರುನಂಜೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಹಾಗೂ 11 ದಿನಗಳ ಪುರಾಣ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ ಗೋಶಾಲೆ

Photos

Full Address Kannada

ಶ್ರೀ ಗುರುನಂಜೇಶ್ವರ ವಿರಕ್ತ ಮಠ
ಭರತನೂರು, ರಾಜಾಪುರ ಪೋಸ್ಟ್ - 585312
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಕಾಳಗಿ - 3 ಕಿ.ಮೀ.
ಕೋಡ್ಲಿಕ್ರಾಸ್ - 8 ಕಿ.ಮೀ.
ಚಿತ್ತಾಪುರ - 30 ಕಿ.ಮೀ.
ಮಹಾಗಾಂವ ಕ್ರಾಸ್ - 40 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!