ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವದೊಡ್ಡಬೂವಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಗುರುಮˉÉ್ಲೀಶ್ವರದಾಸೋಹ ಮಠವು ಸುತ್ತೂರು ಶ್ರೀ ಶಿವರಾತ್ರೀಶ್ವರ ಮಠದ ಶಾಖಾಮಠವಾಗಿಪ್ರಚಲಿತದಲ್ಲಿದೆ. 1959ರ ಮಾಚ್ 29ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಮˉÉ್ಲೀಶ್ವರದಾಸೋಹ ಮಠದ ಸ್ಥಾಪಕ ಗುರುಗಳು ಪೂಜ್ಯ ಶ್ರೀ ಮರಿಬಸಪ್ಪ ಸ್ವಾಮಿಗಳು.;ನರಸೀಪುರ ತಾಲ್ಲೂಕಿನ ಬಿನಕನಹಳ್ಳಿಯಿಂದ ಸಂಚಾರದಲ್ಲಿ ದೊಡ್ಡಬೂವಳ್ಳಿಗ್ರಾಮಕ್ಕೆ ಆಗಮಿಸಿದ ಶ್ರೀ ಮರಿಬಸಪ್ಪ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಸ್ಥಾಪಿಸಿದರು. ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸಲು ಶ್ರಮಿಸಿದ ಶ್ರೀಗಳು 1959ರˉÉ್ಲೀ ಈಗಿನ ಶ್ರೀಗಳಾದ ಪೂಜ್ಯ ಶ್ರೀಶಿವಪ್ಪಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡಿದ್ದರು.ಪ್ರಸ್ತುತ ಶ್ರೀಗಳಾದ ಪೂಜ್ಯ ಶ್ರೀ ಶಿವಪ್ಪ ಸ್ವಾಮಿಗಳು 1941ರ ಜನವರಿ 17ರಂದುಮಳವಳ್ಳಿ ತಾಲ್ಲೂಕಿನ ಇದೇ ದೊಡ್ಡಬೂವಳ್ಳಿ ಗ್ರಾಮದವರಾಗಿದ್ದು ಕರ್ತೃ ಗುರುಗಳ ಕೃಪಾದೃಷ್ಟಿಗೆ ಬಿದ್ದು ಅವರ ಸೇವೆ, ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು. ಸದಾ ಭಕ್ತರಒಳಿತಿಗಾಗಿ ಶ್ರಮಿಸುತ್ತಾ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳು 1990ರಲ್ಲಿಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀ ಶಿವಪ್ಪ ಸ್ವಾಮಿಗಳು ಸದಾ ಕ್ರಿಯಾಶೀಲರಾಗಿ ಭಕ್ತರ ಸಹಕಾರದೊಂದಿಗೆಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿಕಾರ್ಯೋನ್ಮುಖರಾಗಿದ್ದಾರೆ. 2007ರ ನವೆಂಬರ್ 22ರಲ್ಲಿ ಶ್ರೀಮಠಕ್ಕೆ ನೂತನ ಕಟ್ಟಡವನ್ನುನಿರ್ಮಿಸಿರುವ ಶ್ರೀಗಳು ಮುಂದೆ ಪ್ರಾರ್ಥನಾ ಮಂದಿರ ಹಾಗೂ ಬಸವ ಮಂದಿರಗಳನ್ನುನಿರ್ಮಿಸುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದ್ದಾರೆ. ಕರ್ತೃ ಗುರುಗಳ ಗದ್ದುಗೆಯು ಶ್ರೀಮಠದಲ್ಲಿದ್ದುನಿತ್ಯ ಪೂಜೆಗೆ ಒಳಪಟ್ಟಿದೆ.
Swamiji
Swamiji Name :
ಶ್ರೀ ಷ.ಬ್ರ. ಶಿವಪ್ಪ ಸ್ವಾಮಿಗಳು
Date of Birth :
17-01-1941
Place :
ದೊಡ್ಡಬೂವಳ್ಳಿ, ಮಳವಳ್ಳಿ ತಾ||
Pattadikara :
1990
Photo :
Programs
ಪ್ರತಿ ಅಮವಾಸÉ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ವೈಶಾಖ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ