Shree Gurulochaneshwara Vkrakta Matha

Shree Gurulochaneshwara Vkrakta Matha Claimed

ಶ್ರೀ ಗುರುಲೋಚನೇಶ್ವರ ವಿರಕ್ತಮಠ

Average Reviews

Description

ಶ್ರೀ ಗುರುಲೋಚನೇಶ್ವರ ವಿರಕ್ತಮಠ

ಕರ್ತೃ – ಪೂಜ್ಯ ಶ್ರೀ ಗುರು ಲೋಚನೇಶ್ವರ ಶಿವಯೋಗಿಗಳು

ಹದಿನಾರನೇ ಶತಮಾನವು ಶ್ರೀ ಎಡೆಯೂರು ಸಿದ್ದಲಿಂಗೇಶ್ವರರ ನಂತರದಪ್ರಮುಖ ಕಾಲಘಟ್ಟ. ಶ್ರೀ ಸಿದ್ದಲಿಂಗೇಶ್ವರರ ಪ್ರಭಾವದಿಂದ ಹಾಗೂ ಬಸವಾದಿ ಶಿವಶರಣರಪ್ರೇರಣೆಯಿಂದ ನೂರಾರು ಮಠಗಳು ಕರ್ನಾಟಕದ ಉದ್ದಗಲಕ್ಕೂ ಸ್ಥಾಪಿತಗೊಂಡಿವೆ.ಹೀಗೆ ಈ ಕಾಲಘಟ್ಟದಲ್ಲಿ ಸ್ಥಾಪಿತಗÉೂಂಡಿರುವ ಶ್ರೀಗುರು ಲೋಚನೇಶ್ವರ ವಿರಕ್ತಮಠವುಕುಂದಗೋಳ ತಾಲ್ಲೂಕಿನ ಕಮಡೋಳ್ಳಿ ಗ್ರಾಮದಲ್ಲಿ ಅಸ್ತಿತ್ವದಲ್ಲಿದೆ. ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಗುರುಲೋಚನೇಶ್ವರ ಶಿವಯೋಗಿಗಳನ್ನು ಗುರುತಿಸಲಾಗಿದ್ದು ಇವರಹೆಸರಿನಿಂದಲೇ ಶ್ರೀಮಠವನ್ನು ಹೆಸರಿಸಲಾಗುತ್ತಿದೆ.ಕರ್ತೃಗುರುಗಳು ವೀರಶೈವ ತತ್ವಸಿದ್ಧಾಂತ, ಬಸವಾದಿ ಶಿವಶರಣರ ವಚನಸಾಹಿತ್ಯದ ಬಗ್ಗೆ ಆಳವಾದ ಅರಿವನ್ನು ಹೊಂದಿದ್ದು ಭಕ್ತರಲ್ಲಿನ ಮೂಢನಂಬಿಕೆ,ಅಂಧಶ್ರದ್ಧೆಗಳನ್ನು ಹೊಡೆದೋಡಿಸಲು ಬಹುವಾಗಿ ಶ್ರಮಿಸಿದರು. ಸದಾ ಸಂಚಾರಮಾಡುತ್ತಾ ಸುತ್ತಮುತ್ತಲಿನ ಭಾಗಗಳಲ್ಲಿ ಧರ್ಮದ ಪ್ರಸಾರವನ್ನು ಕೈಗೊಂಡಿದ್ದ ಶ್ರೀಗಳಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ. ಹಾಗೂ ಇವರ ನಂತರದಪರಂಪರೆಯ ಬಗ್ಗೆಯೂ ಸಂಶೋಧನೆ ನಡೆಸಬೇಕಿದೆ.ಪ್ರಸ್ತುತ ಶ್ರೀ ಮ.ನಿ.ಪ್ರ. ರಾಚೋಟೇಶ್ವರ ಮಹಾಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ. 1927ರ ಫೆಬ್ರವರಿ 23ರಂದು ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿಜನಿಸಿದ ಶ್ರೀಗಳು ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು ಹೊಂದಿದ್ದು 1962ರ ಏಪ್ರಿಲ್5ರಂದು ಶ್ರೀ ಗುರು ಲೋಚನೇಶ್ವರ ವಿರಕ್ತ ಮಠದ ಅಧಿಕಾರ ಸ್ವೀಕರಿಸಿದರು.ಶ್ರೀಗಳು ಸುಮಾರು 5 ದಶಕಗಳಿಗೂ ಅಧಿಕ ಕಾಲ ಶ್ರೀಮಠದ ಸರ್ವತೋಮುಖಅಭಿವೃದ್ಧಿಗೆ ಶ್ರಮಿಸುತ್ತಿದ್ದು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಬಸವ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಶ್ರೀಮಠದ ಜಾತ್ರಾಮಹೋತ್ಸವವು ವೈಶಾಖ ಮಾಸದಲ್ಲಿ ನಡೆಯುತ್ತಿದ್ದು ಅಪಾರ ಜನಸ್ತೋಮ ಪಾಲ್ಗೊಳ್ಳುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ರಾಚೋಟೇಶ್ವರ ಸ್ವಾಮಿಗಳು
Date of Birth :
23-2-1927
Place :
ಕಡಪಟ್ಟಿ, ಜಮಖಂಡಿ ತಾ||
Pattadikara :
5-4-1962
Photo :

Programs

ಬಸವಜಯಂತಿ ಆಚರಣೆ.
ವೈಶಾಖ ಮಾಸದಲ್ಲಿ ಶ್ರೀಮಠದ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ.

Institutions

ಪೂರ್ವ ಪ್ರಾಥಮಿಕ ಶಾಲೆ. ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಗುರುಲೋಚನೇಶ್ವರ ವಿರಕ್ತಮಠ
ಕಮಡೋಳ್ಳಿ - 581 113
ಕುಂದಗೋಳ ತಾ||, ಧಾರವಾಡ ಜಿ||

Map

Near by Places

ಕುಂದಗೋಳ - 8 ಕಿ.ಮೀ.
ಸಂಶಿ - 8 ಕಿ.ಮೀ. ಹುಬ್ಬಳ್ಳಿ - 28 ಕಿ.ಮೀ.
ಲಕ್ಷ್ಮೇಶ್ವರ - 30 ಕಿ.ಮೀ.

Statistic

65 Views
0 Rating
0 Favorite
0 Share
error: Content is protected !!