Shree Gurulinga Swamigala Gadduge Matha

Shree Gurulinga Swamigala Gadduge Matha Claimed

ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ

Average Reviews

Description

ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ

ಕರ್ತೃ ಪರಮಪೂಜ್ಯ ಶ್ರೀ ಗುರುಬಸವಲಿಂಗ ಸ್ವಾಮಿಗಳು

ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠವು ವಿಜಯಪುರ ಜಿಲ್ಲೆಬಸವನಬಾಗೇವಾಡಿ ತಾಲ್ಲೂಕು, ಮಸೂತಿಯ ಶ್ರೀ ಜಗದೀಶ್ವರ ಹಿರೇಮಠದಶಾಖಾಮಠವಾಗಿದ್ದು ಪಂಚಪೀಠದ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ.ಶ್ರೀ ಬಸವಲಿಂಗ ಸ್ವಾಮಿಗಳು ಬಸವನಬಾಗೇವಾಡಿ ತಾಲ್ಲೂಕಿನ ಮಸೂತಿಹಿರೇಮಠದಲ್ಲಿ 1894ರಲ್ಲಿ ಜನಿಸಿದವರು. ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರಪಾಠಶಾಲೆಯಲ್ಲಿ ವೈದಿಕ, ಜ್ಯೋತಿಷ್ಯವನ್ನು ಅಧ್ಯಯನ ಮಾಡಿದ ಶ್ರೀಗಳು ಮುಂದೆಉಜ್ಜಯಿನಿಯಲ್ಲಿ ಜಗದ್ಗುರುಗಳಿಂದ ಶಿವದೀಕ್ಷೆಯನ್ನು ಪಡೆದು ಅವರಲ್ಲಿಯೇ 12 ವರ್ಷಗಳಕಾಲ ವೇದ, ಆಗಮ, ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು.ಮುಂದೆ ಸಂಸಾರ ಬಂಧನಕ್ಕೆ ಒಳಗಾದ ಶ್ರೀಗಳು ಸಂಸಾರದಲ್ಲಿದ್ದು ಆಧ್ಯಾತ್ಮಸಾಧನೆ ಮಾಡಿದವರು. ದೂರದೃಷ್ಠಿ, ವಿಶಾಲ ಹೃದಯದ ಪೂಜ್ಯರು ವಿಶ್ವಕುಟುಂಬಿಯಾಗಿಸಕಲರಿಗೂ ಲೇಸನ್ನು ಬಯಸುತ್ತಾ ದಯೆ ಧರ್ಮದ ಮರ್ಮವನ್ನು ತಿಳಿಸಿಕೊಟ್ಟರು. ಜಾತಿಬೇದವ ಮಾಡದೆ ಎಲ್ಲರಲ್ಲಿಯೂ ನೀತಿ, ಪ್ರೀತಿ, ಭಾವೈಕ್ಯತೆಯನ್ನು ಬೆಳೆಸಿದರು.ಯಂಡಿಗೇರಿಯಲ್ಲಿ ಸುಂದರವಾದ ಮಠ ಕಟ್ಟಿಸಿದರು. ಇವರ ಪ್ರವಚನ ಕೇಳಲು ಜನತಂಡೋಪತಂಡವಾಗಿ ಬರುತ್ತಿತ್ತು. ಇವರ ಶಿಷ್ಯರು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿಯೂ ಇದ್ದು ಇಂದಿಗೂ ಗುರುಗಳ ಗದ್ದುಗೆ ದರ್ಶನಕ್ಕೆ ಬರುತ್ತಿದ್ದಾರೆ.ಇಂತಹ ಮಹಾಮಹಿಮ ಶ್ರೀಗಳು ತ್ರಿಕಾಲ ಜ್ಞಾನಿಗಳಾಗಿ, ತ್ರಿವಿಧ ದಾಸೋಹಿಗಳಾಗಿದ್ದು ಹಂಪೆಯ ಅರಸರಿಂದ ಗೌರವಿಸಲ್ಪಟ್ಟವರು. ಹಾಗೂ ಕೆಲಕಾಲ ಮೈಸೂರುಅರಮನೆಯ ಆಸ್ಥಾನ ಪಂಡಿತರಾಗಿದ್ದರು. ಶ್ರೀಗಳು 1960ರ ಏಪ್ರಿಲ್ 6ರಲ್ಲಿ ಲಿಂಗೈಕ್ಯರಾಗಿದ್ದುಇವರ ಸಮಾಧಿಯು ದೊಡ್ಡಸಿದ್ದವ್ವನ ಹಳ್ಳಿಯಲ್ಲಿ ಸ್ಥಾಪಿತಗೊಂಡಿದೆ. ಪ್ರಸ್ತುತ ಮಸೂತಿಯಶ್ರೀ ಜಗದೀಶ್ವರ ಹಿರೇಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1969
Place :
ಕೂಡಿಗಿ, ಬಸವನಬಾಗೇವಾಡಿ ತಾ||
Pattadikara :
16-5-1991
Photo :

Programs

ಚೈತ್ರ ಮಾಸದಲ್ಲಿ ಲಿಂ. ಶ್ರೀ ಗುರುಬಸವಲಿಂಗ ಸ್ವಾಮಿಗಳ ಪುಣ್ಯಾರಾಧನೆ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಗುರು ಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ
ದೊಡ್ಡಸಿದ್ದವ್ವನ ಹಳ್ಳಿ - 577 524
ಚಿತ್ರದುರ್ಗ ತಾ||, ಜಿ||

Map

Near by Places

ಎನ್.ಹೆಚ್.-4 - 3 ಕಿ.ಮೀ.
ಚಿತ್ರದುರ್ಗ - 12 ಕಿ.ಮೀ.
ಹಿರಿಯೂರು - 40 ಕಿ.ಮೀ.

Statistic

56 Views
0 Rating
0 Favorite
0 Share
error: Content is protected !!