ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ 15ನೇ ಶತಮಾನವೆಂದರೆ ಅದುಪರ್ವಕಾಲ. ತಮ್ಮ ನೂರೊಂದು ವಿರಕ್ತ ಶಿಷ್ಯರೊಡನೆ ಸಂಚಾರ ಹೊರಟ ಶ್ರೀ ಎಡೆಯೂರುಸಿದ್ಧಲಿಂಗೇಶ್ವರರಿಂದಾಗಿ ಸಾವಿರಾರು ಮಠಗಳು ಸ್ಥಾಪನೆಗೊಂಡು ಧರ್ಮಜಾಗೃತಿ ಕೈಗೊಂಡಕಾಲಘಟ್ಟ. ಈ ರೀತಿ ಎಡೆಯೂರು ಸಿದ್ಧಲಿಂಗೇಶ್ವರರ ಕಾಲಘಟ್ಟದಲ್ಲಿ (15ನೇಶತಮಾನದಲ್ಲಿ) ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳಿಂದಾಗಿ ಭಾಲ್ಕಿ ತಾಲ್ಲೂಕಿನಸಾಯಿಗಾಂವದಲ್ಲಿ ಸ್ಥಾಪಿಸಲ್ಪಟ್ಟಿರುವ ಮಠವೇ ಶ್ರೀ ಗುರುಬಸವೇಶ್ವರ ವಿರಕ್ತಮಠ.ಸುಮಾರು 600 ವರ್ಷಗಳ ಇತಿಹಾಸವಿರುವ ಶ್ರೀಮಠದ ಇತಿಹಾಸದ ಬಗ್ಗೆಸಂಶೋಧನೆಯಾಗಬೇಕಿದೆ. ಶ್ರೀಮಠದ ಪರಂಪರೆಯನ್ನು ನಿಖರವಾಗಿ ತಿಳಿಯಲುಸಾಧ್ಯವಿಲ್ಲ. ಶ್ರೀಮಠದಲ್ಲಿರುವ 2 ಗದ್ದುಗೆಗಳ ಜೊತೆಗೆ ಊರ ಹೊರಗಿನ ಹೊಲದಲ್ಲಿಮತ್ತೆರಡು ಗದ್ದುಗೆಗಳು ಕಾಣಸಿಗುತ್ತಿದ್ದು ಇನ್ನುಳಿದ ಗದ್ದುಗೆಗಳ ಬಗ್ಗೆ ತಿಳಿದುಬರುವುದಿಲ್ಲ.ಆದ್ದರಿಂದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಬಸವ ಸ್ವಾಮಿಗಳುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1969ರಲ್ಲಿ ಲಿಂಗೈಕ್ಯರಾಗಿದ್ದು ಆನಂತರ ಶ್ರೀಮಠವುಮೂರೂವರೆ ದಶಕಗಳ ಕಾಲ ಖಾಲಿ ಉಳಿದಿದೆ. ಆ ಸಮಯದಲ್ಲಿ ಹುಲಸೂರಿನ ಶ್ರೀಗಳುಹಾಗೂ ಭಕ್ತವರ್ಗ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದು 2005ರಜೂನ್ 26ರಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿಪ್ರ. ಶಿವಾನಂದ ಸ್ವಾಮಿಗಳನ್ನು ನೇಮಕಮಾಡಲಾಗಿದೆ.ಶ್ರೀ ಶಿವಾನಂದ ಸ್ವಾಮಿಗಳು ಶಿವಯೋಗ ಮಂದಿರದಲ್ಲಿ ಐದು ವರ್ಷ ಚಿತ್ರದುರ್ಗಮುರುಘಾಮಠದಲ್ಲಿ 3 ವರ್ಷಗಳ ಕಾಲ ಧಾರ್ಮಿಕ ಶಿಕ್ಷಣ ಪಡೆದವರಾಗಿದ್ದು ಶ್ರೀಮಠಕ್ಕೆನೇಮಕಗೊಂಡಂದಿನಿಂದ ಸರ್ವಾಂಗೀಣವಾಗಿ ಮಠವನ್ನು ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದಾರೆ. ಹಾಗೂ ಶ್ರೀಮಠದಲ್ಲಿ ಕಾರ್ತೀಕ ಮಾಸದಲ್ಲಿ ಹಿಂದಿನ ಶ್ರೀಗಳಾದ ಲಿಂ. ಶ್ರೀಮ.ನಿ.ಪ್ರ. ಗುರುಬಸವ ಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವ ನಡೆಸುತ್ತಿದ್ದು ವಿವಿಧಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು
Date of Birth :
26-6-1981
Place :
ಬೆಲ್ಲಳ್ಳಿ, ಭಾಲ್ಕಿ ತಾ||
Pattadikara :
26-6-2005
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಪ್ರವಚನ.
ಪ್ರತಿ ಸೋಮವಾರ ಭಜನೆ. ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಭಜನೆ.
ಕಾರ್ತೀಕ ಮಾಸದಲ್ಲಿ ಲಿಂ. ಶ್ರೀ ಗುರುಬಸವ ಶಿವಯೋಗಿಗಳ ಪುಣ್ಯಾರಾಧನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು.
Institutions
ಶ್ರೀ ಗುರುಬಸವೇಶ್ವರ ಪ್ರಾಥಮಿಕ ಶಾಲೆ.
Photos
Full Address Kannada
ಶ್ರೀ ಗುರುಬಸವೇಶ್ವರ ವಿರಕ್ತಮಠ ಸಾಯಿಗಾಂವ,
ಹುಲಸೂರು ಪೋಸ್ಟ್ - 585 416
ಭಾಲ್ಕಿ ತಾ||, ಬೀದರ್ ಜಿ||