Shree Gurubasaveshwara Samsthana Matha

Shree Gurubasaveshwara Samsthana Matha Claimed

ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ

ಕರ್ತೃ ಶ್ರೀ ಮ.ನಿ.ಪ್ರ. ಅಲ್ಲಮಪ್ರಭು ದೇವರು

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಹುಲಸೂರು ಪಟ್ಟಣ 12ನೇಶತಮಾನದ ಶರಣ ಲದ್ದಿ ಸೋಮಣ್ಣನ ಕಾಯಕ ಕ್ಷೇತ್ರವಾಗಿದೆ. ಇಂತಹ ಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠವು ಕಲ್ಯಾಣ ನಾಡಿನ ಪ್ರಸಿದ್ಧ ಮಠಗಳಲ್ಲಿಒಂದಾಗಿದೆ. ಹನ್ನೆರಡನೇ ಶತಮಾನದಲ್ಲಿ ಶ್ರೀ ಅಲ್ಲಮ ಪ್ರಭು ದೇವರಿಂದ ಸ್ಥಾಪನೆಯಾಗಿದೆಎಂದು ಹೇಳಲಾಗುವ ಈ ಮಠಕ್ಕೆ ತುಂಬ ಸುಧೀರ್ಘವಾದ ಸಾಂಸ್ಕøತಿಕ ಪರಂಪರೆ ಇದೆ.ಶ್ರೀಮಠವು ಶರಣರ ಕಾಲದಿಂದ ಇದುವರೆಗೆ 20 ಮಠಾಧೀಶರನ್ನು ಕಂಡಿದೆ. ಈಮಠಾಧೀಶರಲ್ಲಿ 17ನೇ ಮಠಾಧೀಶರಾದ ಶ್ರೀ ಪಂಚಾಕ್ಷರಿ ಸ್ವಾಮಿಗಳವರೆಗಿನ ಪರಂಪರೆಯಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಶ್ರೀಮಠದ 18ನೇ ಮಠಾಧೀಶರಾದ ಶ್ರೀ ಮ.ನಿ.ಪ್ರ. ಗುರುಬಸವ ಸ್ವಾಮಿಗಳುತಪೋನಿಷ್ಠರಾಗಿದ್ದು ಸದಾ ಅನುಷ್ಠಾನ ಮಾಡುತ್ತಾ ಲೋಕೋದ್ಧಾರಕ್ಕಾಗಿ ಶ್ರಮಿಸಿದ್ದರು.ತಮ್ಮ ತಪಸ್ಸಿನ ಶಕ್ತಿಯಿಂದ ಅವರು ಅನೇಕ ರೋಗಿಗಳ ರೋಗಗಳನ್ನು ಶಮನ ಮಾಡಿ ಈಭಾಗದಲ್ಲೆಲ್ಲ ಹೆಸರು ಮಾಡಿದ್ದರು ಎಂದು ಹೇಳಲಾಗಿದ್ದು, ಆ ಕಾರಣದಿಂದಾಗಿಯೇಶ್ರೀಮಠವನ್ನು ಶ್ರೀಗುರು ಬಸವೇಶ್ವರ ಸಂಸ್ಥಾನ ಮಠವೆಂದು ಕರೆಯಲಾಗುತ್ತದೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಕುಮಾರ ಶಿವಯೋಗಿಗಳಿಂದಾಗಿ ಶ್ರೀಮಠವು ಹೆಚ್ಚು ಅಭಿವೃದ್ಧಿಗೊಂಡಿತು. ಆಧ್ಯಾತ್ಮದ ನೆಲೆಯಲ್ಲಿ ಬದುಕಿ ತಮ್ಮನ್ನುತಾವು ಅರಿತವರಾಗಿದ್ದ ಶ್ರೀಗಳು ಒಬ್ಬ ದೊಡ್ಡ ಅನುಭಾವಿಗಳಾಗಿದ್ದರೆಂದು ತಿಳಿದುಬರುತ್ತದೆ.ಶ್ರೀಗಳ ಜನ್ಮಕಾಲ ಹಾಗೂ ಬಾಲ್ಯದ ಬಗ್ಗೆ ಅಷ್ಟಾಗಿ ತಿಳಿದುಬರುವುದಿಲ್ಲ. ಶ್ರೀಗಳ ತಂದೆ-ತಾಯಿಯರು ಬಾಲ್ಯದಲ್ಲಿಯೇ ಶ್ರೀಗಳನ್ನು ಹಾವೇರಿಯ ಶ್ರೀ ಶಿವಬಸವ ಸ್ವಾಮಿಗಳಿಗೆ ಒಪ್ಪಿಸುತ್ತಾರೆ.ಹಾವೇರಿ ಶ್ರೀಗಳು ಬಾಲಕನನ್ನು ಮಠಾಧಿಪತಿಯ ತರಬೇತಿಗಾಗಿ ಶಿವಯೋಗಮಂದಿರಕ್ಕೆ ಕಳಿಸಿಕೊಟ್ಟರು. ಅಲ್ಲಿ ಶ್ರೀಗಳು ಆಧ್ಯಾತ್ಮ, ವಚನ ಸಾಹಿತ್ಯ, ವೈದ್ಯಶಾಸ್ತ್ರ, ಕೃಷಿ,ಗೋಸಂರಕ್ಷಣೆ, ಪಂಚಯೋಗ, ಅಷ್ಟಾಂಗಯೋಗ ಮೊದಲಾದ ವಿಷಯಗಳಲ್ಲಿ ಅಪಾರಜ್ಞಾನ ಸಂಪಾದಿಸಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಕಾಶಿಯ ಬನಾರಸ್ ವಿಶ್ವವಿದ್ಯಾಲಯಕ್ಕೆಹೋಗುವರು. ಕಾಶಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ವ್ಯಾಕರಣ, ತತ್ವಜ್ಞಾನ, ಯೋಗಮೊದಲಾದ ವಿಷಯಗಳಲ್ಲಿ ಅದಮ್ಯವಾದ ಪ್ರಭುತ್ವವನ್ನು ಸಾಧಿಸುತ್ತಾರೆ. ಇವರ ಈಸಾಧನೆಗೆ ವಿಶ್ವವಿದ್ಯಾಲಯವು ಚಿನ್ನದ ಪದಕಗಳೊಂದಿಗೆ “ಯೋಗಿರಾಜ” ಎಂಬ ಬಿರುದನ್ನುನೀಡಿ ಗೌರವಿಸಿತು. ಶ್ರೀಗಳು ಪ್ರಕಾಂಡ ಪಂಡಿತರಾಗಿ ಬನಾರಸ್ ವಿಶ್ವವಿದ್ಯಾಲಯದಿಂದಹಾವೇರಿ ಮಠಕ್ಕೆ ಹಿಂತಿರುಗಿ ಬರುತ್ತಾರೆ. ಅಲ್ಲಿ ಗುರು ಶಿವಬಸವ ಸ್ವಾಮಿಗಳ ಆಶೀರ್ವಾದಪಡೆದು ಕಲ್ಯಾಣ ನಾಡಿಗೆ ಸಂಚಾರ ಹೊರಟರು.ಹಾವೇರಿಯಿಂದ ಸುಮಾರು 1948ರ ಸುಮಾರಿಗೆ ನಾಗಣಸೂರ ಗ್ರಾಮಕ್ಕೆಆಗಮಿಸಿದ ಶ್ರೀಗಳು ಅಲ್ಲಿ ನಾಲ್ಕು ವರ್ಷಗಳ ಕಾಲ ನೆಲೆನಿಲ್ಲುತ್ತಾರೆ. ತಮ್ಮ ಅನುಪಮಜ್ಞಾನ, ಅಪಾರ ಪಾಂಡಿತ್ಯ, ಜನಹಿತ ಕಾರ್ಯಗಳ ಬಗೆಗಿನ ಕಳಕಳಿಯಿಂದಾಗಿ ನಾಗಣಸೂರಗ್ರಾಮದ ಜನರ ಮೇಲೆ ದಟ್ಟವಾದ ಪ್ರಭಾವ ಬೀರುತ್ತಾರೆ. ಅಲ್ಲಿಂದ ಮುಂದುವರೆದ ಶ್ರೀಗಳುಹುಲಿಕುಂಟೆ ಮಠದ ಶ್ರೀ ಕರಿಬಸಯ್ಯ ಸ್ವಾಮಿಗಳ ಬಿನ್ನವಕ್ಕೆ ಒಳಪಟ್ಟು ಹುಲಸೂರ ಮಠದಮಠಾದಿಪತಿಯಾಗುವುದಕ್ಕೆ ಒಪ್ಪಿಗೆ ಕೊಟ್ಟರು.ಹೀಗೆ 1952ರಲ್ಲಿ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠಕ್ಕೆ ಆಗಮಿಸಿದ ಶ್ರೀಗಳುಅವ್ಯವಸ್ಥೆಯಿಂದ ಕೂಡಿದ್ದ ಶ್ರೀಮಠವನ್ನು ವ್ಯವಸ್ಥಿತಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನುಕೈಗೊಂಡರು. ಆನಂತರ 1956ರಲ್ಲಿ ಆಂಧ್ರದ ಮೇದಕ್ ಜಿಲ್ಲೆಯ ಕೂಡಂಗಲ್ ಮಠದಜಗದ್ಗುರು ವಿರೂಪಾಕ್ಷ ಸ್ವಾಮಿಗಳು, ಬಸವಕಲ್ಯಾಣ ಗದ್ದುಗೆ ಮಠದ ಜಡೆಸ್ವಾಮಿಗಳು,ಚಿಂಚೊಳ್ಳಿಯ ಹುಲಿಕುಂಟಿ ಮಠದ ಕರಿಬಸಯ್ಯ ಸ್ವಾಮಿಗಳ ಸಮ್ಮುಖದಲ್ಲಿ ಶ್ರೀಗುರುಬಸವೇಶ್ವರ ಸಂಸ್ಥಾನ ಮಠದ ಮಠಾಧೀಶರಾಗಿ ಪಟ್ಟಾಧಿಕಾರ ಸ್ವೀಕರಿಸಿದರು.1956ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀಗಳು ನಂತರದ ಎರಡು ದಶಕಗಳಲ್ಲಿಶ್ರೀಮಠದ ಚಿತ್ರಣವನ್ನೇ ಬದಲಾಯಿಸಿದರು. ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿದರು.ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಸ್ವತಃ ಯೋಗ ಹಾಗೂ ಆಯುರ್ವೇದ ಜ್ಞಾನ ಪಡೆದು ಆಮೂಲಕ ರೋಗಿಗಳ ಭಯಾನಕ ರೋಗಗಳನ್ನು ಗುಣಪಡಿಸುತ್ತಿದ್ದರು. ಸ್ವತಃ ಸಾಹಿತಿಗಳಾಗಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಶ್ರೀಗಳ ‘ಷಟ್ಸ್ಥಳ ಜ್ಞಾನವರ್ಧಕ’ ಎಂಬ ಕೃತಿಮಾತ್ರ ನಮಗೆ ಉಪಲಬ್ಧವಾಗಿದೆ. ಹೀಗೆ ತಮ್ಮ ಅಪಾರ ಜ್ಞಾನದಿಂದ ಅವುಗಳಲ್ಲಿನಪರಿಪಕ್ವತೆಯಿಂದ, ಆಧ್ಯಾತ್ಮ ಸಿದ್ಧಿಯಿಂದ ತಮ್ಮ ಬಳಿ ಬಂದ ಭಕ್ತರ ಸಮಸ್ಯೆಗಳನ್ನುಪರಿಹರಿಸುತ್ತಿದ್ದ ಶ್ರೀ ಬಸವಕುಮಾರ ಶಿವಯೋಗಿಗಳು 1976ರ ಜನವರಿ 14ರಂದುಲಿಂಗೈಕ್ಯರಾದರು. ಲಿಂಗೈಕ್ಯರಾದಾಗ ಅವರಿಗೆ ಸುಮಾರು 65ರಿಂದ 70 ವರ್ಷವಯಸ್ಸಾಗಿತ್ತೆಂದು ಅವರೊಡನೆ ಒಡನಾಡಿದ ಅವರ ಭಕ್ತರು ಅಬಿಪ್ರಾಯಿಸುತ್ತಾರೆ.ಶ್ರೀಗಳ ಐಕ್ಯಾನಂತರ ನಾಲ್ಕು ವರ್ಷಗಳ ಕಾಲ ಖಾಲಿ ಉಳಿದಿದ್ದ ಶ್ರೀಮಠವನ್ನುಮತ್ತಷ್ಟು ಎತ್ತರಕ್ಕೆ ಕೊಂಡೊಯ್ದವರೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಾನಂದಮಹಾಸ್ವಾಮಿಗಳು. 1952ರ ಡಿಸೆಂಬರ್ 2ರಲ್ಲಿ ಜನಿಸಿದ ಶ್ರೀಗಳು ಪ್ರಾಥಮಿಕ ಶಿಕ್ಷಣದನಂತರ ಶಿವಯೋಗ ಮಂದಿರಕ್ಕೆ ತೆರಳಿ ಅಲ್ಲಿ ಆಧ್ಯಾತ್ಮ (ಧಾರ್ಮಿಕ) ಶಿಕ್ಷಣವನ್ನು ಪಡೆದುಮುಂದೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಅಭ್ಯಸಿಸುತ್ತಾರೆ. ತದನಂತರಮುಧೋಳದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಶರಣಧರ್ಮದತರಬೇತಿ ಪಡೆಯುತ್ತಾರೆ.1972ರಲ್ಲಿ ಚಿಂಚೋಳಿಯ ಮುಕರಂಬಾ ಮಠದ ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡ ಶ್ರೀಗಳು ಚಿಂಚೋಳಿ ತಾಲ್ಲೂಕಿನಾದ್ಯಂತ ತಮ್ಮ ಸಮಾಜಮುಖಿ ಕಾರ್ಯಕ್ರಮಗಳಮೂಲಕ ಹೆಸರಾದರು. 1973ರ ಬರಗಾಲದ ಸಮಯದಲ್ಲಿ ತಾಲ್ಲೂಕಿನಾದ್ಯಂತ ಗಂಜಿಕೇಂದ್ರತೆರೆದು ನಿರ್ವಹಿಸಿದ ಶ್ರೀಗಳು ಗ್ರಾಮೀಣ ಪ್ರದೇಶ ಮತ್ತು ಸುತ್ತಲಿನ ತಾಂಡಾದಲ್ಲಿರುವಮಕ್ಕಳಿಗೆ, ನಿರಕ್ಷರಿಗಳಿಗೆ ಸಂಚಾರಿ ಕನ್ನಡ ಶಿಕ್ಷಣ ನೀಡಿದ್ದಾರೆ. 1980ರಲ್ಲಿ ಹುಲಸೂರಿನ ಶ್ರೀಗುರುಬಸವೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡ ಶ್ರೀಗಳು 1981ರಫೆಬ್ರವರಿ 9ರಂದು ಪಟ್ಟಾಧಿಕಾರ ಸ್ವೀಕರಿಸಿದರು. ಅಲ್ಲಿಂದ ಮುಂದೆ ಈ ಮೂರೂವರೆದಶಕಗಳಲ್ಲಿ ಶ್ರೀಮಠವನ್ನು ನಾಡಿನಾದ್ಯಂತ ಪ್ರಚುರಗೊಳಿಸಿರುವ ಶ್ರೀಗಳು ಶ್ರೀಮಠದಸವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.1982ರಲ್ಲಿ ಕರ್ನಾಟಕಾಂಧ್ರ, ಮಹಾರಾಷ್ಟ್ರ ಗಡಿಭಾಗದ ಹಳ್ಳಿಗಳಲ್ಲಿ ವ್ಯಸನಮುಕ್ತಸಮಾಜಕ್ಕೋಸ್ಕರ ಪಾದಯಾತ್ರೆ ಕೈಗೊಂಡ ಶ್ರೀಗಳು 1993ರಲ್ಲಿ ಖಿಲಾರಿ ಭೂಕಂಪದಸಂತ್ರಸ್ತರಿಗಾಗಿ ಮತ್ತೊಮ್ಮೆ ಪಾದಯಾತ್ರೆ ಕೈಗೊಂಡರು. ಪಟ್ಟಕ್ಕೆ ಬಂದಂದಿನಿಂದ ಸತತವಾಗಿದುಶ್ಚಟಗಳ ನಿರ್ಮೂಲನೆಗಾಗಿ ಜನಜಾಗೃತಿ ಮಾಡುತ್ತಿರುವ ಶ್ರೀಗಳು ಬಸವಜಯಂತಿಸಂದರ್ಭದಲ್ಲಿ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. 2009ರಲ್ಲಿ ಬಸವಕಲ್ಯಾಣದಿಂದ ಶ್ರೀಶೈಲದ ಕದಳಿವನದವರೆಗೆಪಾದಯಾತ್ರೆ ಕೈಗೊಂಡು ಕದಳಿಯಲ್ಲಿ ಅಕ್ಕಮಹಾದೇವಿ ಮಹಿಳಾ ಸಮ್ಮೇಳನ ಜರುಗಿಸಿದಶ್ರೀಗಳು ಕನ್ನಡ ನಾಡು-ನುಡಿ-ಸಂಸ್ಕøತಿಯ ಉಳಿವಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಹಿಂದಿನಶ್ರೀಗಳು ಪ್ರಾರಂಭಿಸಿದ್ದ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿರುವ ಶ್ರೀಗಳು ಸ್ವತಃ ಸಾಹಿತಿಗಳಾಗಿ ಹಲವಾರು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಹಾಗೂ ತಮ್ಮದೇ ವಿಶ್ವಗುರು ಬಸವಧರ್ಮ ಪ್ರಚಾರ ಕೇಂದ್ರ-ಹುಲಸೂರಿನಿಂದ ಹಲವಾರು ಉತ್ತಮ ಕೃತಿಗಳನ್ನು ಪ್ರಕಾಶಿಸಿದ್ದಾರೆ.2000ದ ಇಸವಿಯಲ್ಲಿ ಅಮೇರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ವಿಶ್ವವೀರಶೈವ ಸಮ್ಮೇಳನದಲ್ಲಿ ಭಾಗವಹಿಸಿ ವಿಶ್ವದ ಮುಂದೆ ಬಸವ ತತ್ವದ ಮಹತ್ವವನ್ನು ತೆರೆದಿಟ್ಟಶ್ರೀಗಳು ಇಂಗ್ಲೆಂಡ್, ಸಿಂಗಾಪುರ, ಫ್ರಾನ್ಸ್ ಸೇರಿದಂತೆ 16 ದೇಶಗಳಲ್ಲಿ ಬಸವ ಸಂದೇಶವನ್ನುಹೊತ್ತು ಬಸವ ತತ್ವ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ.ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ:ಶ್ರೀ ಶಿವಾನಂದ ಮಹಾಸ್ವಾಮಿಗಳ ನೂರಾರು ಸಾಧನೆಗಳಲ್ಲಿ ಮಹತ್ವದ್ದು 2011ರಲ್ಲಿಶ್ರೀಗಳು ಕೈಗೊಂಡ ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ. ದಿನಾಂಕ 7-3-2011ರಂದುಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ ಪ್ರಾರಂಭಿಸಿದ ಶ್ರೀಗಳು ಬಸವಕಲ್ಯಾಣದಿಂದಕಾಶ್ಮೀರ, ಕಾಶ್ಮೀರದಿಂದ ಕನ್ಯಾಕುಮಾರಿ, ಕನ್ಯಾಕುಮಾರಿಯಿಂದ ಬಸವಕಲ್ಯಾಣದವರೆಗೆಕಾಲ್ನಡಿಗೆಯಲ್ಲಿ 7 ತಿಂಗಳ ಕಾಲ ನಿರಂತರ 9 ಸಾವಿರ ಕಿ.ಮೀ. ಪಾದಯಾತ್ರೆ ಮೂಲಕಸಂಚರಿಸಿ ಬಸವಜ್ಯೋತಿ ಮೂಲಕ ಮನೆಮನಕ್ಕೆ ಬಸವ ಸಂದೇಶ ಮುಟ್ಟಿಸಿದರು.ಶ್ರೀಮಠದಿಂದ 17 ಲಕ್ಷ ವೆಚ್ಚ ಮಾಡಿ ಹಿಂದಿ, ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಶರಣರತತ್ವಗಳನ್ನು ಮುದ್ರಿಸಿ ಗ್ರಂಥಗಳನ್ನು ಉಚಿತವಾಗಿ ಹಂಚಿದರು. ಹಿಂದಿ ಭಾಷೆಯಲ್ಲಿ 10ಸಾವಿರ ವಚನಗಳ ಸಿ.ಡಿ. ಗಳನ್ನು ತಯಾರಿಸಿ ಖ್ಯಾತ ಗಾಯಕರಿಂದ ವಚನಗಳನ್ನು ಹಾಡಿಸಿಉಚಿತವಾಗಿ ಹಂಚಿದ್ದಾರೆ. ಈ ರೀತಿಯಾಗಿ ತಮ್ಮ ನೂರಾರು ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅಸಂಖ್ಯ ಭಕ್ತರಿಗೆ ಬಸವ ಸಂದೇಶ ಸಾರಿ ಸನ್ಮಾರ್ಗತೋರಿರುವ ಶ್ರೀಗಳು ಶ್ರೀಮಠದ ಜೊತೆಯಲ್ಲಿ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು
Date of Birth :
2-12-1952
Place :
ನಿಂಗಾಪುರ ಮುಧೋಳ ತಾ||
Pattadikara :
9-2-1981
Photo :

Programs

ಪ್ರತಿ ನಿತ್ಯ ಸಾಮೂಹಿಕ ಪ್ರಾರ್ಥನೆ. ಪ್ರತಿ ಸೋಮವಾರ ಭಜನೆ. ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಭಜನೆ ಹಾಗೂ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ವಚನಾಭಿಷೇಕ, ಭಜನೆ, ಪುರಾಣ ಪ್ರವಚನ ಹಾಗೂ ಕೊನೇ ದಿನ ಶ್ರೀ ಗುರುಬಸವೇಶ್ವರ ಪಲ್ಲಕಿ ಮಹೋತ್ಸವ.
ಪುಷ್ಯ ಶುದ್ಧ ಧಶಮಿ, ಏಕಾದಶಿ, ದ್ವಾದಶಿಗೆ ಶರಣ ಸಂಸ್ಕøತಿ ಉತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.

Photos

Full Address Kannada

ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ
ಹುಲಸೂರು - 585 416
ಬಸವಕಲ್ಯಾಣ ತಾ||, ಬೀದರ್ ಜಿ||

Map

Near by Places

ಬೀದರ್ - 9 ಕಿ.ಮೀ.
ಬಸವಕಲ್ಯಾಣ - 15 ಕಿ.ಮೀ.
ಹುಮನಾಬಾದ್ - 35 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!