ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಕೇಂದ್ರದಿಂದ 14 ಕಿ.ಮೀ.ದೂರದಲ್ಲಿರುವ ಅತನೂರು ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಗುರುಬಸವೇಶ್ವರ ಸಂಸ್ಥಾನ ಹಿರೇಮಠವು ಪುರಾತನ ಕಾಲದ ಮಠವಾಗಿದ್ದು 12ನೇಶತಮಾನಕ್ಕೂ ಪೂರ್ವದಲ್ಲೇ ಅಸ್ತಿತ್ತ್ವದಲ್ಲಿತ್ತೆಂದು ಹೇಳಲಾಗಿದೆ. ಇದಕ್ಕೆ ಪುರಾವೆಯಾಗಿಒಂದು ತಾಮ್ರಶಾಸನ ಮಠದಲ್ಲಿದ್ದು ಶಾಸನದ ಕಾಲಮಾನ ಕ್ರಿ.ಶ. 1114.ಶ್ರೀಮದ್ ಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಗುರುಬಸವೇಶ್ವರ ಸಂಸ್ಥಾನ ಹಿರೇಮಠದ ಕರ್ತೃ ಗುರುಗಳೆಂದುಪೂಜ್ಯ ಶ್ರೀ ಗುರುಬಸವ ಶಿವಯೋಗಿಗಳನ್ನು ಗುರುತಿಸಲಾಗಿದ್ದು ಇವರ ಗದ್ದುಗೆಯುಶ್ರೀಮಠದಲ್ಲಿದೆ. ಆದರೆ ಕರ್ತೃ ಗುರುಗಳ ಕುರಿತಾಗಲೀ, ಆನಂತರದ ಪರಂಪರೆಯಕುರಿತಾಗಲೀ ಮಾಹಿತಿಗಳು ಲಭ್ಯವಿಲ್ಲವಾಗಿದೆ. ಶ್ರೀ ಮಠದಲ್ಲಿ ಕರ್ತೃ ಗುರುಗಳ ಗದ್ದುಗೆಜೊತೆಗೆ ಇನ್ನೊಂದು ಗದ್ದುಗೆ ಕಾಣಸಿಗುತ್ತಿದ್ದು ಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಎಂದು ಹೆಸರಿಸಲಾಗಿದೆ. ಈ ಎರಡೂ ಗದ್ದುಗೆಗಳಿಗೂ ನಿತ್ಯ ಪೂಜೆ ನಡೆಸಲಾಗುತ್ತಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ಗುರುಬಸವ ಶಿವಾಚಾರ್ಯ ಸ್ವಾಮಿಗಳುಇದೇ ಗ್ರಾಮದವರಾಗಿದ್ದು ದೀರ್ಘಕಾಲದಿಂದ ಖಾಲಿ ಉಳಿದಿದ್ದ ಪುತ್ರವರ್ಗದಪರಂಪರೆಯ ಶ್ರೀಮಠಕ್ಕೆ 2013ರ ಮೇ 13ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡರು.ದೀರ್ಘಕಾಲದಿಂದ ಮಠ ಖಾಲಿ ಉಳಿದಿದ್ದನ್ನು ಕಂಡ ಗ್ರಾಮದ ಭಕ್ತರು ಈಗಿನ ಶ್ರೀಗಳನ್ನುನೇಮಕಗೊಳಿಸಿ ಸೊಲ್ಲಾಪುರ ಜಿಲ್ಲೆ ಮಾಳಕೊಟ್ಟ ಬೃಹನ್ಮಠದ ಶ್ರೀ ಷ.ಬ್ರ. ಪಂಚಾಕ್ಷರಿಶಿವಾಚಾರ್ಯ ಮಹಾಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹವನ್ನು ಕೊಡಿಸಿದರು.ಶ್ರೀ ಷ.ಬ್ರ. ಅಭಿನವ ಗುರುಬಸವ ಶಿವಾಚಾರ್ಯರು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಅಭಿವೃದ್ದಿಪಥದತ ್ತ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಮೈಸೂರುವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀದರರಾಗಿದ್ದು, ಹುಬ್ಬಳ್ಳಿಯ ಮೂರುಸಾವಿರಮಠ & ಮೈಸೂರು ಬೆಟ್ಟದಪುರ ಮಠಗಳಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದಿದ್ದಾರೆ. ಶ್ರೀಗಳುತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಗುರುಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
18-08-1987
Place :
ಅತನೂರು, ಅಫಜಲಪುರ ತಾ||
Pattadikara :
13-05-2013
Photo :
Programs
ಪ್ರತಿ ಅಮವಾಸ್ಯೆಗೆ ಭಜನೆ ಪ್ರತಿ ಸೋಮವಾರ ಭಜನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಭಜನೆ ಯುಗಾದಿ ಆದ ನಂತರ ಪಂಚಮಿಗೆ ಕರ್ತೃ ಗುರುಗಳ ಪುಣ್ಯಾರಾಧನೆ ನಿಮಿತ್ಯ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಗುರುಬಸವೇಶ್ವರ ಸಂಸ್ಥಾನ ಹಿರೇಮಠ
ಅತನೂರು - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ