Shree Guru Tipperudraswami Devasthana, Nayakanahatti
Claimed
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ
Average Reviews
Description
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ
ಶ್ರೀಮನ್ನಿರಂಜನ ಷಟ್ಸ್ಥಲ ಅಷ್ಟಾವರ್ಣ ಮಹಾತತ್ವೋಪದೇಶಿ ಶ್ರೀ ಗುರು ತಿಪ್ಪೇರುದ್ರ ಮಹಾಸ್ವಾಮಿಗಳು
ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ತಮ್ಮ ಸಹಶರಣರೊಂದಿಗೆ ಲೋಕ ಸಂಚಾರ ಕೈಗೊಂಡು ಕುಪ್ಪಿನ ಕೆರೆಯ ಶ್ರೀ ಆಂಜನೇಯನಿಗೆಲಿಂಗಧಾರಣೆ ಮಾಡಿ ಬಾಗಳಿಯ ಕಲ್ಲೇಶ್ವರ ದೇವಸ್ಥಾನಕ್ಕೆ ಆಗಮಿಸಿ ನಂತರ ಬೇರೆಬೇರೆಯಾಗಿ ಧರ್ಮ ಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಮತ್ತುಶ್ರೀ ಕೆಂಪಯ್ಯಸ್ವಾಮಿಗಳು ಆಂಧ್ರದ ಕಡೆಗೆ ಪ್ರಯಾಣ ಬೆಳೆಸುತ್ತಾರೆ.ಆಂಧ್ರದ ಕಡೆಗೆ ಪ್ರಯಾಣ ಬೆಳೆಸಿದ ಶ್ರೀ ಕೆಂಪಯ್ಯನವರು ಸಕಲ ಸುಖ ಭೋಗಗಳೊಂದಿಗೆ ರಾಯದುರ್ಗದಲ್ಲಿ ಮೆರೆಯುತ್ತಿರುವಾಗ ಅಲ್ಲಿಗೆ ಆಗಮಿಸುವ ಶ್ರೀ ರುದ್ರಸ್ವಾಮಿಗಳು ತಿಪ್ಪೆಯ ಮೇಲೆ ನಿಂತು ಕೆಂಪಯ್ಯನವರಿಗೆ ಜ್ಞಾನೋದಯ ಮಾಡಿಸುತ್ತಾರೆ. ಆಗ ಶ್ರೀಕೆಂಪಯ್ಯನವರು ರುದ್ರಸ್ವಾಮಿಗಳಿಗೆ ಶ್ರೀ ತಿಪ್ಪೇರುದ್ರಸ್ವಾಮಿಗಳೆಂದು ಅಭಿದಾನ ನೀಡುತ್ತಾರೆ.ಅಲ್ಲಿಂದ ಮುಂದುವರೆದ ಗುರುಗಳು ನಾಯಕನಹಟ್ಟಿಯಲ್ಲಿ ಬಂದು ನೆಲೆನಿಲ್ಲುತ್ತಾರೆ.ನಾಯಕನಹಟ್ಟಿಗೆ ಬರುವ ಶ್ರೀ ತಿಪ್ಪೇರುದ್ರಸ್ವಾಮಿಗಳು ತಮ್ಮ ಪವಾಡಗಳಿಂದಹಾಗೂ ಕಾಯಕ ನಿಷ್ಠೆಯಿಂದ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಾರೆ. ಇವರ ತತ್ತ್ವ’ಕಾಯಕವೇ ಕೈಲಾಸ – ಮಾಡಿದಷ್ಟು ನೀಡು ಭಿಕೆ’್ಷ. ನಾಯಕಹಟ್ಟಿಯ ಹಟ್ಟಿ ಮಲ್ಲಪ್ಪನಾಯಕನು ಸ್ವಾಮಿಗಳ ಅಪ್ಪಣೆಯಂತೆ ಕೆರೆ ಕಟ್ಟಿಸುವಾಗ ಪ್ರತಿಯೊಬ್ಬ ಕೂಲಿಯಾಳುವಿಗೂಶ್ರೀಗಳು ಮರಳುಗುಪ್ಪೆ ಮಾಡಿಸಿ ಅದಕ್ಕೆ ತಮ್ಮ ಬೆತ್ತವನ್ನು ಸ್ಪರ್ಶಿಸಿದಾಗ ಯಾರ್ಯಾರು ಎಷ್ಟೆಷ್ಟುಶ್ರಮ ವಹಿಸಿದ್ದರೋ ಅಷ್ಟಷ್ಟೇ ಹಣ ದೊರೆಯುತ್ತದೆ ಇದುವೇ ಶ್ರೀಗಳ ತತ್ತ್ವಕ್ಕೆ ಉದಾಹರಣೆ.ಹೀಗೆ ಶ್ರೀಗಳು ಊರಿನ ಉದ್ಧಾರಕ್ಕಾಗಿ ಉಪಯುಕ್ತ ಜನಹಿತ ಕಾರ್ಯಗಳನ್ನುಮಾಡುತ್ತಾ ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಜನತೆಯ ತನುಮನಗಳಲ್ಲಿ ಆರಾಧ್ಯರಾದರು, ದೈವಸ್ವರೂಪರಾದರು. ಶ್ರೀಗಳ ಸಮಾಧಿಗದ್ದುಗೆಯು ನಾಯಕನಹಟ್ಟಿಯ ಹೊರಮಠದಲ್ಲಿದ್ದುಪೂಜನೀಯವಾಗಿದೆ. ಹಾಗೂ ಶ್ರೀಗಳು ಪವಾಡ ತೋರಿದಒಳಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಜರುಗುವ ರಥೋತ್ಸವಕ್ಕೆ ನಾಡಿನಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.
Swamiji
Swamiji Name :
ಶ್ರೀಮನ್ನಿರಂಜನ ಷಟ್ಸ್ಥಲ ಅಷ್ಟಾವರ್ಣ ಮಹಾತತ್ವೋಪದೇಶಿ ಶ್ರೀ ಗುರು ತಿಪ್ಪೇರುದ್ರ ಮಹಾಸ್ವಾಮಿಗಳು
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಮಾರ್ಗಶಿರ ಮಾಸದಲ್ಲಿ ಲಕ್ಷದೀಪೋತ್ಸವ ಹಾಗೂ ದೊಡ್ಡ ಕಾರ್ತೀಕೋತ್ಸವ.
ಫಾಲ್ಗುಣ ಮಾಸ ಚಿತ್ತಾ ನಕ್ಷತ್ರದಲ್ಲಿ ದೊಡ್ಡ ರಥೋತ್ಸವ, ಹಾಗೂ ಒಂದು ವಾರಗಳ ಅದ್ದೂರಿ ಜಾತ್ರೆ. ಒಂದು ತಿಂಗಳ ನಂತರ ಮರುಜಾತ್ರೆಯೆಂಬ ಸಣ್ಣ ಜಾತ್ರೆ.
Photos
Full Address Kannada
ಶ್ರೀ ಪುಣ್ಯಕ್ಷೇತ್ರ ನಾಯಕನಹಟ್ಟಿ
ಚಳ್ಳಕೆರೆ ತಾ||, ಚಿತ್ರದುರ್ಗ ಜಿ||