Shree Guru Sangameshwara Samsthana Matha – Tonasanahalli (S)

Shree Guru Sangameshwara Samsthana Matha – Tonasanahalli (S) Claimed

ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠ - ತೋನಸನಹಳ್ಳಿ (ಎಸ್)

Average Reviews

Description

ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠ – ತೋನಸನಹಳ್ಳಿ (ಎಸ್)

ಕರ್ತೃ ಪೂಜ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ತೋನಸನಹಳ್ಳಿ (ಎಸ್) ಗ್ರಾಮವುತಾಲ್ಲೂಕು ಕೇಂದ್ರದಿಂದ 20ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀ.ಸಂಗಮೇಶ್ವರ ಮಹಾಸ್ವಾಮಿಗಳು. ಶ್ರೀಮಠವನ್ನು ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳುಸ್ಥಾಪಿಸಿದ್ದರಿಂದ ಶ್ರೀಮಠಕ್ಕೆ ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠವೆಂಬ ಹೆಸರುಬಂದಿದೆ.ಕರ್ತೃಗುರುಗಳ ಕಾಲಮಾನ ಹಾಗೂ ನಂತರದ ಪರಂಪರೆಯ ಬಗ್ಗೆನಿಖರತೆಯಿಲ್ಲ. ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ರೇಣುಕ ಶಿವಾಚಾರ್ಯಮಾಹಾಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದು ಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದುತದನಂತರ ಆಳಂದ ತಾಲ್ಲೂಕಿನ ದೇವಂತಿಗೆ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಠಕ್ಕೆಪಟ್ಟಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಪ್ರಸ್ತುತ ಶ್ರೀಗಳಾದ ಶ್ರೀ.ಷ.ಬ್ರ. ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯಸ್ವಾಮಿಗಳು 2008ರ ಏಪ್ರಿಲ್ 30ರಂದು ಶ್ರೀಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದುಶ್ರೀಮಠವನ್ನು ಅಭಿವೃದ್ದಿಪಥದತ್ತ ಮುನ್ನಡೆಸಿದ್ದಾರೆ. ಶ್ರೀಗಳು ಶ್ರೀಶೈಲದ ವೀರಶೈವಗುರುಕುಲ ಹಾಗೂ ರಂಭಾಪುರಿ ಪೀಠಗಳಲ್ಲಿ ಸಂಸ್ಕøತ, ವೇದವನ್ನು ಆಳವಾಗಿ ಅಭ್ಯಸಿಸಿದ್ದುಸುಮಾರು ಐದು ವರ್ಷಗಳ ಕಾಲ ಗದಗದಲ್ಲಿ ಸಂಸ್ಕøತ ಪಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ವರ್ಷ ಏಪ್ರಿಲ್25ರಿಂದ 30ರವರೆಗೆ ತಮ್ಮ ಪಟ್ಟಾಭಿಷೇಕದ ವರ್ದಂತಿ ಮಹೋತ್ಸವವನ್ನು ಆಚರಿಸುತ್ತಿದ್ದುಪುರಾಣ ಪ್ರವಚನ ಹೇಳಿಸುತ್ತಿದ್ದಾರೆ. ಹಾಗೂ ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ,ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ಮತ್ತು ಕೊನೆಯ ದಿನಧರ್ಮಸಭೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1-10-1982
Place :
ಕಂಚಿನಕವಿ, ಶಹಾಪುರ ತಾ||
Pattadikara :
30-4-2008
Photo :

Programs

ದಸರದಲ್ಲಿ ಶ್ರೀದೇವಿ ಪುರಾಣ ಪಾರಾಯಣ ಏಪ್ರಿಲ್ 15 ರಿಂದ 30ರವೆಗೆ ಪುರಾಣ ಪ್ರವಚನ, ಈಗಿನ ಶ್ರೀಗಳ ವರ್ದಂತಿ ಮಹೋತ್ಸವ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ಮತ್ತು ಕೊನೆಯ ದಿನ ಧರ್ಮ ಸಭೆ ಹಾಗೂ ಸಂಗಮೇಶ್ವರ ಅಕ್ಕನ ಬಳಗದಿಂದ ಭಜನೆ

Institutions

ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ ಸಂಸ್ಕøತ ವೇದ ಪಾಠಶಾಲೆ

Photos

Full Address Kannada

ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠ
ತೋನಸನಹಳ್ಳಿ (ಎಸ್) - 585 228
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಶಹಬಾದ್ - 6 ಕಿ.ಮೀ.
ಜೇವರ್ಗಿ - 20 ಕಿ.ಮೀ.
ಚಿತ್ತಾಪುರ - 20 ಕಿ.ಮೀ.
ಕಲಬುರಗಿ - 30 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!