ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ 40ಕಿ.ಮೀ.ದೂರದಲ್ಲಿರುವ ಸೂಗೂರು. ಕೆ. ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗುರುರುದ್ರಮುನೀಶ್ವರ ಸಂಸ್ಥಾನ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಗ್ರಾಮದಲ್ಲಿಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠವು ಶ್ರೀಮದ್ ಉಜ್ಜಿಯಿನಿ ಪೀಠದಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠದ ಮೂಲ ಕರ್ತೃಗುರುಗಳಾದ ಶ್ರೀ.ಷ.ಬ್ರ. ಚನ್ನಬಸವ ಶಿವಾಚಾರ್ಯಮಹಾಸ್ವಾಮಿಗಳು ಸ್ವತಃ ಕಾಯಕಯೋಗಿಗಳಾಗಿದ್ದರು. ಇವರು ಹೆಚ್ಚಾಗಿ ಈ ಊರಿಗೆ ಐದುಕಿ.ಮೀ. ದೂರದಲ್ಲಿರುವ ಐದು ಎಕರೆ ಹೊಲದಲ್ಲಿ ಕಾಯಕ ಮಾಡಿಕೊಂಡು ಅಲ್ಲಿಯೂಒಂದು ಮಠವನ್ನು ಸ್ಥಾಪಿಸಿಕೊಂಡಿದ್ದರು. ಶ್ರೀಗಳು ಅಲ್ಲಿ ಕಾಯಕ ಮಾಡಿಕೊಂಡು ಆಗಾಗಇಲ್ಲಿಗೆ ಬಂದು ಮಠದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಹೀಗೆ ತಮ್ಮ ಕಾಯಕತತ್ತ್ವದಿಂದ ಪ್ರಸಿದ್ದಗೊಂಡಿದ್ದ ಕರ್ತೃಗಳು ಅಲ್ಲಿಯೇ ಗುಹೆಯನ್ನು ತಾವೇ ಸ್ವತಃ ತೆಗೆದುಅದರಲ್ಲಿಯೇ ಲಿಂಗೈಕ್ಯರಾದರು.ಈ ರೀತಿಯಾಗಿ ಸ್ಥಾಪಿತಗೊಂಡ ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 9ಜನ ಶ್ರೀಗಳು ಪಟ್ಟಕ್ಕೆ ಬಂದಿದ್ದಾರೆ. ಅವರಲ್ಲಿ 6 ಜನ ಶ್ರೀಗಳ ಗದ್ದುಗೆಗಳನ್ನು ಕರ್ತೃಗುರುಗಳುಐಕ್ಯಗೊಂಡ ಮಠದಲ್ಲಿಯೇ ಕಾಣಬಹುದಾಗಿದ್ದು ಇನ್ನುಳಿದ ಎರಡು ಗದ್ದುಗೆಗಳು ಇಲ್ಲಿನಶ್ರೀಮಠದಲ್ಲಿವೆ. ಹಿಂದಿನ ಗುರುಗಳಾದ ಲಿಂ. ಶ್ರೀ.ಷ.ಬ್ರ. ರುದ್ರಮುನಿ ಶಿವಾಚಾರ್ಯಮಹಾಸ್ವಾಮಿಗಳು ಸುಧೀರ್ಘ 60 ವರ್ಷಗಳ ಕಾಲ ಶ್ರೀಮಠದ ಅಧಿಕಾರದಲ್ಲಿದ್ದರೂ ಸದಾಸಂಚಾರದಲ್ಲಿರುತ್ತಿದ್ದರು. ಶ್ರೀಗಳು ತಮ್ಮ ಕೊನೆಗಾಲದಲ್ಲಿ ಶ್ರೀಮಠಕ್ಕೆ ಮರಳಿ 2006ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು ಹುಕ್ಕೇರಿ ತಾಲ್ಲೂಕಿನಗೊಟ್ಟೂರು ಗ್ರಾಮದವರಾಗಿದ್ದು ಮೈಸೂರಿನ ಸುತ್ತೂರು ಮಠದಲ್ಲಿ ಪ್ರೌಢ ಶಿಕ್ಷಣದಿಂದಪದವಿ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದರು ಹಾಗೂ ಶಿವಯೋಗ ಮಧಿರದಲ್ಲಿ9 ವರ್ಷಗಳ ಕಾಲ ಆದ್ಯಾತ್ಮ ಶಿಕ್ಷಣವನ್ನು ಅಭ್ಯಸಿಸಿದ್ದು 2009ರ ಆಗಸ್ಟ್ 9ರಲ್ಲಿ ಶ್ರೀಮಠದಉತ್ತರಾದಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಶ್ರೀಗಳು ಶ್ರೀಮಠದ ಸರ್ವತೋಮುಖಅಭಿವೃದ್ದಿಗೆ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು
Date of Birth :
18-11-1986
Place :
ಗೊಟ್ಟೂರು, ಹುಕ್ಕೇರಿ ತಾ||
Photo :
Programs
ದವನದ ಹುಣ್ಣಿಮೆಗೆ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಗುರು ರುದ್ರಮುನೀಶ್ವರ ಸಂಸ್ಥಾನ ಮಠ
ಸೂಗೂರು. ಕೆ. - 585 322
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ